ಜತ್ತ ಗ್ರಾಮ ತಲುಪಿದ ದಿಂಡಿ ಪಾದಯಾತ್ರೆ: ಭಕ್ತಿ, ಉತ್ಸಾಹದ ವಾತಾವರಣ
ನವಲಗುಂದ: ತಾಲೂಕಿನ ಅಳಗವಾಡಿ ಶ್ರೀ ಹರಿ ಮಂದಿರದಿಂದ ಪ್ರಾರಂಭಗೊಂಡ ದಿಂಡಿ ಪಾದಯಾತ್ರೆಯು ನರಗುಂದ, ರಾಮದುರ್ಗ, ಮುಧೋಳ, ಜಮಖಂಡಿ, ಉಮರಾಣಿ ಸೇರಿದಂತೆ ಅನೇಕ ಹಳ್ಳಿಗಳ ಮಾರ್ಗವಾಗಿ ಪಯಣಿಸಿ ಶುಕ್ರವಾರ ಮಹಾರಾಷ್ಟ್ರದ ಜತ್ತ ಗ್ರಾಮವನ್ನು ತಲುಪಿತು. ಯಾತ್ರಿಕರ ಆಗಮನದ ಹಿನ್ನೆಲೆ ಜತ್ತ ನಗರದಲ್ಲಿ ಭಕ್ತಿ ಮತ್ತು ಉತ್ಸಾಹದ ವಾತಾವರಣ ನಿರ್ಮಾಣವಾಗಿತ್ತು. ಬೀದಿಗಳಲ್ಲಿ ಪುಷ್ಪಾಲಂಕಾರ ಮಾಡಲಾಗಿದ್ದು, ಭಜನೆ, ಕೀರ್ತನೆಗಳ ಮಧ್ಯೆ ಸಂತ ಮಹಾತ್ಮರಿಗೆ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು. ಭಕ್ತರು ದಿಂಡಿಯ ಯಾತ್ರಿಕರಿಗೆ ನೀರು, ಪ್ರಸಾದ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿ…

