ಆನಂದ ಪಾಟೀಲರು ನಾಡಿನ ಸೃಜನಶೀಲ ಮಕ್ಕಳ ಸಾಹಿತಿ: ಸ.ರಾ. ಸುಳಕೂಡೆ

ಧಾರವಾಡ: ಮಕ್ಕಳಿಗಾಗಿ ವಿಶೇಷವಾಗಿ ಸಾಹಿತ್ಯ ಕೃಷಿ ಮಾಡಿರುವ ಹಿರಿಯ ಸಾಹಿತಿ ಆನಂದ ಪಾಟೀಲ ಅವರು ನಾಡಿನ ಸೃಜನಶೀಲ ಮಕ್ಕಳ ಸಾಹಿತಿ ಎಂದು ‘ಹೊಂಬೆಳಕು ಸಾಂಸ್ಕೃತಿಕ ಸಂಘ’ದ ಅಧ್ಯಕ್ಷ ಸ.ರಾ. ಸುಳಕೂಡೆ ಅವರು ಪ್ರಶಂಸಿಸಿದರು. ಬೆಂಗಳೂರಿನ ಭಾರತೀಯ ವಿದ್ಯಾ ಭವನ ಮತ್ತು ವಿನಾಯಕ ಗೋಕಾಕ ವಾಙ್ಮಯ ಟ್ರಸ್ಟ್‌ನಿಂದ 2025ನೇ ಸಾಲಿನ ಪ್ರತಿಷ್ಠಿತ ವಿ.ಕೃ. ಗೋಕಾಕ್ ಪ್ರಶಸ್ತಿ ಪುರಸ್ಕೃತರಾಗಿರುವ ಆನಂದ ಪಾಟೀಲ ಅವರನ್ನು ನಗರದ ಆಝಾದ ಉಪವನದ ಗಾಂಧೀಜಿ ಪ್ರತಿಮೆ ಆವರಣದಲ್ಲಿ ಸನ್ಮಾನಿಸಿ ಮಾತನಾಡಿದ ಸುಳಕೂಡೆ, “ಪಾಟೀಲರು ತಮ್ಮ ಮುಗ್ಧತೆ,…

Read More

ಡಾ. ಎಸ್.ಎಲ್. ಭೈರಪ್ಪ ನಿಧನಕ್ಕೆ ಕ.ವಿ.ವ. ಸಂಘದಿಂದ ತೀವ್ರ ಸಂತಾಪ

ಧಾರವಾಡ: ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಕಾದಂಬರಿಕಾರ ಹಾಗೂ ತತ್ವಜ್ಞಾನಿ ಡಾ. ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘವು ತೀವ್ರ ಸಂತಾಪ ಸೂಚಿಸಿದೆ. ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಭೈರಪ್ಪನವರು ಇಂದು ಮಧ್ಯಾಹ್ನ ನಿಧನರಾದ ಸುದ್ದಿ ತಿಳಿದು ಕನ್ನಡ ಸಾರಸ್ವತ ಲೋಕ ಕಂಬನಿ ಮಿಡಿದಿದೆ. ತಮ್ಮ ಅನನ್ಯ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಡಾ. ಭೈರಪ್ಪ ಅವರು ಅಪಾರ ಓದುಗರನ್ನು ಸೃಷ್ಟಿಸಿದ್ದರು. ‘ವಂಶವೃಕ್ಷ’, ‘ಪರ್ವ’, ‘ಆವರಣ’, ‘ಯಾನ’,…

Read More

ಕುಂದಗೋಳ: ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ಕಾಶಪ್ಪನವರ್ ನಿರ್ಧಾರಕ್ಕೆ ತೀವ್ರ ವಿರೋಧ

ಕುಂದಗೋಳ: ಜಾತಿ ಗಣತಿ ಸಮೀಕ್ಷೆಯವರು ಮನೆಗೆ ಬಂದಾಗ ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಮತ್ತು ಜಾತಿಯ ಕಾಲಂನಲ್ಲಿ ‘ಲಿಂಗಾಯತ ಪಂಚಮಸಾಲಿ’ (ಕೋಡ್: 0868) ಎಂದು ನಮೂದಿಸುವಂತೆ ಸಮಾಜದ ಬಾಂಧವರಲ್ಲಿ ಮನವಿ ಮಾಡುವುದಾಗಿ ಲಿಂಗಾಯತ ಪಂಚಮಸಾಲಿ ತಾಲ್ಲೂಕು ಸಮಾಜದ ಅಧ್ಯಕ್ಷ ನಾಗರಾಜ ದೇಶಪಾಂಡೆ ತಿಳಿಸಿದರು. ಈ ಮಾಹಿತಿಯನ್ನು ಸಮಾಜದ ಇತರರಿಗೂ ತಲುಪಿಸುವಂತೆ ಅವರು ವಿನಂತಿಸಿಕೊಂಡರು. ಪಟ್ಟಣದ ಕಲ್ಯಾಣಪುರದ ಶ್ರೀ ಬಸವಣ್ಣಜ್ಜನವರ ಮಠದ ಆವರಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಬಸವ ಮೃತ್ಯುಂಜಯ ಸ್ವಾಮೀಜಿಗಳನ್ನು ಪೀಠದಿಂದ ಉಚ್ಛಾಟನೆ ಮಾಡುವ ಯಾವುದೇ…

Read More

ಗುಡಗೇರಿಯಲ್ಲಿ ಸಿಲಿಂಡರ್ ಸ್ಪೋಟ ಮನೆಯಲ್ಲಿದ್ದ ಹಣ ಹಾಗೂ ಕೆಲ ವಸ್ತುಗಳು ಸುಟ್ಟು ಭಷ್ಮ

ಕುಂದಗೋಳ: ಒಂದು ಸಣ್ಣ ಘಟನೆ ಬದುಕು ಕಟ್ಟಿ ಬೆಳೆಸಿದ ಒಂದು ಕುಟುಂಬದ ಅಸ್ತಿತ್ವವನ್ನೇ ಪ್ರಶ್ನಿಸಿದೆ. ಗೃಹಪಯೋಗಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಾಗಿ ಇಡೀ ಮನೆ ಹೊತ್ತಿ ಉರಿದಿದ್ದು, ಕಿಮ್ಮತ್ತಿನ ವಸ್ತುಗಳು ಸುಟ್ಟು ಭಸ್ಮವಾಗಿವೆ. ಈ ದುರಂತ ಘಟನೆ ಕುಂದಗೋಳ ತಾಲ್ಲೂಕಿನ ಗುಡಗೇರಿ ಗ್ರಾಮದಲ್ಲಿ ನಡೆದಿದೆ. ಏನಾಯಿತು?ಗುಡಗೇರಿ ಗ್ರಾಮದ ಮಾಬುಲಿ ಹಜರೇಸಾಬ್ ಕಣವಿ ಎಂಬುವವರ ಮನೆ, ಸೋಮವಾರ ಬೆಳಿಗ್ಗೆ ಸಂಭವಿಸಿದ ದುರಂತಕ್ಕೆ ಸಾಕ್ಷಿಯಾಗಿದೆ. ಅಡುಗೆ ಮನೆಯಲ್ಲಿ ಗೃಹಪಯೋಗಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಾದ ಪರಿಣಾಮ ಭೀಕರ ಬೆಂಕಿ ಹೊತ್ತಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿಯ…

Read More

ಕುಂದಗೋಳದಲ್ಲಿ ಪೌರಕಾರ್ಮಿಕರ ದಿನಾಚರಣೆ: ಪೌರಕಾರ್ಮಿಕರಿಂದ ರೋಗಿಗಳಿಗೆ ಹಣ್ಣು ವಿತರಣೆ

ಕುಂದಗೋಳ: ಪಟ್ಟಣ ಪಂಚಾಯತಿಯ ಪೌರಕಾರ್ಮಿಕರು ತಮ್ಮ ದಿನಾಚರಣೆಯ ಪ್ರಯುಕ್ತ ಮಂಗಳವಾರ ತಾಲ್ಲೂಕು ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿ ಮಾನವೀಯತೆ ಮೆರೆದರು. ಪೌರಕಾರ್ಮಿಕರು ತಾವು ಕೇವಲ ಪಟ್ಟಣದ ಸ್ವಚ್ಛತೆ ಕಾಪಾಡುವವರು ಮಾತ್ರವಲ್ಲದೆ, ಸಮಾಜದ ಬಗ್ಗೆಯೂ ಕಾಳಜಿ ಹೊಂದಿದ್ದೇವೆ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟರು. ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳನ್ನು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿ, ಹಣ್ಣು-ಹಂಪಲುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ, ಇತರ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು. ಪೌರಕಾರ್ಮಿಕರ…

Read More

ಕಥೆಗಳು ವೈಚಾರಿಕತೆಯನ್ನು ಹೆಚ್ಚಿಸುತ್ತವೆ: ಡಾ. ಮಲ್ಲಿಕಾ ಘಂಟಿ

ಧಾರವಾಡ: ಕಥೆಗಳು ಕಲ್ಪನೆ ಹಾಗೂ ಆಲೋಚನೆಗಳನ್ನು ಹುಟ್ಟುಹಾಕಿ ಓದುಗರಲ್ಲಿ ವೈಚಾರಿಕತೆಯನ್ನು ಸೃಷ್ಟಿಸುತ್ತವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು ಚೆನ್ನಬಸಪ್ಪ ಸಾದರ ಅವರ ಸಂಸ್ಮರಣೆಯಲ್ಲಿ ಆಯೋಜಿಸಿದ್ದ “ಮಿತಸಮಯ ಮಹಿಳಾ ಕಥಾಸಂಚಯ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಹತ್ತು ಜನ ಕಥೆಗಾರ್ತಿಯರು ತಮ್ಮ ಹತ್ತು ನಿಮಿಷದ ಅವಧಿಯಲ್ಲಿ ಹತ್ತು ಹೊಸ ಕಥೆಗಳನ್ನು ಸರಳ ಮತ್ತು ವಿಭಿನ್ನ ಶೈಲಿಯಲ್ಲಿ ವಾಚಿಸಿದರು. ಈ ಕಥೆಗಳು ವೈಚಾರಿಕತೆಗಳಿಂದ ಕೂಡಿದ್ದು,…

Read More

ಮಕ್ಕಳ ಆರೋಗ್ಯಕ್ಕೆ ಪೋಷಣ ಅಭಿಯಾನ ಶಕ್ತಿ ತುಂಬಿದೆ: ಜಿ.ಪಂ. ಸಿಇಓ ಭುವನೇಶ ಪಾಟೀಲ

ಧಾರವಾಡ: ಪೋಷಣ ಅಭಿಯಾನವು ಮಕ್ಕಳ ಭವಿಷ್ಯವನ್ನು ರೂಪಿಸುವ ಶಕ್ತಿಯುತ ಕಾರ್ಯಕ್ರಮವಾಗಿದ್ದು, ಇದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಭುವನೇಶ ಪಾಟೀಲ ಹೇಳಿದರು.ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ನಡೆದ 8ನೇ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಿರಿಧಾನ್ಯ ಮತ್ತು ಹಸಿರು ಸೊಪ್ಪಿನ…

Read More

ಶಾಸಕ ಎಂ.ಆರ್. ಪಾಟೀಲ ಅವರಿಂದ ಅತಿವೃಷ್ಟಿ ಸಂತ್ರಸ್ತರಿಗೆ 14 ಬಗೆಯ ಕಿಚನ್ ಸೆಟ್ ವಿತರಣೆ; ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಕ್ಕೆ ಶ್ಲಾಘನೆ

ಕುಂದಗೋಳ: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸಂಕಷ್ಟಕ್ಕೆ ಒಳಗಾದ ತಾಲೂಕಿನ ಬಡ ಮತ್ತು ಸಂತ್ರಸ್ತ ಕುಟುಂಬಗಳಿಗೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಧಾರವಾಡ ವತಿಯಿಂದ ಪರಿಹಾರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಮಂಗಳವಾರದು ತಾ ಪಂ ಸಭಾಭವನದಲ್ಲಿ ನಡೆಯಿತು. ಈ ಸಮಯದಲ್ಲಿ ಶಾಸಕ ಎಂ.ಆರ್. ಪಾಟೀಲ ಅವರು ಅಡುಗೆ ಪಾತ್ರೆ, ಮರದ ಸೌಟುಗಳು, ಲೋಟಗಳು, ತಟ್ಟೆಗಳು ಹೀಗೆ 14 ಬಗೆಯ ವಸ್ತುಗಳನ್ನು ಒಳಗೊಂಡ ಕಿಚನ್ ಸೆಟ್ ಗಳನ್ನು ವಿತರಿಸಿ ಮಾತನಾಡಿ.“ಸರ್ಕಾರದ ನೆರವಿಲ್ಲದೆ, ದಾನಿಗಳಿಂದ ದೇಣಿಗೆ ಸಂಗ್ರಹಿಸಿ ನಿಸ್ವಾರ್ಥ ಸೇವೆ…

Read More

ಮಾಲಿನ್ಯ ನಿಯಂತ್ರಣಕ್ಕೆ ವಿದ್ಯಾರ್ಥಿಗಳು ಕೈ ಜೋಡಿಸಲಿ: ಪರಿಸರ ಅಧಿಕಾರಿ ಐ ಎಚ್ ಜಗದೀಶ್ ಕರೆ

ಕುಂದಗೋಳ: : ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಕಂಕಣಬದ್ಧರಾಗಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ)ಯ ಧಾರವಾಡ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಐ.ಎಚ್. ಜಗದೀಶ್ ಕರೆ ನೀಡಿದರು.ಅವರು ಮಂಗಳವಾರದಂದು ಸಂಶಿ ಗ್ರಾಮದ ಕೆಎಲ್‌ಇ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಹುಬ್ಬಳ್ಳಿ-ಧಾರವಾಡ ನಾಗರಿಕ ಪರಿಸರ ಸಮಿತಿ ಮತ್ತು ಕೆಎಲ್‌ಇ ಕಾಲೇಜು ಸಂಶಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ‘ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ’ದ ಅಂಗವಾಗಿ ‘ಪರಿಸರ ಜಾಗೃತಿ’ ಕಾರ್ಯಕ್ರಮದಲ್ಲಿ…

Read More

ಸಮೀಕ್ಷೆಗೆ ಚಾಲನೆ: ಧಾರವಾಡದಲ್ಲಿ ಡಿಸಿ ಪರಿಶೀಲನೆ, ಸಾರ್ವಜನಿಕರಿಗೆ ಸಹಕಾರಕ್ಕೆ ಮನವಿ

ಧಾರವಾಡ: ಸೆ. 22 – ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾದ್ಯಂತ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಧಾರವಾಡ ಜಿಲ್ಲೆಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸ್ವತಃ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ಪರಿಶೀಲಿಸಿದರು. ಜಿಲ್ಲಾಧಿಕಾರಿಗಳು ಇಂದು ಮಧ್ಯಾಹ್ನ ಧಾರವಾಡ ನಗರದ ಪೆಂಡಾರಗಲ್ಲಿ ಮತ್ತು ತಡಕೋಡ ಓಣಿ ಪ್ರದೇಶಗಳಲ್ಲಿ ಸಂಚರಿಸಿ, ಸಮೀಕ್ಷಕರು ನಡೆಸುತ್ತಿರುವ ಕಾರ್ಯವನ್ನು ಕೂಲಂಕಷವಾಗಿ ಪರಿಶೀಲಿಸಿದರು. ಈ ವೇಳೆ, ಪೆಂಡಾರಗಲ್ಲಿಯ ರೇಣುಕಾ ಬೋಮ್ಮಣ್ಣವರ ಅವರ…

Read More