ಟೀಕೆ-ಟಿಪ್ಪಣಿಗಳಿಗೆ ಜಗ್ಗುವವನು ನಾನಲ್ಲ; ನನ್ನದು ಅಭಿವೃದ್ಧಿ ಮಂತ್ರ: ಶಾಸಕ ಎನ್.ಎಚ್. ಕೋನರಡ್ಡಿ
ಅಣ್ಣಿಗೇರಿ: “ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ನಾನು ಎಂದಿಗೂ ರಾಜಕೀಯ ಮಾಡುವುದಿಲ್ಲ. ಅನಗತ್ಯ ಟೀಕೆ-ಟಿಪ್ಪಣಿಗಳಿಗೆ ಜಗ್ಗುವವನು ನಾನಲ್ಲ, ನನ್ನ ಕೆಲಸವೇ ನನಗೆ ಅಭಿವೃದ್ಧಿಯ ಮಂತ್ರವಾಗಿದೆ,” ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಹೇಳಿದರು. ಅಣ್ಣಿಗೇರಿ ಪಟ್ಟಣದ ಯುಜಿಡಿ (ಒಳಚರಂಡಿ) ಯೋಜನೆಗೆ 124 ಕೋಟಿ ರೂ. ಅನುದಾನ ಮೀಸಲಿಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ನಗರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಅಭಿನಂದನೆ ಸಲ್ಲಿಸಲು ಶನಿವಾರ…

