ನವಲಗುಂದ:ದಾಖಲೆ ನೀಡುವ ‘ದಣಿ’ಗೇ ಇಲ್ಲ ದಾಖಲೆ: ಪುರಸಭೆ ಅತಿಕ್ರಮಣ ಬಯಲು, ಲೋಕಾಯುಕ್ತ ಮೆಟ್ಟಿಲೇರಿದ ಪ್ರಕರಣ
ನವಲಗುಂದ: ಸಾರ್ವಜನಿಕರ ಮನೆಗಳಿಗೆ ಸಣ್ಣ ದಾಖಲೆ ತಪ್ಪಾದರೂ ಅದು ಅಕ್ರಮ ಎಂದು ದಂಡ ವಿಧಿಸಿ ಜಪ್ತಿ ಮಾಡುವ ನವಲಗುಂದ ಪುರಸಭೆಯು, ತಾನು ಕಾರ್ಯಾಲಯ ನಡೆಸುತ್ತಿರುವ ಜಾಗಕ್ಕೆ ಯಾವುದೇ ಅಧಿಕೃತ ದಾಖಲೆ ಹೊಂದಿಲ್ಲ ಎಂಬ ಆಘಾತಕಾರಿ ಅಂಶ ಇದೀಗ ಬಯಲಾಗಿದೆ. ಈ ಸಂಬಂಧ ಪುರಸಭೆಯ ಆಡಳಿತಾತ್ಮಕ ವೈಫಲ್ಯ ಮತ್ತು ಅಧಿಕಾರ ದುರ್ಬಳಕೆಯನ್ನು ಖಂಡಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಮಾಬುಸಾಬ ಯರಗುಪ್ಪಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ಆಸ್ತಿಗಳ ಇ-ಸ್ವತ್ತು ಉತಾರ ನೀಡುವ ಕೇಂದ್ರವೇ…

