ಯರಗುಪ್ಪಿ PHCಗೆ ಬೀಗವೇ ಗತಿ?
ಕುಂದಗೋಳ:ಬಡವರ ಪಾಲಿನ ಸಂಜೀವಿನಿಯಾಗಬೇಕಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವೊಂದು ಇದ್ದೂ ಇಲ್ಲದಂತಾಗಿ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ! ಕುಂದಗೋಳ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರವು ಹಗಲು ಮಾತ್ರ ನೆಪಕ್ಕೆ ತೆರೆದು, ರಾತ್ರಿ 7 ಗಂಟೆಯಾಗುತ್ತಿದ್ದಂತೆ ಸರಪಳಿ ಹಾಕಿ ಬೀಗ ಜಡಿದು ಮುಚ್ಚಲ್ಪಡುತ್ತಿದೆ. ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ‘ಪಬ್ಲಿಕ್ ಸಮಾಚಾರ’ ಸುದ್ದಿ ವಾಹಿನಿ ಸ್ಥಳಕ್ಕೆ ತೆರಳಿ ರಿಯಾಲಿಟಿ ಚೆಕ್ ನಡೆಸಿದಾಗ, ಈ ಆಘಾತಕಾರಿ ನೈಜ ಸ್ಥಿತಿ ಕಣ್ಣಂದಿರಿಗೆ ಸಾಕ್ಷಿಯಾಗಿದೆ. ನಾಲ್ಕು ಜನ…
