ಪಾಲಗ್ರಹಾರ ಗಣೇಶೋತ್ಸವದ ಪ್ರಸಾದ ಲಾಡು ₹1.05 ಲಕ್ಷಕ್ಕೆ ಹರಾಜು
ನಾಗಮಂಗಲ, ಸೆ.28: ತಾಲೂಕಿನ ಪಾಲಗ್ರಹಾರ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ವಿದ್ಯಾ ಗಣಪತಿ ಉತ್ಸವದ ವಿಸರ್ಜನಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ರಸಾದ ಲಾಡು ಹರಾಜು ಭಕ್ತರ ಗಮನ ಸೆಳೆಯಿತು. ಗಣೇಶೋತ್ಸವದ ಅಂಗವಾಗಿ ಸಿದ್ಧಪಡಿಸಲಾಗಿದ್ದ ಸುಮಾರು 10 ಕೆ.ಜಿ. ತೂಕದ ಲಾಡು ಪ್ರಸಾದವನ್ನು ಹರಾಜಿಗೆ ಇಡಲಾಗಿತ್ತು. ಈ ಲಾಡು ಪ್ರಸಾದವನ್ನು ₹1,05,400ಕ್ಕೆ ಮಂಜುನಾಥ್ ಗೌಡ ಅವರು ಹರಾಜಿನಲ್ಲಿ ಪಡೆದುಕೊಂಡರು. ವಿನಾಯಕನಿಗೆ ಸಮರ್ಪಿಸಲಾಗಿದ್ದ ಪ್ರಸಾದವನ್ನು ಪಡೆಯಲು ಭಕ್ತರು ಉತ್ಸಾಹದಿಂದ ಹರಾಜಿನಲ್ಲಿ ಭಾಗವಹಿಸಿದರು. ಹರಾಜಿನಲ್ಲಿ ಲಾಡು ಪ್ರಸಾದ ಪಡೆದ ಮಂಜುನಾಥ್ ಗೌಡ…

