ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ: ಸೆ 24 ರಂದು

Spread the love

ಕುಂದಗೋಳ : ತಾಲ್ಲೂಕಿನ ಕಳಸ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಇದರ 2024-25ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಬುಧವಾರ, ಸೆಪ್ಟೆಂಬರ್ 24, ರಂದು ಬೆಳಿಗ್ಗೆ 11:00 ಗಂಟೆಗೆ ಸಂಘದ ಕಚೇರಿಯಲ್ಲಿ ಕರೆಯಲಾಗಿದೆ. ಸಂಘದ ಅಧ್ಯಕ್ಷರಾದ ಶ್ರೀ ಸುರೇಶ ಮಹಾಂತಪ್ಪ ಕಳಸೂರ ಅವರ ಅಧ್ಯಕ್ಷತೆಯಲ್ಲಿ ಈ ಸಭೆಯು ನಡೆಯಲಿದೆ.

ಸಭೆಯಲ್ಲಿ ಹಿಂದಿನ ವರ್ಷದ ಲೆಕ್ಕಪರಿಶೋಧನಾ ವರದಿ ಮತ್ತು ಮಂಡಳಿ ವರದಿಯನ್ನು ಪರಿಗಣಿಸುವುದು, ನಿವ್ವಳ ಲಾಭಗಳ ವಿಂಗಡಣೆ, ಆಯ-ವ್ಯಯಗಳಿಗೆ ಮಂಜೂರಾತಿ, ಹಾಗೂ 2025-26ನೇ ಸಾಲಿನ ಲೆಕ್ಕ ಪರಿಶೋಧಕರ ನೇಮಕಾತಿಯಂತಹ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಸಂಘದ ಪ್ರಭಾರಿ ಮುಖ್ಯ ಕಾರ್ಯನಿರ್ವಾಹಕ ಶ್ರೀ ವೀರಭದ್ರಪ್ಪ ಗು. ಶಿರಹಟ್ಟಿ ಅವರು ಸದಸ್ಯರಿಗೆ ಈ ವಿಷಯಗಳ ಕುರಿತು ನೋಟಿಸ್ ಮೂಲಕ ಮಾಹಿತಿ ನೀಡಿದ್ದಾರೆ.

ಆಡಳಿತ ಮಂಡಳಿಯ ಸದಸ್ಯರಾದ ಸಿದ್ದಪ್ಪ ರಾ. ತಳವಾರ (ಉಪಾಧ್ಯಕ್ಷರು), ರೇವಣಶಿದ್ದಯ್ಯ. ನೆಗಳೂರಮಠ, ವೀರಣ್ಣ ಗ. ದೊಡ್ಡೂರ, ಗಿರೀಶ ಭೀ. ಪಾಟೀಲ, ನಿಂಗಪ್ಪ ನಾ. ರಡ್ಡೇರ, ಬಸವರಾಜ ಮಾ. ದೊಡ್ಡಮಲ್ಲಪ್ಪನವರ, ಮೃತ್ಯುಂಜಯ ನಿಂ. ನಾಗಶೆಟ್ಟಿ, ಮೌಲಾಲಿಸಾಬ ಹು. ಗುಡಾರದ, ಬೂದಪ್ಪ ವಂ. ಭಜಂತ್ರಿ, ಲಕ್ಷ್ಮವ್ವ ಕೋಂ. ನಾ. ಹೊಸಮನಿ, ಮಲ್ಲವ್ವ ಕೋಂ. ನಾ. ಅರಳಿ, ಮತ್ತು ಕೆ.ಸಿ.ಸಿ ಬ್ಯಾಂಕ್ ಹಿರಿಯ ನಿರೀಕ್ಷಕರು ಸೇರಿದಂತೆ ಎಲ್ಲರೂ ಸಭೆಯಲ್ಲಿ ಭಾಗವಹಿಸುವರು.

ಸಂಘದ ಸದಸ್ಯರು, ತಮ್ಮ ಗುರುತಿನ ಚೀಟಿ ಮತ್ತು ವಾರ್ಷಿಕ ಮಹಾಸಭೆಯ ನೋಟಿಸ್ ಅನ್ನು ಕಡ್ಡಾಯವಾಗಿ ತರಬೇಕೆಂದು ತಿಳಿಸಲಾಗಿದೆ. ವಿಷಯ ಪಟ್ಟಿಯಲ್ಲಿಲ್ಲದ ಇತರೆ ವಿಷಯಗಳನ್ನು ಚರ್ಚಿಸುವುದಿದ್ದಲ್ಲಿ, ಮೂರು ದಿನಗಳ ಒಳಗಾಗಿ ಲಿಖಿತ ರೂಪದಲ್ಲಿ ಕಾರ್ಯನಿರ್ವಾಹಕರಿಗೆ ಸಲ್ಲಿಸಲು ಸೂಚಿಸಲಾಗಿದೆ.

Leave a Reply

Your email address will not be published. Required fields are marked *