ಹುಬ್ಬಳ್ಳಿ: ಬ್ಯಾಹಟ್ಟಿ, ಸುಳ್ಳ ಗ್ರಾಮಗಳಲ್ಲಿ ಎಟಿಎಂಗಳಿಗೆ ಕನ್ನ; ಅಂದಾಜು ₹14 ಲಕ್ಷಕ್ಕೂ ಅಧಿಕ ಹಣ ಕಳವು

ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಹಾಗೂ ಸುಳ್ಳ ಗ್ರಾಮಗಳಲ್ಲಿ ಎಟಿಎಂಗಳಿಗೆ ಕನ್ನ ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಎರಡೂ ಎಟಿಎಂಗಳಿಂದ ಅಂದಾಜು ₹14 ಲಕ್ಷಕ್ಕೂ ಅಧಿಕ ಹಣ ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ. ಬ್ಯಾಹಟ್ಟಿ ಗ್ರಾಮದಲ್ಲಿ ಗುರುವಾರ ಬೆಳಗಿನ ಜಾವ ಎಟಿಎಂ ಶೆಟರ್‌ನ ಲಾಕ್ ಮುರಿದು ಒಳನುಗ್ಗಿದ ಕಳ್ಳರು, ಅಂದಾಜು ₹3 ಲಕ್ಷಕ್ಕೂ ಅಧಿಕ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಎಟಿಎಂಗೆ ನುಗ್ಗಿರುವ ಕಳ್ಳರು, ಹಣ ದೋಚಿದ ಬಳಿಕ ಎಟಿಎಂನ ಮುಂಭಾಗ…

Read More

ಸಂಶಿಯಲ್ಲಿ ನಾಳೆ ‘ಪ್ರಜಾಸೇವಾ ಆಂದೋಲನ’ ಸಭೆ: ಸಾರ್ವಜನಿಕರ ಕುಂದು ಕೊರತೆಗಳಿಗೆ ಪರಿಹಾರದ ಸಾಧ್ಯತೆ

ಕುಂದಗೋಳ: ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲಿಯೇ ತ್ವರಿತ ಹಾಗೂ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಹೋಬಳಿ ಮಟ್ಟದ ಬೃಹತ್ ‘ಪ್ರಜಾಸೇವಾ ಆಂದೋಲನ’ ಸಭೆಯನ್ನು ಸೆ.12ರಂದು ಸಂಶಿ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ತಹಶೀಲ್ದಾರ ರಾಜು ಮಾವರಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲೂಕಿನ ಸಂಶಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಸಭೆ ನಡೆಯಲಿದ್ದು, ಸ್ಥಳೀಯ ಶಾಸಕ ಎಂ.ಆರ್. ಪಾಟೀಲ ಅವರು ನೇತೃತ್ವ ವಹಿಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಸಾರ್ವಜನಿಕರ…

Read More

ಧಾರವಾಡ:ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಮರು ಅರ್ಜಿ ಆಹ್ವಾನ

ಧಾರವಾಡ: ಜಿಲ್ಲೆಯಲ್ಲಿ ಒಟ್ಟು 42 ಅಂಗನವಾಡಿ ಕಂ ಕ್ರಷ್ ಕೇಂದ್ರಗಳನ್ನು ಮಂಜೂರು ಮಾಡಿ, ಆರು ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಈ ಪೈಕಿ ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆಯರ ಎರಡು ಹಾಗೂ ಸಹಾಯಕಿಯರ 15 ಹುದ್ದೆಗಳಿಗೆ ಈ ಹಿಂದೆ ಅರ್ಹ ಅಭ್ಯರ್ಥಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಮರು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆಯರ ಹುದ್ದೆಗಳು…

Read More

ಧಾರವಾಡ ನಗರ ಹಾಗೂ ಗ್ರಾಮೀಣ ಜಿಲ್ಲಾ ಕಾಂಗ್ರೆಸಗೆ ಹೊಸ ಸಾರಥಿಗಳ ಆಯ್ಕೆ: ಧಾರವಾಡ ನಗರಕ್ಕೆ ಸದಾನಂದ ಡಂಗನವರ, ಗ್ರಾಮೀಣಕ್ಕೆ ಚಂದ್ರಶೇಖರ ಜುಟ್ಟಲ್

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಯಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರ ಜುಟ್ಟಲ್ ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಸದಾನಂದ ವಿ. ಡಂಗನವರ ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕದ ವಿವಿಧ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಆದೇಶ ಹೊರಡಿಸಿದೆ. ಕಾಂಗ್ರೆಸ್ ಅಧ್ಯಕ್ಷರ ಅನುಮೋದನೆಯೊಂದಿಗೆ ಸೆ. 9ರಿಂದಲೇ ನೇಮಕಾತಿಗಳು ಜಾರಿಗೆ ಬಂದಿವೆ ಎಂದು ಎಐಸಿಸಿ ಪ್ರಧಾನ…

Read More

ನವಲಗುಂದ ತಾಲೂಕು ಆಸ್ಪತ್ರೆಯಲ್ಲಿ ಎಕ್ಸ್‌ಪೈರಿ ಮಾತ್ರೆ ವಿತರಣೆ: ಸಿಬ್ಬಂದಿ ವಿರುದ್ಧ ಮಾಬುಸಾಬ ಯರಗುಪ್ಪಿ ಆಕ್ರೋಶ, ಅಮಾನತಿಗೆ ಆಗ್ರಹ

ನವಲಗುಂದ: ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಯ ಭೀಕರ ಕರ್ತವ್ಯ ಲೋಪವೊಂದು ಬೆಳಕಿಗೆ ಬಂದಿದ್ದು, ರೋಗಿಯೊಬ್ಬರಿಗೆ ಅವಧಿ ಮುಗಿಯುವ ಮಾತ್ರೆಗಳನ್ನು ವಿತರಿಸಿ ಜೀವದೊಂದಿಗೆ ಚೆಲ್ಲಾಟವಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಟ್ಟಣದ ತಾಲೂಕು ಆಸ್ಪತ್ರೆಯ ಫಾರ್ಮಸಿ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ಮಕ್ತುಮಸಾಬ ಅಲ್ಲಿಬಾಯಿ ಎಂಬುವವರಿಗೆ ಮುಂದಿನ ತಿಂಗಳು ಅಕ್ಟೋಬರ್ 7ರವರೆಗೆ ನಿರಂತರವಾಗಿ ಬಳಸಲು ‘ಮೆಟ್‌ಫಾರ್ಮಿನ್ 1000 ಮಿಗ್ರಾಂ’ ಮಾತ್ರೆಗಳನ್ನು ನೀಡಲಾಗಿತ್ತು. ಆದರೆ, ಸಿಬ್ಬಂದಿ ಸರಿಯಾಗಿ ಗಮನಿಸದೇ ಸೆಪ್ಟೆಂಬರ್ 2026ಕ್ಕೇ ಅವಧಿ ಮುಗಿಯುವ ಮಾತ್ರೆಗಳನ್ನು ರೋಗಿಯ…

Read More

ಅಧಿಕಾರ ದುರ್ಬಳಕೆ ಆರೋಪ: ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ವಿರುದ್ಧ ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗಕ್ಕೆ ದೂರು

ಧಾರವಾಡ: ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್. ಕೋನರಡ್ಡಿ ಅವರು ತಮ್ಮ ಅಧಿಕಾರ ಬಲ ಬಳಸಿಕೊಂಡು ನಿಯಮಬಾಹಿರವಾಗಿ ಪೊಲೀಸ್ ಎಸ್ಕಾರ್ಟ್ (ಬೆಂಗಾವಲು) ವಾಹನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಅವರು ನಡೆಸುತ್ತಿರುವ ಕಾನೂನು ಹೋರಾಟ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಶಾಸಕರ ವಿರುದ್ಧ ಕರ್ನಾಟಕ ಲೋಕಾಯುಕ್ತ ಹಾಗೂ ಮಾನವ ಹಕ್ಕುಗಳ ಆಯೋಗದಲ್ಲಿ ಅಧಿಕೃತವಾಗಿ ದೂರುಗಳು ದಾಖಲಾಗಿವೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ, ಶಾಸಕ ಎನ್.ಎಚ್. ಕೋನರಡ್ಡಿ…

Read More

ಡ್ರಗ್ಸ್ ವಿರುದ್ಧ ಗುಡುಗಿದ ನೂತನ ಕಮಿಷನರ್‌ಗೆ ಆರೋಪಿಗಳಿಂದಲೇ ಸನ್ಮಾನ; ಪೊಲೀಸ್ ಕಚೇರಿಗೆ ಪ್ರವೇಶ ಹೇಗೆ? ಸಾರ್ವಜನಿಕ ವಲಯದಲ್ಲಿ ಚರ್ಚೆ

ಹುಬ್ಬಳ್ಳಿ-ಧಾರವಾಡ: ಹುಬ್ಬಳ್ಳಿ-ಧಾರವಾಡ ನೂತನ ಪೊಲೀಸ್ ಆಯುಕ್ತರಾಗಿ ಭೂಷಣ್ ಬೋರಸೆ ಅವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಗಾಂಜಾ ಪ್ರಕರಣದ ಆರೋಪಿಯೊಬ್ಬರು ಹಾಗೂ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬರು ಆಯುಕ್ತರನ್ನು ಸನ್ಮಾನಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಎನ್‌ಡಿಪಿಎಸ್ ಪ್ರಕರಣದಲ್ಲಿ ಆರೋಪಿ ಎನ್ನಲಾಗಿರುವ ಖೇತ್‌ಸಿಂಗ್ ರಾಜಪುರೋಹಿತ ಅವರು ಪೊಲೀಸ್ ಆಯುಕ್ತರಿಗೆ ಹೂಗುಚ್ಛ ನೀಡಿ ಸನ್ಮಾನಿಸಿರುವುದು ಫೋಟೋದಲ್ಲಿ ಕಂಡುಬಂದಿದೆ. ಇದೇ ವೇಳೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಮಿತ್…

Read More

ಚೇತನಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಪೋಷಕರೇ ಶಿಕ್ಷಕರಾಗಿ’ ವಿನೂತನ ಕಾರ್ಯಕ್ರಮ

ಕುಂದಗೋಳ: ತಾಲ್ಲೂಕಿನ ಬೆಟದೂರು ಗ್ರಾಮದ ಚೇತನಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ‘ಪೋಷಕರೇ ಶಿಕ್ಷಕರಾಗಿ–ಒಂದು ದಿನ ಮಕ್ಕಳೊಂದಿಗೆ’ ಎಂಬ ವಿನೂತನ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪೋಷಕರಿಗೆ ಒಂದು ದಿನ ಶಿಕ್ಷಕರಾಗಿ ಮಕ್ಕಳಿಗೆ ಬೋಧಿಸುವ ಅವಕಾಶ ಕಲ್ಪಿಸಲಾಗಿತ್ತು. ಪೋಷಕರು ತಮ್ಮ ವೃತ್ತಿ, ಜೀವನಾನುಭವ ಹಾಗೂ ವಿವಿಧ ಕೌಶಲ್ಯಗಳ ಕುರಿತು ಮಕ್ಕಳಿಗೆ ಸರಳವಾಗಿ ತಿಳಿಸಿಕೊಟ್ಟರು. ಮಕ್ಕಳು ಪಠ್ಯಪುಸ್ತಕಗಳಿಂದ ಮಾತ್ರವಲ್ಲದೆ ಸಮಾಜದ ನೈಜ ಅನುಭವಗಳಿಂದಲೂ ಕಲಿಯಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ…

Read More

ನೌಕರರ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವುದು ಶ್ಲಾಘನೀಯ: ಇಮ್ಮಡಿ ಸಿದ್ದೇಶ್ವರ ಶ್ರೀ

ನವಲಗುಂದ: ನೌಕರರ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಅವರನ್ನು ಮತ್ತಷ್ಟು ಸಾಧನೆಗೆ ಉತ್ತೇಜಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಪಂಚಗ್ರಹ ಹಿರೇಮಠದ ಇಮ್ಮಡಿ ಸಿದ್ದೇಶ್ವರ ಶ್ರೀಗಳು ಹೇಳಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನವಲಗುಂದ ತಾಲೂಕು ಶಾಖೆ ವತಿಯಿಂದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ನಿವೃತ್ತ ಸರ್ಕಾರಿ ನೌಕರರು ಹಾಗೂ ಪತ್ರಿಕಾ ಮಾಧ್ಯಮ ಮಿತ್ರರಿಗೆ ಸನ್ಮಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ…

Read More

ದೇವನೂರು ಮಾರ್ಗ ಮಧ್ಯೆ ವಿಷಪೂರಿತ ಆಹಾರ ಸೇವಿಸಿ 20 ಕುರಿ ಸಾವು: ಪರಿಹಾರಕ್ಕಾಗಿ ಕುರಿಗಾಹಿಗಳ ಮನವಿ

ಕುಂದಗೋಳ: ತಾಲ್ಲೂಕಿನ ದೇವನೂರು ಹಾಗೂ ಕುಂದಗೋಳ ಮಾರ್ಗ ಮಧ್ಯದ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ 20 ಕುರಿಗಳು ವಿಷಕಾರಿ ಪದಾರ್ಥ ಸೇವಿಸಿ ಶನಿವಾರ ದುರಂತವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಮುದುಗಲ್ ಗ್ರಾಮದ ಮೂಲದ ಕುರಿಗಾಹಿ ಹನುಮವ್ವ ಗೊಲ್ಲರ ಅವರಿಗೆ ಸೇರಿದ ಕುರಿಗಳು ಇದಾಗಿದ್ದು, ಜೀವನೋಪಾಯಕ್ಕೆ ಆಸರೆಯಾಗಿದ್ದ ಕುರಿಗಳನ್ನು ಕಳೆದುಕೊಂಡು ಮಾಲಕಿ ಕಣ್ಣೀರಿಡುತ್ತಿದ್ದಾರೆ. ತಮ್ಮ ಬಳಿ ಇದ್ದ ಒಟ್ಟು 150 ಕುರಿಗಳ ಪೈಕಿ 20 ಕುರಿಗಳು ಸ್ಥಳದಲ್ಲೇ ಪ್ರಾಣ ಬಿಟ್ಟಿರುವುದರಿಂದ ಅಂದಾಜು 3 ಲಕ್ಷ…

Read More