ಕುಂದಗೋಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ರಮೇಶ ಶಿ. ಇಂಗಳಹಳ್ಳಿ, ಉಪಾಧ್ಯಕ್ಷರಾಗಿ ಹೊಳಲಪ್ಪ ವೆಂಕಪ್ಪ ಬೋವಿ ಆಯ್ಕೆ.
ಕುಂದಗೋಳ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರದಂದು ಚುನಾವಣೆ ಜರುಗಿತು. ಒಟ್ಟು 13 ಸದಸ್ಯ ಬಲ ಹೊಂದಿರುವ ಈ ಸಂಘದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಮೇಶ ಶಿ. ಇಂಗಳಹಳ್ಳಿ ಮತ್ತು ಸಿದ್ದಪ್ಪ ನಿ. ಅರಳಿಕಟ್ಟಿ ನಾಮಪತ್ರ ಸಲ್ಲಿಸಿದ್ದರು. ರಮೇಶ ಶಿ. ಇಂಗಳಹಳ್ಳಿ 9 ಮತಗಳನ್ನು ಪಡೆದು ಜಯಶಾಲಿಯಾದರು, ಸಿದ್ದಪ್ಪ ನಿ. ಅರಳಿಕಟ್ಟಿ 4 ಮತಗಳನ್ನು ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಸ್ಥಾನಕ್ಕೆ ಹೊಳಲಪ್ಪ ವೆಂಕಪ್ಪ ಬೋವಿ ಮತ್ತು ದಾದಾಪೀರ…

