ಹುಬ್ಬಳ್ಳಿ: ಮದುವೆಯಾಗಿ ಐದನೇ ತಿಂಗಳಲ್ಲೇ ಪತ್ನಿ ಕೊಲೆ: ಕ್ಷುಲ್ಲಕ ಜಗಳಕ್ಕೆ ಹೆಲ್ಮೆಟ್‌ನಿಂದ ತಲೆಗೆ ಹೊಡೆದು ಹತ್ಯೆ; ಪತಿ ಪರಾರಿ
ಹುಬ್ಬಳ್ಳಿ: ಮದುವೆಯಾಗಿ ನಾಲ್ಕು ತಿಂಗಳು ಪೂರ್ಣಗೊಂಡು ಐದನೇ ತಿಂಗಳು ಆರಂಭವಾಗಿದ್ದರೂ ದಾಂಪತ್ಯ ಜೀವನ ಸರಿಯಾಗಿ ಸಾಗದ ಹಿನ್ನೆಲೆ ಕ್ಷುಲ್ಲಕ ಜಗಳವೇ ಯುವತಿಯ ಜೀವ ಕಸಿದಿರುವ ಘಟನೆ ಹುಬ್ಬಳ್ಳಿ ಸಮೀಪದ ತಾರಿಹಾಳ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಮೃತೆಯನ್ನು ಇಬ್ರಾಹಿಂಪುರ ಗ್ರಾಮದ ನಾಗರತ್ನ (22) ಎಂದು ಗುರುತಿಸಲಾಗಿದೆ. ಆರೋಪಿ ಪತಿ ತಾರಿಹಾಳ ಗ್ರಾಮದ ಗಣೇಶನಗರ ನಿವಾಸಿ ಶಿವರಾಜ್ ಹುಲಿಮನಿ (28) ಎಂದು ತಿಳಿದುಬಂದಿದೆ. ನಾಲ್ಕೂವರೆ ತಿಂಗಳ ಹಿಂದೆ ಇವರಿಬ್ಬರ ವಿವಾಹ ನಡೆದಿತ್ತು. ಕುಟುಂಬದ ಮೂಲಗಳ ಪ್ರಕಾರ, ಮದುವೆಯಾದ ಬಳಿಕ…

