ಗದಗ:ಅಕ್ರಮ ಸಂಬಂಧದ ಅಂಧಾಭಿಮಾನಕ್ಕೆ ಬಲಿಯಾಯ್ತಾ ಜೀವ? ಹಳೇ ಪ್ರೇಯಸಿಗೆ ಸನ್ನೆ ಮಾಡಿದ ಯುವಕನ ಬರ್ಬರ ಹತ್ಯೆ!

ಗದಗ: ಅಕ್ರಮ ಸಂಬಂಧ ಅನ್ನೋದು ನಿಧಾನವಾಗಿ ಮೈಯೆಲ್ಲಾ ಆವರಿಸೋ ವಿಷವಿದ್ದಂತೆ. ಕ್ಷಣಿಕ ಸುಖದ ಆಸೆಗೆ ಬಿದ್ದವರು ಕೊನೆಗೆ ಸರ್ವಸ್ವವನ್ನೂ ಕಳೆದುಕೊಳ್ಳಬೇಕಾಗುತ್ತದೆ ಅನ್ನೋದಕ್ಕೆ ಗದಗದಲ್ಲಿ ನಡೆದಿರುವ ಈ ಭೀಕರ ಘಟನೆಯೇ ಸಾಕ್ಷಿ. ಬೇಡವೆಂದು ದೂರ ಸರಿದರೂ ಬೆನ್ನುಬಿಡದ ಹಳೆ ಚಾಳಿ, ಕೊನೆಗೆ ಒಬ್ಬ ಯುವಕನ ಪ್ರಾಣವನ್ನೇ ಬಲಿ ಪಡೆದಿದೆ. ಮೋಹದ ಬಲೆಗೆ ಬಿದ್ದಿದ್ದ ವಿವಾಹಿತೆ:ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮದ ನಿವಾಸಿ ಈರಣ್ಣ ಅಗಶಿಬಾಗಿಲು ಎಂಬಾತ ವೃತ್ತಿಯಲ್ಲಿ ಕುರಿಗಾಹಿ. ಈತನ ಮನೆ ಎದುರಿಗಿದ್ದ ರೇಣುಕಾ ಎಂಬಾಕೆಯೊಂದಿಗೆ…

Read More

ಅತ್ಯಾಚಾರ, ಅಕ್ರಮ ಗರ್ಭಪಾತ: ಆರ್‌ಎಂಪಿ ವೈದ್ಯ, ನರ್ಸ್ ಸೇರಿ 7 ಮಂದಿ ಬಂಧನ

ಗದಗ: 26 ವರ್ಷದ ಯುವತಿಯ ಮೇಲೆ ವಿವಿಧ ದಿನಗಳಲ್ಲಿ ಅತ್ಯಾಚಾರ ಎಸಗಿ, ಆಕೆ ಗರ್ಭಿಣಿಯಾದ ಬಳಿಕ ಕಾನೂನುಬಾಹಿರವಾಗಿ ಗರ್ಭಪಾತ ಮಾಡಿಸಿದ ಆರೋಪದಡಿ ಆರ್‌ಎಂಪಿ ವೈದ್ಯ ಹಾಗೂ ಸ್ಟಾಫ್ ನರ್ಸ್ ಸೇರಿದಂತೆ ಏಳು ಮಂದಿಯನ್ನು ಗದಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬೆಟಗೇರಿ ನಿವಾಸಿಗಳಾದ ಸಿಕಂದರ್ ಬೇಪಾರಿ, ಶಬೀರಅಹ್ಮದ್ ಅಲಿಯಾಸ್ ಜೂನಸಾಬ್, ಮಹ್ಮದ್ ರಫೀಕ್ ಲಂಗೋಟಿ, ಪ್ರದೀಪ್ ಸಾಗರ ನವಲೇಕರ, ಭರತ್ ಮಹಾದೇವಪ್ಪ ಕೊರವರ, ಸಂದೀಪ್ ಸಾಗರ ನವಲೇಕರ ಹಾಗೂ ಬೆಳ್ಳಟ್ಟಿ ಗ್ರಾಮದ ಆರ್‌ಎಂಪಿ ವೈದ್ಯ ನಾಗರಾಜ್ ಚಿದಾನಂದ ಕಮತರ…

Read More

ನಗರೋತ್ಥಾನ ಯೋಜನೆ ಬಾಕಿ ಪಾವತಿ ಪ್ರಕರಣ: ಗದಗ ಜಿಲ್ಲಾಡಳಿತ ಭವನದ ಪೀಠೋಪಕರಣಗಳ ಜಪ್ತಿ

ಗದಗ: ನಗರೋತ್ಥಾನ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಪಾವತಿಸಬೇಕಿದ್ದ ಸುಮಾರು ₹7.18 ಕೋಟಿ ಮೊತ್ತವು ಬಡ್ಡಿ ಸೇರಿ ಸುಮಾರು ₹7.60 ಕೋಟಿಗೆ ಏರಿಕೆಯಾದ ಹಿನ್ನೆಲೆಯಲ್ಲಿ, ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಗದಗ ಜಿಲ್ಲಾಡಳಿತ ಭವನದಲ್ಲಿರುವ ವಿವಿಧ ಪೀಠೋಪಕರಣಗಳು ಹಾಗೂ ಉಪಕರಣಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದೆ. ನ್ಯಾಯಾಲಯದ ಆದೇಶದ ಅನ್ವಯ ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜಪ್ತಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಕಂಪ್ಯೂಟರ್ ಸೇರಿದಂತೆ ವಿವಿಧ ಕಚೇರಿ ಉಪಕರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡರು. ನಗರೋತ್ಥಾನ ಯೋಜನೆ ಕಾಮಗಾರಿಗೆ ಸಂಬಂಧಿಸಿದ ಬಾಕಿ ಹಣ…

Read More

ಲೋಕ ಕಲ್ಯಾಣಕ್ಕಾಗಿ ಕೈಗೊಂಡಿದ್ದ 33 ದಿನಗಳ ಕಠಿಣ ಶಿವಯೋಗ ಸಮಾಧಿ ಯಶಸ್ವಿ: ಭಕ್ತರಿಗೆ ದರ್ಶನ ನೀಡಿದ ರಾಚೋಟೇಶ್ವರ ಶ್ರೀಗಳು; ಸದ್ಯ ಆಸ್ಪತ್ರೆಗೆ ದಾಖಲು

ಗದಗ: ಜಿಲ್ಲೆಯ ಗದಗ ತಾಲೂಕಿನ ಅಂತೂರ-ಬೆಂತೂರ ಗ್ರಾಮದ ಪ್ರಸಿದ್ಧ ಬೂದೀಶ್ವರ ಮಠದ ಉತ್ತರಾಧಿಕಾರಿಯಾದ ಪೂಜ್ಯ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಲೋಕ ಕಲ್ಯಾಣ ಹಾಗೂ ವಿಶ್ವಶಾಂತಿಗಾಗಿ ಕೈಗೊಂಡಿದ್ದ 33 ದಿನಗಳ ಕಠಿಣ ಶಿವಯೋಗ ಸಮಾಧಿ ಮತ್ತು ಮೌನಾನುಷ್ಠಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಶನಿವಾರ ಬೆಳಿಗ್ಗೆ ಸುಮಾರು 10:30ಕ್ಕೆ ಶ್ರೀಗಳು ಗರ್ಭಗುಡಿಯಿಂದ ಹೊರಬಂದು ಸಾವಿರಾರು ಭಕ್ತರಿಗೆ ದರ್ಶನ ನೀಡಿದರು. ಈ ಅಪರೂಪದ ಕ್ಷಣವು ನೆರೆದಿದ್ದ ಲಕ್ಷಾಂತರ ಭಕ್ತರ ಪಾಲಿಗೆ ಭಾವನಾತ್ಮಕ ಹಾಗೂ ಐತಿಹಾಸಿಕ ಕ್ಷಣವಾಗಿ ಪರಿಣಮಿಸಿತು. ಆದರೆ, ಶ್ರೀಗಳ ಆರೋಗ್ಯದಲ್ಲಿ…

Read More

ಗದಗ: ಅಕ್ರಮ ಬಡ್ಡಿ ವ್ಯವಹಾರಕ್ಕೆ ಪೊಲೀಸರ ಬಿಗಿ ಕ್ರಮ: ₹60 ಲಕ್ಷ ಮೌಲ್ಯದ ಚಿನ್ನ, ₹5.5 ಲಕ್ಷ ನಗದು ವಶ

ಗದಗ: ಅಕ್ರಮ ಬಡ್ಡಿ ವ್ಯವಹಾರ, ಅತಿಯಾದ ಬಡ್ಡಿ ವಸೂಲಿ ಹಾಗೂ ಸಾಲಗಾರರಿಗೆ ಬೆದರಿಕೆ ಹಾಕುತ್ತಿರುವ ಕುರಿತು ಬಂದ ದೂರಿನ ಮೇರೆಗೆ ಗದಗ ಜಿಲ್ಲಾ ಪೊಲೀಸರು ಆರು ವಿಶೇಷ ತಂಡಗಳನ್ನು ರಚಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ದಾಳಿಯ ವೇಳೆ 150ಕ್ಕೂ ಹೆಚ್ಚು ಚೆಕ್‌ಗಳು, 65ಕ್ಕೂ ಹೆಚ್ಚು ಖಾಲಿ ಬಾಂಡ್‌ಗಳು, ವಿವಿಧ ಒಪ್ಪಂದ ಪತ್ರಗಳು ಹಾಗೂ ಪ್ರಮುಖ ದಾಖಲೆಗಳು ಪತ್ತೆಯಾಗಿವೆ. ಅಲ್ಲದೆ 9 ಬ್ಯಾಂಕ್ ಪಾಸ್‌ಬುಕ್‌ಗಳು, 11 ಚೆಕ್‌ಬುಕ್‌ಗಳು, 5ಕ್ಕೂ ಹೆಚ್ಚು ಎಟಿಎಂ ಕಾರ್ಡ್‌ಗಳು ಹಾಗೂ 3…

Read More

ಮೊನ್ನೆ ಸೀಜ್, ನಿನ್ನೆ ರೀ-ಓಪನ್: ಲಕ್ಷ್ಮೇಶ್ವರ ಪುರಸಭೆ ವಾಣಿಜ್ಯ ಮಳಿಗೆಗಳ ವಿವಾದಕ್ಕೆ ಹೊಸ ತಿರುವು

ಲಕ್ಷ್ಮೇಶರ: ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರಿನ ಪುರಸಭೆಯ ವಾಣಿಜ್ಯ ಸಂಕೀರ್ಣದಲ್ಲಿರುವ ಮಳಿಗೆಗಳ ಅವಧಿ ಮುಗಿದಿದ್ದು, ಅವುಗಳನ್ನು ತೆರವುಗೊಳಿಸಿ ಹೊಸದಾಗಿ ಟೆಂಡರ್ ಕರೆದು ಹರಾಜು ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಮಂಗಳವಾರ ಹೋರಾಟ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಸುಮಾರು ಏಳು ಮಳಿಗೆಗಳನ್ನು ಸೀಜ್ ಮಾಡಿದ್ದರು. ಆದರೆ ಬುಧವಾರ ಅದೇ ಮಳಿಗೆಗಳನ್ನು ಮತ್ತೆ ತೆರೆಯಲಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ವಾಣಿಜ್ಯ ಸಂಕೀರ್ಣದಲ್ಲಿರುವ ಕೆಲ ವ್ಯಾಪಾರಸ್ಥರು ಮಳಿಗೆಗಳ ತೆರವು ಕ್ರಮವನ್ನು ಪ್ರಶ್ನಿಸಿ…

Read More

ಗದಗ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೋರ್ ಮುರಿದು ಬಿದ್ದು 21 ಜನರಿಗೆ ಗಾಯ,ಏಳು ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು

ಗದಗ: ಜಿಲ್ಲೆಯ ಅತಿ ದೊಡ್ಡ ಜಾತ್ರೆ ಎನ್ನುವ ಹೆಗ್ಗಳಿಕೆ ಹೊಂದಿರುವ ಇಲ್ಲಿನ ಪ್ರಸಿದ್ಧ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ರಾತ್ರಿ ಭೀಕರ ದುರಂತವೊಂದು ಸಂಭವಿಸಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ‘ಡ್ಯಾನ್ಸಿಂಗ್ ಫ್ಲೋರ್’ ಮನರಂಜನಾ ಯಂತ್ರವು ಚಾಲನೆಯಲ್ಲಿ ಇದ್ದಾಗಲೇ ತಾಂತ್ರಿಕ ದೋಷದಿಂದ ಮುರಿದು ಬಿದ್ದ ಪರಿಣಾಮ 21 ಜನರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಾತ್ರಾ ಕಮಿಟಿ ಅಧ್ಯಕ್ಷರು ಸೇರಿದಂತೆ ಒಟ್ಟು 7 ಜನರ ಮೇಲೆ ಸೋಮವಾರ ಶಹರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ​ಭಾನುವಾರ ರಾತ್ರಿ ಈ ಘಟನೆ…

Read More

ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ: ಸಿಎಂ ಬದಲಾವಣೆ ಕುರಿತು ಲಕ್ಷ್ಮೇಶ್ವರದಲ್ಲಿ ಡಿ.ಕೆ. ಶಿವಕುಮಾರ್ ಮಾರ್ಮಿಕ ನುಡಿ

ಲಕ್ಷ್ಮೇಶ್ವರ (ಗದಗ): “ನಾನು ಕುಳಿತಿರುವ ಈ ಜಾಗದಲ್ಲಿ ವಿಶೇಷ ಶಕ್ತಿಯಿದೆ. ಸಮಯ ಬರಲಿ, ಕಾಲವೇ ಎಲ್ಲದಕ್ಕೂ ಉತ್ತರ ನೀಡುತ್ತದೆ” ಎಂದು ಹೇಳುವ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತಾದ ಚರ್ಚೆಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ​ಭಾನುವಾರ ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸುಕ್ಷೇತ್ರ ಮುಕ್ತಿಮಂದಿರಕ್ಕೆ ಭೇಟಿ ನೀಡಿದ ಅವರು, ಲಿಂಗೈಕ್ಯ ರಂಭಾಪುರಿ ವೀರಗಂಗಾಧರ ಸ್ವಾಮಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮುಕ್ತಿಮಂದಿರದಲ್ಲಿ ಕೆಲ ಹೊತ್ತು ಧ್ಯಾನ ಮತ್ತು ಜಪದಲ್ಲಿ ತೊಡಗಿಸಿಕೊಂಡರು. ಈ…

Read More

ವಿಜಯನಗರ ಮಹಾವಿದ್ಯಾಲಯದಲ್ಲಿ ಜನಪದ ಸಂಭ್ರಮ: ಸಾಂಪ್ರದಾಯಿಕ ವೈಭವದೊಂದಿಗೆ ಶಿಕ್ಷಣದಲ್ಲಿ ಲಲಿತ ಕಲೆಗಳ ಉದ್ಘಾಟನೆ

ಗದಗ: ಇಲ್ಲಿನ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ‘ಶಿಕ್ಷಣದಲ್ಲಿ ಲಲಿತ ಕಲೆ ಮತ್ತು ರಂಗಭೂಮಿ ಜನಪದ ಸಂಭ್ರಮ’ ಹಾಗೂ ವಿವಿಧ ಶಾಸ್ತ್ರೋಕ್ತ ಪೂಜಾ ಕಾರ್ಯಕ್ರಮಗಳು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿದವು. ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದ್ದ ಕುಂಭಮೇಳವು ಜನಪದ ಕಲೆಗಳಾದ ಡೊಳ್ಳು ಕುಣಿತ, ಹಲಗೆ ವಾದನ ಹಾಗೂ ಪಿಪಿ ಊದುವಿಕೆಯೊಂದಿಗೆ ಕಳೆಗಟ್ಟಿತ್ತು. ಸಾಂಪ್ರದಾಯಿಕ ಇಳಕಲ್ ಸೀರೆಯಲ್ಲಿ ಮಿಂಚುತ್ತಿದ್ದ ಮಹಿಳಾ ಪ್ರಶಿಕ್ಷಣಾರ್ಥಿಗಳು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರೆ, ಪುರುಷ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಂಚೆ, ಜುಬ್ಬಾ ಮತ್ತು ರುಮಾಲು…

Read More

ಲಂಚ ಸ್ವೀಕಾರ: ಶಿರಹಟ್ಟಿ ಬಿಜೆಪಿ ಶಾಸಕ ಚಂದ್ರು ಲಮಾಣಿ ಹಾಗೂ ಇಬ್ಬರು ಪಿಎಗಳು ಲೋಕಾಯುಕ್ತ ಬಲೆಗೆ

ಗದಗ: ಗುತ್ತಿಗೆದಾರರೊಬ್ಬರಿಂದ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಆಪ್ತ ಸಹಾಯಕರನ್ನು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಶಾಸಕರ ಒಡೆತನದ ಆಸ್ಪತ್ರೆಯಲ್ಲೇ ಈ ಲಂಚದ ವಹಿವಾಟು ನಡೆಯುತ್ತಿದ್ದಾಗ ದಾಳಿ ನಡೆಸಿರುವ ಪೊಲೀಸರು, ಐದು ಲಕ್ಷ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಸಂಕದಾಳ ಗ್ರಾಮದಲ್ಲಿ ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದ ತಡೆಗೋಡೆ ನಿರ್ಮಾಣ ಕಾಮಗಾರಿಯ ಗುತ್ತಿಗೆ ನೀಡಲು ಶಾಸಕರು ಗುತ್ತಿಗೆದಾರ…

Read More