74ರ ವಯಸ್ಸಿನಲ್ಲಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ವೃದ್ಧೆ..! ವೈದ್ಯಕೀಯ ಲೋಕವೇ ಬೆರಗು
ಆಂಧ್ರಪ್ರದೇಶ: ವೈದ್ಯಕೀಯ ಲೋಕವೇ ಅಚ್ಚರಿಪಡುವಂತಹ ಅಪರೂಪದ ಘಟನೆಯೊಂದು ಆಂಧ್ರಪ್ರದೇಶದಲ್ಲಿ ನಡೆದಿದೆ. 74 ವರ್ಷದ ವೃದ್ಧೆಯೊಬ್ಬರು ಐವಿಎಫ್ (IVF) ತಂತ್ರಜ್ಞಾನದ ನೆರವಿನಿಂದ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಪೂರ್ವ ಗೋದಾವರಿ ಜಿಲ್ಲೆಯ ನೆಲ್ಲಪರ್ತಿಪಡು ಗ್ರಾಮದ ನಿವಾಸಿ ಮಂಗಾಯಮ್ಮ (74) ಹಾಗೂ ಅವರ ಪತಿ ಇ. ರಾಜಾರಾವ್ (82) ಈ ಅಪರೂಪದ ಸಾಧನೆ ಮಾಡಿದ ದಂಪತಿಯಾಗಿದ್ದಾರೆ. 1962ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಬರೋಬ್ಬರಿ 57 ವರ್ಷಗಳ ಕಾಲ ಮಕ್ಕಳಾಗಿರಲಿಲ್ಲ. ಸಮಾಜದ ಹಲವು ಟೀಕೆ ಹಾಗೂ…

