ಬೀದರ:ಬದುಕು ಜಟಕಾಬಂಡಿ… ವಿಧಿಯ ಮೋಸದಾಟಕ್ಕೆ ಬಲಿಯಾಯ್ತು ಒಂದೇ ಗಲ್ಲಿಯಲ್ಲಿ ಬೆಳೆದ ಜೀವದ ಗೆಳೆತನ!
ಬೀದರ್: ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ ಎಂಬ ಮಾತು ಎಷ್ಟು ಕಟು ಸತ್ಯ ಎಂಬುದಕ್ಕೆ ಬೀದರ್‌ನ ಇಬ್ಬರು ಆಪ್ತ ಗೆಳೆಯರ ದಾರುಣ ಅಂತ್ಯವೇ ಸಾಕ್ಷಿಯಾಗಿದೆ. ನಿನ್ನೆ ಮೊನ್ನೆಯವರೆಗೂ ನಗುನಗುತ್ತಾ ಕನಸುಗಳನ್ನು ಹೊತ್ತು ತಿರುಗಾಡುತ್ತಿದ್ದ ಸಾಯಿ ಕಿರಣ್ ಹಾಗೂ ನಾಗೇಶ್, ಹೊಸ ಬೈಕ್‌ನಲ್ಲಿ ಊರಿಗೆ ಮರಳುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ಆಘಾತ ಮೂಡಿಸಿದೆ. ಬೀದರ್‌ನ ಒಂದೇ ಗಲ್ಲಿಯಲ್ಲಿ ಹುಟ್ಟಿ, ಜೊತೆಯಾಗಿಯೇ ಆಡಿ ಬೆಳೆದ ಸಾಯಿ ಕಿರಣ್ ಹಾಗೂ ನಾಗೇಶ್…
