ಕುಂದಗೋಳ : ಪಟ್ಟಣ ಪಂಚಾಯತ ಸರ್ಕಾರಿ ಕಡತ ಖಾಸಗಿ ಕೈಗೆ ! ಕುರ್ಚಿ ಟೇಬಲ್ ಮೇಲೆ ದರ್ಬಾರ್

Spread the love

ಕುಂದಗೋಳ : ಸರ್ಕಾರಿ ಕಚೇರಿಯಲ್ಲಿ ಯಾರ್‍ಯಾರು ಬಂದು ಅಧಿಕಾರಿಗಳಂತೆ ಜಬರ್ದಸ್ತ್ ಟೇಬಲ್ ಮೇಲೆ ಕುಳಿತು ಕೆಲಸ ಮಾಡುತ್ತಲಿದ್ದರೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಮತ್ತು ಮುಖ್ಯಾಧಿಕಾರಿ ಗಪ್ ಚುಪ್ ಇದ್ದಾರೆ.

ಎಸ್..! ವೀಕ್ಷಕರೇ ಕುಂದಗೋಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೀಗೆ ಟೇಬಲ್ ಮೇಲೆ ಕುಳಿತು ಪೈಲ್ ಮೆಂಟೈನ್ ಮಾಡ್ತಾ ಇರೋ ಈ ಯುವತಿ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ಹೋಗಬೇಕಾದವರು.

ಇಂತಹ ವಿದ್ಯಾವಂತ ಯುವತಿಯನ್ನು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹೊರಗುತ್ತಿಗೆ ನೇಮಕವೂ ಅಲ್ಲಾ, ಯಾವುದೇ ಆದೇಶವೂ ಇಲ್ಲದೆ ಸರ್ಕಾರಿ ಕಚೇರಿ ಆವರಣದಲ್ಲಿ ಟೇಬಲ್ ಕುರ್ಚಿ ಕೊಟ್ಟು ಅವರ ಕೈಗೆ ಸರ್ಕಾರಿ ಕಡತ ನೀಡಿ ಕೆಲಸ ಒಪ್ಪಿಸಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಮುಖ್ಯಾಧಿಕಾರಿ ಸಿ.ವಿ.ಕುಲಕರ್ಣಿ ಅವರನ್ನೂ ಕೇಳಿದ್ರೆ ಪೈಲ್ ಬರಹ ಅವಶ್ಯಕತೆ ಇದ್ದಾಗ ನಾವು ಬರಹಗಾರರನ್ನು ಪಡೆಯುತ್ತೇವೆ ಎಂತಾರೇ, ಹಾಗಿದ್ರೇ ! ಈ ಯುವತಿ ಯಾವ ಪೈಲ್ ಯಾವ ಬರಹ ಮಾಡ್ತಾ ಇದ್ದಾರೆ ? ಅವರಿಗೇಷ್ಟು ಗೌರವಧನ ಕೊಟ್ಟೀರಿ ಎಂದ್ರೇ ಉತ್ತರ ಗೊತ್ತಿಲ್ಲಾ.

ಈ ಬಗ್ಗೆ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ರಾಜು ಮಾವರಕರ ಅವರನ್ನೂ ಕೇಳಿದ್ರೆ ಖಾಸಗಿ ವ್ಯಕ್ತಿ ಸರ್ಕಾರಿ ಕಚೇರಿ ಕಡತ ಬರೆಯುವುದು ತಪ್ಪು ಎಂದಿದ್ದಾರೆ.

ಈ ಖಾಸಗಿ ವ್ಯಕ್ತಿಗೆ ಸರ್ಕಾರಿ ಕಡತ ಬರೆಯಲು ಕೊಟ್ಟ ಸರ್ಕಾರಿ ಅಧಿಕಾರಿ – ಸಿಬ್ಬಂದಿಗೆ ಏನು ಕ್ರಮ ಕೈಗೊಳ್ಳುತ್ತಾರೆ ? ಸರ್ಕಾರಿ ಕಚೇರಿ ಕೆಲಸ ನಂಬಿ ಬಂದ ವಿದ್ಯಾವಂತ ಯುವತಿಗೆ ಯಾವ ರೀತಿ ಸೇವಾ ಗೌರವ ನೀಡುತ್ತಾರೆ ಸ್ಪಷ್ಟತೆ ನೀಡಬೇಕಿದೆ.

ಪಬ್ಲೀಕ್ ಸಮಾಚಾರ ಸುದ್ದಿ ವಾಹಿನಿ ಕುಂದಗೋಳ

Leave a Reply

Your email address will not be published. Required fields are marked *