ದೆಹಲಿ ಪ್ರತಿಭಟನೆ ಬೆನ್ನಲ್ಲೇ ಭದ್ರತಾ ಸಂಸ್ಥೆಗಳ ಹೈ ಅಲರ್ಟ್: ಖಲಿಸ್ತಾನಿ ಬೆದರಿಕೆ ಹಾಗೂ ವಿದೇಶಿ ಅನುದಾನದ ಶಂಕೆ ಕುರಿತು ತನಿಖೆ ತೀವ್ರ

Spread the love

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಸಿಜೆಪಿ ಪಕ್ಷದ ವತಿಯಿಂದ ನಡೆಯುತ್ತಿರುವ ಬೃಹತ್ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಗಂಭೀರ ಸಂಚು ರೂಪಿಸಿರುವ ಆಘಾತಕಾರಿ ಮಾಹಿತಿ ಲಭ್ಯವಾಗಿದ್ದು, ದೇಶಾದ್ಯಂತ ವ್ಯಾಪಕ ಕಳವಳಕ್ಕೆ ಕಾರಣವಾಗಿದೆ. ನಿಷೇಧಿತ ಖಲಿಸ್ತಾನ್ ಬೆಂಬಲಿತ ಉಗ್ರ ಸಂಘಟನೆ ‘ಸಿಖ್ಸ್ ಫಾರ್ ಜಸ್ಟಿಸ್’ (SFJ) ಮುಖ್ಯಸ್ಥ ಗುರುಪತ್‌ವಂತ್ ಸಿಂಗ್ ಪನ್ನುನ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹತ್ಯೆಗೆ ಯತ್ನ ಹಾಗೂ ದೆಹಲಿ ವಿಮಾನ ನಿಲ್ದಾಣ ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿರುವ ಹಿಂದಿನ ಆಡಿಯೋ ಮತ್ತು ವಿಡಿಯೋ ಸಂದೇಶಗಳು ಹರಿದಾಡುತ್ತಿರುವ. ಬೆನ್ನಲ್ಲೇ ದೆಹಲಿಯಲ್ಲಿ ಸಿಜೆಪಿ ಪಕ್ಷದ ವತಿಯಿಂದ ನಡೆಯುತ್ತಿರುವ ಪ್ರತಿಭಟನಾ ಸ್ಥಳವಾದ ಜಂತರ್ ಮಂತರ್ ಪ್ರದೇಶದಲ್ಲಿ ಕೆಲ ಶಸ್ತ್ರಸಜ್ಜಿತ ಖಲಿಸ್ತಾನ್ ಬೆಂಬಲಿಗರು ಬಂದೂಕು ಮತ್ತು ಖಡ್ಗ ಹಿಡಿದುಕೊಂಡು ಪೊಲೀಸ್ ವಾಹನಗಳ ಮೇಲೆ ನಿಂತಿರುವ ದೃಶ್ಯಗಳು ಭದ್ರತಾ ಸಂಸ್ಥೆಗಳ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಈ ವಿದ್ರೋಹಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅತ್ಯಂತ ಸ್ಪೋಟಕ ಮಾಹಿತಿಯೊಂದು ಗೃಹ ಸಚಿವಾಲಯಕ್ಕೆ ತಲುಪಿದ್ದು, ಪ್ರತಿಭಟನೆಯ ಹೆಸರಿನಲ್ಲಿ ಭಾರತವನ್ನು ಇಬ್ಬಾಗ ಮಾಡುವ ದುರುದ್ದೇಶದಿಂದ ಸಿಜೆಪಿ ಪಕ್ಷಕ್ಕೆ SFJ ಸಂಘಟನೆಯು ಸುಮಾರು 10 ಕೋಟಿ ರೂಪಾಯಿ ಧನಸಹಾಯ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ಗಂಭೀರತೆಯನ್ನು ತಕ್ಷಣವೇ ಅರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಸಭೆ ನಡೆಸಿ, ಭದ್ರತಾ ಪಡೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇಂತಹ ದೇಶವಿರೋಧಿ ಶಕ್ತಿಗಳ ಹೆಡೆಮುರಿ ಕಟ್ಟಲು ಕೇಂದ್ರ ಗೃಹ ಇಲಾಖೆಯು ಅರೆಸೇನಾ ಪಡೆ (CRPF) ಹಾಗೂ ವಿಶೇಷ ತನಿಖಾ ತಂಡಗಳಿಗೆ ಸಂಪೂರ್ಣ ಪೂರ್ಣಪ್ರಮಾಣದ ಕಾರ್ಯಾಚರಣೆಗೆ ಹಸಿರು ನಿಶಾನೆ ತೋರಿದೆ.

ಇದಲ್ಲದೆ, ಭಾರತದಲ್ಲಿ ಆಂತರಿಕ ಅಶಾಂತಿ ಸೃಷ್ಟಿಸುವ ಹಿತದೃಷ್ಟಿಯಿಂದ ಪಾಕಿಸ್ತಾನ, ಬಾಂಗ್ಲಾದೇಶ, ಖತಾರ್ ಸೇರಿದಂತೆ ಹತ್ತಾರು ವಿದೇಶಿ ಶಕ್ತಿಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ ನೆರವಾಗುತ್ತಿರುವುದು ಬೆಳಕಿಗೆ ಬಂದಿದೆ. ಪ್ರತಿಭಟನಾಕಾರರು ಆಯಾಸಗೊಳ್ಳಬಾರದು ಎಂಬ ದುರುದ್ದೇಶದಿಂದ ಆನ್‌ಲೈನ್ ಡೆಲಿವರಿ ಆ್ಯಪ್‌ಗಳ ಮೂಲಕ ಉಚಿತವಾಗಿ ಪಿಜ್ಜಾ, ಬರ್ಗರ್ ಹಾಗೂ ಶಕ್ತಿದಾಯಕ ಹಣ್ಣುಗಳನ್ನು ಸರಬರಾಜು ಮಾಡಲು ವಿದೇಶಗಳಿಂದ ನೇರ ಫಂಡಿಂಗ್ ನಡೆಯುತ್ತಿದೆ. ಈ ಡೆಲಿವರಿ ಕಾರ್ಯಕರ್ತರು ತಾವು ಈಗಾಗಲೇ ಹತ್ತಾರು ಬಾರಿ ವಿದೇಶಿ ಆರ್ಥಿಕ ನೆರವಿನಿಂದ ಬಂದಿರುವ ಆಹಾರ ಸಾಮಗ್ರಿಗಳನ್ನು ಪೂರೈಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಲಾರಿಗಟ್ಟಲೆ ರಗ್ಗುಗಳು, ಸುಸಜ್ಜಿತ ಆಹಾರ ಪದಾರ್ಥಗಳು ಸರಬರಾಜಾಗುತ್ತಿದ್ದು, ಇದು ಅತ್ಯಂತ ಪೂರ್ವಯೋಜಿತವಾಗಿ ಸರ್ಕಾರಕ್ಕೆ ಮತ್ತು ದೇಶಕ್ಕೆ ಎಸಗುತ್ತಿರುವ ದ್ರೋಹವಾಗಿದೆ ಎಂಬುದನ್ನು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳು ಮತ್ತು ರಾಜಕೀಯ ನಾಯಕರು ಅರ್ಥಮಾಡಿಕೊಳ್ಳಬೇಕಿದೆ.

ಪ್ರಸ್ತುತ ಪರಿಸ್ಥಿತಿಯನ್ನು ಹತೋಟಿಗೆ ತರಲು ದೆಹಲಿಯ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, CRPF ಪಡೆಗಳನ್ನು ಏರ್ ಲಿಫ್ಟ್ ಮಾಡುವ ಮೂಲಕ ತುರ್ತಾಗಿ ವಿವಿಧ ಭಾಗಗಳಿಂದ ದೆಹಲಿಗೆ ಕರೆಯಿಸಿಕೊಳ್ಳಲಾಗುತ್ತಿದೆ. ಪ್ರತಿಭಟನೆಯ ಮರೆಯಲ್ಲಿ ಅಡಗಿರುವ ಸಶಸ್ತ್ರ ಉಗ್ರರನ್ನು ಹಾಗೂ ಅಶಾಂತಿ ಹಬ್ಬಿಸಲು ಯತ್ನಿಸುತ್ತಿರುವ ದೇಶವಿರೋಧಿಗಳನ್ನು ಗುರುತಿಸಿ ಗಡಿಪಾರು ಮಾಡಲು ಅಥವಾ ಬಂಧಿಸಲು ಸೇನಾ ಪಡೆಗಳು ಮಿಂಚಿನ ಕಾರ್ಯಾಚರಣೆ ಆರಂಭಿಸಿವೆ. ದೆಹಲಿ ಪೊಲೀಸರು ಹಾಗೂ ಕೇಂದ್ರ ಗುಪ್ತಚರ ಇಲಾಖೆ (IB) ಜಂಟಿಯಾಗಿ ಪ್ರತಿಯೊಂದು ಚಲನವಲನಗಳ ಮೇಲೆ ತೀವ್ರ ಕಣ್ಣಿಟ್ಟಿದ್ದು, ದೇಶದ ಭದ್ರತೆಗೆ ಸವಾಲೆಸೆಯುವ ಯಾವುದೇ ಶಕ್ತಿಯನ್ನು ಕ್ಷಮಿಸುವುದಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ಆದ್ದರಿಂದ, ಈ ದೇಶವಿರೋಧಿ ಕೃತ್ಯಗಳ ಗಂಭೀರತೆಯನ್ನು ಅರಿತು ಸಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ನಾಯಕರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.

Leave a Reply

Your email address will not be published. Required fields are marked *