ಹಫ್ತಾ ಕೊಡದ್ದಕ್ಕೆ ಮಾಜಿ ಸೈನಿಕನ ಮೇಲೆ ಪೊಲೀಸರ ದಾಳಿ: ಧಾರವಾಡದಲ್ಲಿ ಹಿಗ್ಗಾಮುಗ್ಗಾ ಥಳಿತ!
ಧಾರವಾಡ: ಹಫ್ತಾ (ಕಪ್ಪ) ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ನಿವೃತ್ತ ಯೋಧನೊಬ್ಬರ ಮೇಲೆ ಪೊಲೀಸರು ಅಮಾನವೀಯವಾಗಿ ಹಲ್ಲೆ ನಡೆಸಿರುವ ಭಯಾನಕ ಘಟನೆ ಧಾರವಾಡದ ಸಪ್ತಾಪುರದಲ್ಲಿ ನಡೆದಿದೆ. ಸೈನಿಕ್ ಮೆಸ್ ನಡೆಸುತ್ತಿದ್ದ ಮಾಜಿ ಸೈನಿಕ ರಾಮಪ್ಪ ನಿಪ್ಪಾಣಿ ಅವರ ಮೇಲೆ ಉಪನಗರ ಠಾಣೆಯ ಪೊಲೀಸರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದ್ದು, ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡದ ಸಪ್ತಾಪುರದಲ್ಲಿ ವಾಸವಿರುವ ರಾಮಪ್ಪ ನಿಪ್ಪಾಣಿ ಅವರೇ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಮಾಜಿ ಸೈನಿಕರಾಗಿದ್ದಾರೆ. ಸೇನೆಯಿಂದ ನಿವೃತ್ತರಾದ…

