ತೆಲಂಗಾಣದಲ್ಲಿ: ಗಣೇಶ ಮೂರ್ತಿಗೆ ವಿದ್ಯುತ್ ತಗುಲಿ 10ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ದುರಂತದ ಕುರಿತು: ಮಹಾವೀರ ಜೈನ ಎಂಬುವವರು ತಮ್ಮ ‘X’ (ಟ್ವಿಟರ್) ಖಾತೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕೇವಲ ಅಪಘಾತವಲ್ಲ, ಬದಲಾಗಿ ನಮ್ಮೆಲ್ಲರ ಬೇಜವಾಬ್ದಾರಿಯ ಪರಿಣಾಮ ಎಂದು ಅವರು ಆತಂಕದಿಂದ ಹೇಳಿದ್ದಾರೆ.
ಮಹಾವೀರ ಜೈನ ಅವರು, ಹಬ್ಬದ ಸಂಭ್ರಮದ ನಡುವೆಯೂ ಸುರಕ್ಷತಾ ನಿಯಮಗಳನ್ನು ನಿರ್ಲಕ್ಷಿಸಬಾರದು ಎಂದು ಗಣೇಶ ಮಂಡಳಿಗಳು ಮತ್ತು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಒಂದು ಜೀವದ ಮೌಲ್ಯ ಯಾವುದೇ ಹಬ್ಬಕ್ಕಿಂತಲೂ ದೊಡ್ಡದು ಎಂದು ಒತ್ತಿ ಹೇಳಿರುವ ಅವರು, ಇಂತಹ ದುರಂತಗಳು ಮತ್ತೆ ಮರುಕಳಿಸದಂತೆ ಎಚ್ಚರವಹಿಸಬೇಕಾದ ಅಗತ್ಯವಿದೆ ಎಂದು ಕರೆ ನೀಡಿದ್ದಾರೆ.
ಜೈನ ಅವರು, ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮತ್ತು ವಿಸರ್ಜನೆ ಮಾಡುವಾಗ ವಿದ್ಯುತ್ ತಂತಿಗಳು ಹಾಗೂ ಅಪಾಯಕಾರಿ ಪ್ರದೇಶಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.
ಅವರ ಈ ಸಾಮಾಜಿಕ ಕಳಕಳಿಯುಳ್ಳ ಮಾತುಗಳು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ.


