ಶಿಗ್ಗಾಂವ: ತಂದೆ-ತಾಯಿ, ಗುರುಗಳನ್ನು ಗೌರವಿಸಿದಾಗ ಮಾತ್ರ ಜೀವನದಲ್ಲಿ ಸಾಧನೆ ಸಾಧ್ಯ: ಬಿಇಒ ಎಂ.ಬಿ. ಅಂಬಿಗೇರ
ಶಿಗ್ಗಾಂವ: ಜಗತ್ತಿನಲ್ಲಿ ಶ್ರೇಷ್ಠ ಜೀವಗಳು ಎಂದರೆ ತಂದೆ, ತಾಯಿ ಹಾಗೂ ಗುರುಗಳು. ಇವರು ನಿಸ್ವಾರ್ಥಿಗಳಾಗಿದ್ದು, ಅವರನ್ನು ಗೌರವಿಸುವುದರ ಜೊತೆಗೆ ಅವರ ಒಳ್ಳೆಯ ಮಾತುಗಳನ್ನು ಆಲಿಸಿ ಜೀವನದಲ್ಲಿ ಪಾಲಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು. ಅವರು ಬುಧವಾರ ಪಟ್ಟಣದ ಆಶ್ರಯ ಪ್ಲಾಟ್ ಸಮೀಪದ ಸರ್ಕಾರಿ ಕನ್ನಡ ಪ್ರೌಢಶಾಲೆಯಲ್ಲಿ ಮಾತ್ರೋಶ್ರೀ ಅನಸೂಯಾ ಫಕ್ಕೀರಪ್ಪ ಯಲಿಗಾರ ಸೇವಾ ಸಂಸ್ಥೆಯ ವತಿಯಿಂದ ದಿ. ಫಕ್ಕೀರಪ್ಪ ಯಲಿಗಾರ ಅವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ…

