ಹುಬ್ಬಳ್ಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ಎಟಿಎಂಗಳಿಗೆ ಕನ್ನ; ಅಂದಾಜು ₹14 ಲಕ್ಷಕ್ಕೂ ಅಧಿಕ ಹಣ ಕಳವು

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮಗಳಲ್ಲಿ ಎಟಿಎಂಗಳಿಗೆ ಕನ್ನ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಎರಡೂ ಎಟಿಎಂಗಳಿಂದ ಅಂದಾಜು ₹14 ಲಕ್ಷಕ್ಕೂ ಅಧಿಕ ಹಣ ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ. ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ ಲಾಕ್ ಮುರಿದು ಒಳನುಗ್ಗಿದ ಕಳ್ಳರು, ಅಂದಾಜು ₹3 ಲಕ್ಷಕ್ಕೂ ಅಧಿಕ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಎಟಿಎಂಗೆ ನುಗ್ಗಿರುವ ಕಳ್ಳರು, ಹಣ ದೋಚಿದ ಬಳಿಕ ಎಟಿಎಂನ ಮುಂಭಾಗ…

Read More

ಕಾಲೇಜು ಹಾಸ್ಟೆಲ್‌ನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ದಾರುಣ ಸಾವು; ಕುಟುಂಬಸ್ಥರಿಂದ ಅನುಮಾನ, ತನಿಖೆಗೆ ಆಗ್ರಹ

ದಾವಣಗೆರೆ: ನೋಡಲು ಅಚ್ಚುಕಟ್ಟಾಗಿ, ಮುದ್ದು ಮುಖದ, ಓದಿನಲ್ಲೂ ಸದಾ ಮುಂದಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಹಾಸ್ಟೆಲ್‌ನಲ್ಲಿ ದಾರುಣವಾಗಿ ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿಗೆ ಪ್ರವೇಶ ಪಡೆದು, ಭವಿಷ್ಯದ ಬಗ್ಗೆ ಹತ್ತಾರು ಕನಸುಗಳನ್ನು ಹೊತ್ತುಕೊಂಡಿದ್ದ ಮಗಳ ಸಾವಿನಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರವತ್ತಿ ಗ್ರಾಮದ ನಿಂಗಪ್ಪ ಅವರ ಪುತ್ರಿ ರಂಜಿತಾ ಮೃತ ವಿದ್ಯಾರ್ಥಿನಿ. ದಾವಣಗೆರೆಯ ಪ್ರತಿಷ್ಠಿತ ಟೀಮ್ ಅಕಾಡೆಮಿಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಂಜಿತಾ, ನಾಲ್ಕೈದು ದಿನಗಳ ಹಿಂದಷ್ಟೇ…

Read More

ಧಾರವಾಡ:ಮರಳು ಲಾರಿ ಬಿಡಲು ₹30 ಸಾವಿರ ಲಂಚ ಆರೋಪ: ಹೆಡ್‌ಕಾನ್ಸ್‌ಟೇಬಲ್, ಹೋಮ್‌ಗಾರ್ಡ್ ಲೋಕಾಯುಕ್ತ ಬಲೆಗೆ

ಧಾರವಾಡ: ಮರಳು ಸಾಗಿಸುತ್ತಿದ್ದ ಲಾರಿಯನ್ನು ಹುಬ್ಬಳ್ಳಿ–ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ ಯಾವುದೇ ತೊಂದರೆಯಿಲ್ಲದೆ ಸಂಚರಿಸಲು ಅವಕಾಶ ನೀಡಲು ಲಾರಿ ಚಾಲಕನಿಂದ ₹30 ಸಾವಿರ ಲಂಚ ಪಡೆದ ಆರೋಪದ ಮೇಲೆ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್ ಹಾಗೂ ಹೋಮ್‌ಗಾರ್ಡ್‌ನನ್ನು ಧಾರವಾಡ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಧಾರವಾಡ ನಗರ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಹಸನ್‌ಸಾಬ ನದಾಫ್ ಹಾಗೂ ಹೋಮ್‌ಗಾರ್ಡ್ ಇಕ್ಸಾಲ್ ನದಾಫ್ ಆರೋಪಿಗಳೆಂದು ಗುರುತಿಸಲಾಗಿದೆ. ಕೊಪ್ಪಳ ಮೂಲದ ಲಾರಿ ಚಾಲಕ ಹನುಮಂತ ಅವರು…

Read More

ಧಾರವಾಡ:ಮರಳು ಲಾರಿ ಬಿಡಲು ₹30 ಸಾವಿರ ಲಂಚ ಆರೋಪ: ಹೆಡ್‌ಕಾನ್ಸ್‌ಟೇಬಲ್, ಹೋಮ್‌ಗಾರ್ಡ್ ಲೋಕಾಯುಕ್ತ ಬಲೆಗೆ

ಧಾರವಾಡ: ಮರಳು ಸಾಗಿಸುತ್ತಿದ್ದ ಲಾರಿಯನ್ನು ಹುಬ್ಬಳ್ಳಿ–ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ ಯಾವುದೇ ತೊಂದರೆಯಿಲ್ಲದೆ ಸಂಚರಿಸಲು ಅವಕಾಶ ನೀಡಲು ಲಾರಿ ಚಾಲಕನಿಂದ ₹30 ಸಾವಿರ ಲಂಚ ಪಡೆದ ಆರೋಪದ ಮೇಲೆ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್ ಹಾಗೂ ಹೋಮ್‌ಗಾರ್ಡ್‌ನನ್ನು ಧಾರವಾಡ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಧಾರವಾಡ ನಗರ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಹಸನ್‌ಸಾಬ ನದಾಫ್ ಹಾಗೂ ಹೋಮ್‌ಗಾರ್ಡ್ ಇಕ್ಸಾಲ್ ನದಾಫ್ ಆರೋಪಿಗಳೆಂದು ಗುರುತಿಸಲಾಗಿದೆ. ಕೊಪ್ಪಳ ಮೂಲದ ಲಾರಿ ಚಾಲಕ ಹನುಮಂತ ಅವರು…

Read More

ಗದಗ:ಅಕ್ರಮ ಸಂಬಂಧದ ಅಂಧಾಭಿಮಾನಕ್ಕೆ ಬಲಿಯಾಯ್ತಾ ಜೀವ? ಹಳೇ ಪ್ರೇಯಸಿಗೆ ಸನ್ನೆ ಮಾಡಿದ ಯುವಕನ ಬರ್ಬರ ಹತ್ಯೆ!

ಗದಗ: ಅಕ್ರಮ ಸಂಬಂಧ ಅನ್ನೋದು ನಿಧಾನವಾಗಿ ಮೈಯೆಲ್ಲಾ ಆವರಿಸೋ ವಿಷವಿದ್ದಂತೆ. ಕ್ಷಣಿಕ ಸುಖದ ಆಸೆಗೆ ಬಿದ್ದವರು ಕೊನೆಗೆ ಸರ್ವಸ್ವವನ್ನೂ ಕಳೆದುಕೊಳ್ಳಬೇಕಾಗುತ್ತದೆ ಅನ್ನೋದಕ್ಕೆ ಗದಗದಲ್ಲಿ ನಡೆದಿರುವ ಈ ಭೀಕರ ಘಟನೆಯೇ ಸಾಕ್ಷಿ. ಬೇಡವೆಂದು ದೂರ ಸರಿದರೂ ಬೆನ್ನುಬಿಡದ ಹಳೆ ಚಾಳಿ, ಕೊನೆಗೆ ಒಬ್ಬ ಯುವಕನ ಪ್ರಾಣವನ್ನೇ ಬಲಿ ಪಡೆದಿದೆ. ಮೋಹದ ಬಲೆಗೆ ಬಿದ್ದಿದ್ದ ವಿವಾಹಿತೆ:ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮದ ನಿವಾಸಿ ಈರಣ್ಣ ಅಗಶಿಬಾಗಿಲು ಎಂಬಾತ ವೃತ್ತಿಯಲ್ಲಿ ಕುರಿಗಾಹಿ. ಈತನ ಮನೆ ಎದುರಿಗಿದ್ದ ರೇಣುಕಾ ಎಂಬಾಕೆಯೊಂದಿಗೆ…

Read More

ತೆಲಂಗಾಣ: ‘ಬಾಬು’ ಎಂದು ಪ್ರೀತಿಯಿಂದ ಕರೆಯುತ್ತಿದ್ದ ಶಿಕ್ಷಕಿಯನ್ನೇ 27 ಬಾರಿ ಇರಿದು ಹತ್ಯೆ; 16 ವರ್ಷದ ವಿದ್ಯಾರ್ಥಿಗಳ ಕೃತ್ಯಕ್ಕೆ ಬೆಚ್ಚಿಬಿದ್ದ ಸಮಾಜ

ನಲ್ಗೊಂಡ: ಸಾಯುವ ಕ್ಷಣದಲ್ಲೂ ಪ್ರೀತಿಯಿಂದ ‘ಬಾಬು’ ಎಂದು ಕರೆಯುತ್ತಿದ್ದ ಗುರುವನ್ನು ಹಣದ ಆಸೆ ಹಾಗೂ ಹಳೆಯ ದ್ವೇಷಕ್ಕಾಗಿ ಅದೇ ಶಾಲೆಯ ವಿದ್ಯಾರ್ಥಿಗಳೇ ಚಾಕುವಿನಿಂದ 27 ಬಾರಿ ಇರಿದು ಹತ್ಯೆ ಮಾಡಿರುವ ಭಯಾನಕ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಖಾಸಗಿ ಶಾಲೆಯ 48 ವರ್ಷದ ಪ್ರಾಂಶುಪಾಲೆ ಕಲ್ಲು ರೂಪಾ ರೆಡ್ಡಿ ಹತ್ಯೆಯಾದವರು. ಪೊಲೀಸರ ತನಿಖೆಯ ಪ್ರಕಾರ, 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಹಣದ ಆಸೆ ಹಾಗೂ ಹಳೆಯ ವೈಷಮ್ಯದಿಂದ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇಬ್ಬರೂ…

Read More

ಡಾವಣಗೇರಿ:ಅಪ್ಪ ನದಿಯ ಪಾಲು, ಅಮ್ಮ ಜೈಲು ಪಾಲು: ಅಕ್ರಮ ಸಂಬಂಧದ ಅಮಲಿಗೆ ಬಲಿಯಾದ ಮುಗ್ಧ ಸಂಸಾರ!

ಡಾವಣಗೇರಿ: ಶಾಲೆಯ ಯೂನಿಫಾರ್ಮ್ ಕಳಚದೆ, ಅಜ್ಜಿಯ ಎದೆಗಪ್ಪಿಕೊಂಡು ಏನೂ ಅರಿಯದಂತೆ ನೋಡುತ್ತಿರುವ ಇಬ್ಬರು ಪುಟ್ಟ ಕಂದಮ್ಮಗಳು… “ನನ್ನ ಮಗನನ್ನು ತಂದುಕೊಡಿ” ಎಂದು ಎದೆ ಬಡಿದುಕೊಳ್ಳುತ್ತಿರುವ ಹೆತ್ತವ್ವಳ ರೋಧನ… ಇಡೀ ಊರನ್ನೇ ಆವರಿಸಿರುವ ಸ್ಮಶಾನ ಮೌನ. ದಾವಣಗೆರೆಯ ಪಾಮೇನಹಳ್ಳಿಯಲ್ಲಿ ನಡೆದಿರುವ ಈ ದುರಂತ, ಎಂಥವರ ಕರುಳನ್ನೂ ಹಿಂಡಿ ಹಿಪ್ಪೆ ಮಾಡುತ್ತದೆ. 12 ವರ್ಷಗಳ ಪ್ರೀತಿಗೆ ಪ್ರಿಯಕರನೇ ಮುಖ್ಯವಾದನೇ? ಹನ್ನೆರಡು ವರ್ಷಗಳ ಹಿಂದೆ ಪ್ರೀತಿಸಿ ಕೈಹಿಡಿದವಳು ಶೃತಿ. ಕೂಲಿ ನಾಲಿ ಮಾಡಿ ಬೆವರು ಸುರಿಸುತ್ತಿದ್ದ ರಘು (36), ಆಕೆಯನ್ನು ಕಣ್ಣಲ್ಲಿ…

Read More

ಅತ್ಯಾಚಾರ, ಅಕ್ರಮ ಗರ್ಭಪಾತ: ಆರ್‌ಎಂಪಿ ವೈದ್ಯ, ನರ್ಸ್ ಸೇರಿ 7 ಮಂದಿ ಬಂಧನ

ಗದಗ: 26 ವರ್ಷದ ಯುವತಿಯ ಮೇಲೆ ವಿವಿಧ ದಿನಗಳಲ್ಲಿ ಅತ್ಯಾಚಾರ ಎಸಗಿ, ಆಕೆ ಗರ್ಭಿಣಿಯಾದ ಬಳಿಕ ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಿದ ಆರೋಪದಡಿ ಆರ್‌ಎಂಪಿ ವೈದ್ಯ ಹಾಗೂ ಸ್ಟಾಫ್ ನರ್ಸ್ ಸೇರಿದಂತೆ ಏಳು ಮಂದಿಯನ್ನು ಗದಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಟಗೇರಿ ನಿವಾಸಿಗಳಾದ ಸಿಕಂದರ್ ಬೇಪಾರಿ, ಶಬೀರಅಹ್ಮದ್ ಅಲಿಯಾಸ್ ಜೂನಸಾಬ್, ಮಹ್ಮದ್ ರಫೀಕ್ ಲಂಗೋಟಿ, ಪ್ರದೀಪ್ ಸಾಗರ ನವಲೇಕರ, ಭರತ್ ಮಹಾದೇವಪ್ಪ ಕೊರವರ, ಸಂದೀಪ್ ಸಾಗರ ನವಲೇಕರ ಹಾಗೂ ಬೆಳ್ಳಟ್ಟಿ ಗ್ರಾಮದ ಆರ್‌ಎಂಪಿ ವೈದ್ಯ ನಾಗರಾಜ್ ಚಿದಾನಂದ ಕಮತರ…

Read More

ಪ್ರಜ್ವಲ್ ರೇವಣ್ಣ ಸೆಲ್‌ನಲ್ಲಿ ಮೊಬೈಲ್ ಪತ್ತೆ; ಪರಪ್ಪನ ಅಗ್ರಹಾರ ಜೈಲು ಅಧೀಕ್ಷಕರಿಗೆ ಶೋಕಾಸ್, ಎಎಸ್‌ಪಿ ಅಮಾನತು

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅತ್ಯಾಚಾರ ಪ್ರಕರಣದ ಶಿಕ್ಷೆಗೊಳಗಾದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾದ ಹಿನ್ನೆಲೆಯಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದ್ದು, ಭದ್ರತಾ ವಿಭಾಗದ ಉಸ್ತುವಾರಿ ಸಹಾಯಕ ಅಧೀಕ್ಷಕ (ಎಎಸ್‌ಪಿ) ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಿ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ. ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್ ಕುಮಾರ್, ಜೈಲಿನಲ್ಲಿ ನಿಷೇಧಿತ ವಸ್ತುಗಳು ಹಾಗೂ ಅಕ್ರಮ…

Read More

ಹೊಸ ಬಟ್ಟೆ ಕೊಡಿಸಲಿಲ್ಲವೆಂದು ಅಕ್ಕ-ತಂಗಿಯರ ಆತ್ಮಹತ್ಯೆ; ಕಲಬುರಗಿಯಲ್ಲಿ ಹೃದಯವಿದ್ರಾವಕ ಘಟನೆ

ಕಲಬುರಗಿ: ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಲಿಲ್ಲವೆಂದು ಮನನೊಂದು ಅಕ್ಕ-ತಂಗಿಯರಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಶಹಬಾದ್ ಪಟ್ಟಣದಲ್ಲಿ ನಡೆದಿದೆ. ತಾಯಿಯನ್ನು ಕಳೆದುಕೊಂಡು ತಂದೆಯೊಂದಿಗೆ ವಾಸಿಸುತ್ತಿದ್ದ ಪೂಜಾ ಹಾಗೂ ಆಕೆಯ ತಂಗಿ ಈ ದುರಂತ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತ ಯುವತಿಯರು ಸುಮಾರು ಒಂಬತ್ತು ವರ್ಷಗಳ ಹಿಂದೆಯೇ ತಾಯಿಯನ್ನು ಕಳೆದುಕೊಂಡಿದ್ದು, ತಂದೆಯ ಆರೈಕೆಯಲ್ಲೇ ಬದುಕು ಸಾಗಿಸುತ್ತಿದ್ದರು. ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ನಂತರ ಕುಡಿತದ ಚಟಕ್ಕೆ ಬಿದ್ದಿದ್ದರು ಎನ್ನಲಾಗಿದೆ. ಮದ್ಯದ ನಶೆಯಲ್ಲಿ…

Read More