ಅಹಿಂಸಾ ಮಾರ್ಗದಿಂದ ಮಾತ್ರ ಜೀವನದಲ್ಲಿ ನೆಮ್ಮದಿ ಸಾಧ್ಯ: ಪತ್ರಕರ್ತ ಗೋಣೆಪ್ಪ ದೀಪಾವಳಿ ಅಭಿಮತ

Spread the love

ರಾಣೇಬೆನ್ನೂರ: ಇಲ್ಲಿನ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ತಾಲೂಕಾ ಆಡಳಿತ ಮತ್ತು ವಿವಿದ ಸಂಘಟನೆಗಳ ವತಿಯಿಂದ ಶುಕ್ರವಾರ ಭಗವಾನ ಗೌತಮ ಬುದ್ಧರ ಜಯಂತಿಯನ್ನು ಆಚರಿಸಲಾಯಿತು.

ಪತ್ರಕರ್ತ ಗೋಣೆಪ್ಪ ದೀಪಾವಳಿ ಈ ವೇಳೆ ಭಗವಾನ ಗೌತಮ ಬುದ್ಧರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಅಹಿಂಸಾ ಮಾರ್ಗವನ್ನು ಪ್ರತಿಪಾದಿಸಿದ ಭಗವಾನ ಗೌತಮ ಬುದ್ಧರು ಪ್ರಾಣಿಗಳ ಹಿಂಸೆ ಮಾಡಬಾರದು ಮಹಾಪಾಪ, ಸಕಲ ಜೀವಿಗಳ ಮೇಲೆ ದಯವಿರಬೇಕು ಎಂದು ಬೋಧಿಸಿದವರು ಅವರ ವಿಚಾರ ಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಡೆಗಾಗ ಮಾತ್ರ ಜಯಂತಿಗೆ ಅರ್ಥ ಬರಲಿದೆ ಎಂದರು.

ಇಂದಿನ ಯುವ ಪೀಳಿಗೆಯಿಂದ ಹಿಡಿದು ಸರ್ವರೂ ಗೌತಮ ಬುದ್ಧರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಅಂತವರ ಜೀವನ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಬುದ್ಧರ ಹಲವಾರು ವಿಚಾರಧಾರೆಗಳನ್ನು ಮನಮುಟ್ಟುವಂತೆ ಮಾತನಾಡಿದರು.

ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ನಾಗರಾಜ ಕುಂಚರ‍್ಕರ, ಚಂದ್ರಶೇಖರ ಕುಂಬಳೂರ, ದೇವರಾಜ ಕಾಂಬಳೆ, ಪ್ರವೀಣ ಕುಂಬಾರ, ನಾಗರಾಜ ಸೋಮಕ್ಕಳವರ ಸೇರಿದಂತೆ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *