ಮುತ್ತತ್ತಿ ಕಾವೇರಿ ದುರಂತ: ಸೆಲ್ಫಿ ವೇಳೆ ಕಾಲು ಜಾರಿ ಬಿದ್ದ ಮಹಿಳೆ ರಕ್ಷಿಸಲು ಹೋಗಿ ಐವರು ನೀರುಪಾಲು

ಮಂಡ್ಯ, ಜೂ. 24: ಸೆಲ್ಫಿ ತೆಗೆಯುವ ವೇಳೆ ಕಾಲು ಜಾರಿ ಕಾವೇರಿ ನದಿಗೆ ಬಿದ್ದ ಮಹಿಳೆಯನ್ನು ರಕ್ಷಿಸಲು ಧಾವಿಸಿದ್ದ ಕುಟುಂಬ ಸದಸ್ಯರು ಹಾಗೂ ಕಾರು ಚಾಲಕ ಸೇರಿದಂತೆ ಒಟ್ಟು ಐವರು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಮುತ್ತತ್ತಿ ಸಮೀಪದ ಕಾವೇರಿ ನದಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಮೃತರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ವಿರುಪಾಕ್ಷಿಪುರ ಹೋಬಳಿಯ ಜಗದಪುರ ಗ್ರಾಮದ ನಿವಾಸಿಗಳಾದ ವಿಜಯಮ್ಮ (52), ಅವರ ಪುತ್ರಿಯರಾದ ಪ್ರಿಯಾಂಕ, ಶ್ವೇತಾ (38) ಮತ್ತು…

Read More

10 ಸಾವಿರ ರೂ.ಗಾಗಿ ಬಲಿಯಾದ ಬಿಸಿಎ ವಿದ್ಯಾರ್ಥಿನಿಯ ಜೀವ: ಶುಲ್ಕ ಪಾವತಿಸಲಾಗದೆ ಹಾಲ್‌ಟಿಕೆಟ್ ಸಿಗದೆ ಆತ್ಮಹತ್ಯೆ

ಭಟ್ಕಳ: ಕಾಲೇಜು ಶುಲ್ಕ ಪಾವತಿಸಲು ತಂದೆ ನೀಡಿದ್ದ 10 ಸಾವಿರ ರೂಪಾಯಿ ಹಣವನ್ನು ಪರಿಚಯಸ್ಥನಿಗೆ ಸಾಲವಾಗಿ ನೀಡಿ, ಆತ ಹಣವನ್ನು ಮರಳಿ ನೀಡದೆ ವಂಚಿಸಿದ ಹಿನ್ನೆಲೆಯಲ್ಲಿ ಮನನೊಂದ ಬಿಸಿಎ ವಿದ್ಯಾರ್ಥಿನಿಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದಲ್ಲಿ ಶನಿವಾರದಂದು ನಡೆದಿದೆ. ಭಟ್ಕಳದ ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದ ಗಾಯತ್ರಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಗಾಯತ್ರಿಯ ತಂದೆ ನಾಗರಾಜ ಅವರು ಮಗಳ ಕಾಲೇಜು…

Read More

ಶಿರಸಿ ಸರ್ಕಾರಿ ವಸತಿ ನಿಲಯದಲ್ಲಿ ಆಘಾತಕಾರಿ ಘಟನೆಶೌಚಾಲಯದಲ್ಲಿ ಹೆರಿಗೆ ಬಳಿಕ ನವಜಾತ ಶಿಶುವನ್ನು ಕಿಟಕಿಯಿಂದ ಎಸೆದ ಅಪ್ರಾಪ್ತ ಬಾಲಕಿ; ಮಗು ಸಾವು

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತೋಡದಗದ್ದೆ ಸಮೀಪದ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಶೌಚಾಲಯದಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿ, ಬಳಿಕ ನವಜಾತ ಶಿಶುವನ್ನು ಕಿಟಕಿಯಿಂದ ಹೊರಗೆ ಎಸೆದ ಪರಿಣಾಮ ಮಗು ಮೃತಪಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ವಸತಿ ನಿಲಯದಲ್ಲಿ ವಾಸವಾಗಿದ್ದ ಸುಮಾರು 15 ವರ್ಷದ ಬಾಲಕಿ ಯಾರಿಗೂ ತಿಳಿಯದಂತೆ ಹಾಸ್ಟೆಲ್‌ನ ಶೌಚಾಲಯದಲ್ಲೇ ಹೆರಿಗೆ ಮಾಡಿಕೊಂಡಿದ್ದಾಳೆ. ಹೆರಿಗೆಯಾದ ಬಳಿಕ ಗಾಬರಿಗೊಂಡಿದ್ದ ಬಾಲಕಿ ಅಥವಾ ವಿಷಯವನ್ನು ಮರೆಮಾಚುವ ಉದ್ದೇಶದಿಂದ ನವಜಾತ…

Read More

ಸವಣೂರ:ನಿಧಿ ಆಸೆಗೆ ದೇವಸ್ಥಾನ ಧ್ವಂಸ ಆರೋಪ: ನಾಲ್ವರು ಬಂಧನ, ನ್ಯಾಯಾಂಗ ವಶಕ್ಕೆ

ಹಾವೇರಿ: ನಿಧಿ ಸಿಗುವ ಆಸೆಯಿಂದ ಮೂಕಬಸವೇಶ್ವರ ಹಾಗೂ ಈಶ್ವರಮೂರ್ತಿ ಪ್ರತಿಷ್ಠಾಪಿತವಾಗಿದ್ದ ಕಲ್ಲಿನ ದೇವಸ್ಥಾನವನ್ನು ಧ್ವಂಸಗೊಳಿಸಿ ನೆಲ ಅಗೆದ ಆರೋಪದಡಿ ನಾಲ್ವರನ್ನು ಸವಣೂರು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಘಟನೆ ತಾಲೂಕಿನ ನದಿನೀರಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನದಿನೀರಲಗಿ ಗ್ರಾಮದ ಫಕ್ಕಿರಪ್ಪ ಮಾದರ ಅವರ ಜಮೀನಿನಲ್ಲಿರುವ ಮೂಕಬಸವೇಶ್ವರ ಹಾಗೂ ಈಶ್ವರಮೂರ್ತಿಯ ಸಣ್ಣ ಕಲ್ಲಿನ ದೇವಸ್ಥಾನವನ್ನು ನಿಧಿ ಹುಡುಕುವ ಉದ್ದೇಶದಿಂದ ಧ್ವಂಸ ಮಾಡಲಾಗಿದೆ ಎಂದು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು…

Read More

ಈಜಲು ಹೋಗಿ ಜಲಸಮಾಧಿಯಾದ ಮೂವರು ಹದಿಹರೆಯದ ಬಾಲಕರು: ಸಿಂಗನಳ್ಳಿಯಲ್ಲಿ ಆವರಿಸಿದ ಶೋಕಛಾಯೆ

ಧಾರವಾಡ: ಬೇಸಿಗೆಯ ತೀವ್ರ ಬಿಸಿಲಿನ ತಾಪಕ್ಕೆ ತಣ್ಣಗಾಗಲು ಕೆರೆಗೆ ಈಜಲು ಹೋದ ಮೂವರು ಹದಿಹರೆಯದ ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಸಿಂಗನಳ್ಳಿ ಗ್ರಾಮದ ಸಮೀಪದ ಕರೆಮ್ಮನಕೆರೆಯಲ್ಲಿ ಶನಿವಾರ ಸಂಭವಿಸಿದೆ. ​ಸಿಂಗನಳ್ಳಿ ಗ್ರಾಮದ ನಿವಾಸಿಗಳಾದ ಅನ್ವರ ಇಬ್ರಾಹಿಂ ವಟ್ನಾಳ (13), ಸುಭಾನಿ ಇಸಾಕ್ ಬಾಗಜಿಕೊಪ್ಪ (12) ಹಾಗೂ ಮೆಹಬೂಬಸುಭಾನಿ ದಾದಾಫೀರ ವಡ್ನಾಳ (15) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ​ಪ್ರಸ್ತುತ ದಿನಗಳಲ್ಲಿ ಬೇಸಿಗೆಯ ತಾಪಮಾನ ಅತಿಯಾಗಿ ಹೆಚ್ಚಾಗಿದ್ದರಿಂದ ಮೂವರೂ ಬಾಲಕರು ಮಧ್ಯಾಹ್ನದ ವೇಳೆ ಈಜಾಡಲು ಕರೆಮ್ಮನಕೆರೆಗೆ ತೆರಳಿದ್ದರು….

Read More

ಭೀಮಾತೀರದಲ್ಲಿ ಮತ್ತೆ ನೆತ್ತರ ಹದ: ಜಮೀನು ವಿವಾದಕ್ಕೆ ಸಂಧಾನ ಸಭೆಯಲ್ಲೇ ಆರು ಜನರ ಭೀಕರ ಹತ್ಯೆ

ವಿಜಯಪುರ: ಇಷ್ಟು ದಿನ ಶಾಂತವಾಗಿದ್ದ ಭೀಮಾತೀರದಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮತ್ತೊಮ್ಮೆ ರಕ್ತಪಾತವಾಗಿದ್ದು, ಆರು ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಗೂ ಗುಂಡು ಹಾರಿಸಿ ಭೀಕರವಾಗಿ ಕೊಲೆ ಮಾಡಲಾಗಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಿರಾಳೆ ಹಾಗೂ ಗೊಳಗಿ ಕುಟುಂಬಗಳ ನಡುವಿನ ಜಮೀನು ವ್ಯಾಜ್ಯವೇ ಈ ನರಮೇಧಕ್ಕೆ ಕಾರಣ ಎಂದು ತಿಳಿದುಬಂದಿದೆ. ದಾಳಿಯ ತೀವ್ರತೆಗೆ ನಿರಾಳೆ ಕುಟುಂಬದ ಪ್ರಮುಖರು ಹಾಗೂ ಅವರ ಬೆಂಬಲಿಗರು ಸೇರಿ ಒಟ್ಟು ಆರು ಮಂದಿ ಸ್ಥಳದಲ್ಲೇ ಪ್ರಾಣ…

Read More

ಹೆಸ್ಕಾಂ ಬೇಜವಾಬ್ದಾರಿಗೆ ಬಲಿಯಾಯಿತೇ ಏಳು ವರ್ಷದ ಕಂದಮ್ಮ? ಸಂಶಿ ಗ್ರಾಮದಲ್ಲಿ ಘೋರ ದುರಂತ: ಸಾರ್ವಜನಿಕರ ತೀವ್ರ ಆಕ್ರೋಶ

ಕುಂದಗೋಳ: ತಾಲ್ಲೂಕಿನ ಸಂಶಿ ಗ್ರಾಮದಲ್ಲಿ ಬುಧವಾರ ಹೆಸ್ಕಾಂ (HESCOM) ಇಲಾಖೆಯ ನಿರ್ಲಕ್ಷ್ಯಕ್ಕೆ ಏಳು ವರ್ಷದ ಮುಗ್ಧ ಬಾಲಕಿ ತಂಜಿಯಾ ತೌಸಿಪ್ ಪಠಾಣ್ ಬಲಿಯಾದ ದುರ್ಘಟನೆ ಸಂಭವಿಸಿದ್ದು, ಇಡೀ ಗ್ರಾಮದಲ್ಲಿ ಆಕ್ರೋಶ ಮತ್ತು ಶೋಕದ ವಾತಾವರಣ ನಿರ್ಮಾಣವಾಗಿದೆ. ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಇಲಾಖೆಯ ಬೇಜವಾಬ್ದಾರಿತನವೇ ಈ ದುರಂತಕ್ಕೆ ಕಾರಣ ಎಂಬ ಗಂಭೀರ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಗ್ರಾಮದ ಸೊಸಾಯಿಟಿ ಸಮೀಪದ ಮನೆಯೊಂದರ ಬಳಿ ವಿದ್ಯುತ್ ಕಂಬ ಮತ್ತು ಮುಖ್ಯ ವಿದ್ಯುತ್ ಲೈನ್ ಅತ್ಯಂತ ಅಪಾಯಕಾರಿಯಾಗಿ ಅಳವಡಿಸಲಾಗಿತ್ತು ಎನ್ನಲಾಗಿದೆ….

Read More

ಶಿಗ್ಗಾವಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯ ಬರ್ಬರ ಹತ್ಯೆ; ಸಹೋದರ ಬಂಧನ

ಶಿಗ್ಗಾವಿ: ಪಟ್ಟಣದ ಗುಡ್ಡದ ಓಣಿಯ ಅಂಗನವಾಡಿ ಕೇಂದ್ರ-3ರಲ್ಲಿ ಸೋಮವಾರ ಬೆಳಿಗ್ಗೆ ನಡೆದ ಬರ್ಬರ ಹತ್ಯೆ ಪ್ರಕರಣವು ಜನತೆಯನ್ನು ಬೆಚ್ಚಿಬೀಳಿಸಿದೆ. 29 ವರ್ಷದ ಅಂಗನವಾಡಿ ಕಾರ್ಯಕರ್ತೆ ಸುಮಾ ಶಿವಶಂಕರ ಸವಣೂರ (ಊರ್ಫ್ ವನಹಳ್ಳಿ) ಅವರನ್ನು ಅವರ ಸಹೋದರನೇ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ಬೆಳಿಗ್ಗೆ ಸುಮಾ ಅವರು ಎಂದಿನಂತೆ ಅಂಗನವಾಡಿ ಕೇಂದ್ರ ತೆರೆಯಲು ಬಂದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಿಯರ ಹಾಗೂ ವೈಯಕ್ತಿಕ ಕಾರಣಗಳಿಂದ ಉಂಟಾದ ಕಲಹದ ಹಿನ್ನೆಲೆ ಆರೋಪಿ ಸಂಜು…

Read More

ಭಟ್ಕಳ:ಕಪ್ಪೆ ಚಿಪ್ಪು ಆರಿಸಲು ಹೊಳೆಗೆ ಇಳಿದ ಎಂಟು ಮಂದಿ ನೀರುಪಾಲು

ಭಟ್ಕಳ, ಮೇ 24: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ಅಳ್ವೆಕೋಡಿ ಸಮೀಪದ ತಟ್ಟಿಹಕ್ಕಲ ಕಳಿನಟ್ಟಿ ಹೊಳೆಯಲ್ಲಿ ಸಂಭವಿಸಿದ ದಾರುಣ ಘಟನೆಗೆ ಎಂಟು ಮಂದಿ ನೀರುಪಾಲಾಗಿದ್ದಾರೆ. ಕಪ್ಪೆ ಚಿಪ್ಪು ಆರಿಸಲು ಹೊಳೆಗೆ ಇಳಿದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಪಡುಶಿರಾಲಿ ಬೆಂಗ್ರೆಯ ಲಕ್ಷ್ಮಿ ಮಹಾದೇವ ನಾಯ್ಕ (42), ಶಾರದಾಹೊಳೆಯ ಉಮೇಶ ನಾಯ್ಕ (30), ಲಕ್ಷ್ಮಿ ನಾಯ್ಕ (30), ಲಕ್ಷ್ಮಿ ಅಣ್ಣಪ್ಪ ನಾಯ್ಕ (60), ಲಕ್ಷ್ಮಿ ಶಿವರಾಮ ನಾಯ್ಕ (49), ಜ್ಯೋತಿ ನಾಗಪ್ಪ ನಾಯ್ಕ (34),…

Read More

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ಅಟ್ಟಹಾಸ: ನಾಗಮಲೆ ಹಾದಿಯಲ್ಲಿ ಬೆಂಗಳೂರಿನ ಬಾಲಕ ಬಲಿ

ಹನೂರು: ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಮಲೆ ಮಹದೇಶ್ವರ ಬೆಟ್ಟದ ನಾಗಮಲೆಗೆ ತೆರಳುವ ಕಾಲುನಡಿಗೆ ಮಾರ್ಗದಲ್ಲಿ ಚಿರತೆಯೊಂದು ದಾಳಿ ನಡೆಸಿದ್ದು, ಬೆಂಗಳೂರು ಮೂಲದ 10 ವರ್ಷದ ಬಾಲಕ ಹರ್ಷಿತ್ ಎಂಬಾತ ದುರ್ಮರಣಕ್ಕೀಡಾಗಿದ್ದಾನೆ. ದೇವರ ದರ್ಶನದ ಹಂಬಲ ಹೊತ್ತು ಬಂದಿದ್ದ ಪುಟ್ಟ ಬಾಲಕ ಪ್ರಾಣ ಕಳೆದುಕೊಂಡ ಘಟನೆಯು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಭಕ್ತರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ. ​ಬೆಂಗಳೂರಿನಿಂದ ಕುಟುಂಬದವರೊಂದಿಗೆ ಬೆಟ್ಟಕ್ಕೆ ಬಂದಿದ್ದ ಹರ್ಷಿತ್, ನಾಗಮಲೆಯತ್ತ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಹಠಾತ್ತಾಗಿ ದಾಳಿ ಮಾಡಿದ ಚಿರತೆಯು…

Read More