ಇತಿಹಾಸ ಪ್ರಸಿದ್ಧ ರಾಮಲಿಂಗೇಶ್ವರ ಕಾಮಣ್ಣನ ದೇವಸ್ಥಾನದಲ್ಲಿ ಫೆ.26ರಂದು ಕಳಸಾರೋಹಣ
ನವಲಗುಂದ : ಪಟ್ಟಣದ ಇತಿಹಾಸ ಪ್ರಸಿದ್ಧ ಹಾಗೂ ಭಕ್ತರ ಆರಾಧ್ಯ ದೈವವಾಗಿರುವ ಶ್ರೀ ರಾಮಲಿಂಗೇಶ್ವರ ಕಾಮಣ್ಣನ ದೇವಸ್ಥಾನದಲ್ಲಿ ಕಳಸಾರೋಹಣ, ನೂತನ ಕಾರ್ಯಾಲಯ ಹಾಗೂ ಯಾತ್ರಿನಿವಾಸ ಉದ್ಘಾಟನೆ ಮತ್ತು ಭಕ್ತರ ಮನೆಗಳ ಹಸ್ತಾಂತರ ಕಾರ್ಯಕ್ರಮವು ಫೆ.26ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ರಾಮಲಿಂಗ ಓಣಿಯಲ್ಲಿ ನಡೆಯಲಿದೆ. ಕಾರ್ಯಕ್ರಮವು ಭಾವೈಕ್ಯತಾ ಮಹಾಸಂಸ್ಥಾನ ಪೀಠ, ಶಿರಹಟ್ಟಿಯ ಪೂಜ್ಯ ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಲಿದೆ.ಪಂಚಗ್ರಹ ಹಿರೇಮಠ, ನವಲಗುಂದದ ಪೂಜ್ಯ ಶ್ರೀ ಷ.ಬ್ರ. ಶ್ರೀ…

