ಗರಗ ಗ್ರಾಮದಲ್ಲಿ ದೇಗುಲ ವಿವಾದ ತಾರಕಕ್ಕೆ: ನಿಷೇಧಾಜ್ಞೆ ಜಾರಿ
ಧಾರವಾಡ: ತಾಲೂಕಿನ ಗರಗ ಗ್ರಾಮದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಭೋವಿ ವಡ್ಡರ ಸಮಾಜ ಮತ್ತು ಗ್ರಾಮ ಪಂಚಾಯತಿ ನಡುವೆ ಬಿಕ್ಕಟ್ಟು ಉಂಟಾಗಿದ್ದು, ಪರಿಸ್ಥಿತಿ ಬಿಗಡಾಯಿಸಿದೆ. ಗ್ರಾಮದಲ್ಲಿ ಶಾಂತಿ ಕದಡದಂತೆ ತಡೆಗಟ್ಟಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ವಿವಾದದ ಮೂಲ : ಗರಗ ಗ್ರಾಮದ 19 ಗುಂಟೆ ಗ್ರಾಮ ಪಂಚಾಯತಿ ಜಾಗದಲ್ಲಿ ಭೋವಿ ವಡ್ಡರ ಸಮಾಜದವರು ದುರ್ಗಮ್ಮ ದೇವಸ್ಥಾನ ನಿರ್ಮಿಸಿದ್ದರು. ಸೆಪ್ಟೆಂಬರ್ 23 ರಂದು ದೇವಿಯ ಪ್ರತಿಷ್ಠಾಪನೆ ಮತ್ತು ಮೆರವಣಿಗೆಗೆ ಸಿದ್ಧತೆ ನಡೆಸಲಾಗಿತ್ತು. ಆದರೆ, ದೇವಸ್ಥಾನ ನಿರ್ಮಿಸಿರುವ ಜಾಗ ಪಂಚಾಯತಿಗೆ ಸೇರಿದ್ದು…

