ಚಿಕ್ಕನೆರ್ತಿ ಗ್ರಾಮದ ಹೆಚ್ಚು ಆಸ್ತಿ ಹೊಂದಿದ ಯುವಕನ ಶವ ನೇಣು ಬೀಗಿದ ಸ್ಥತಿಯಲ್ಲಿ ಮನೆಯ ಅಟ್ಟದ ಕೋಣೆಯಲ್ಲಿ ಪತ್ತೆ, ನೇಣಿನ ಸ್ಥಿತಿಯಲ್ಲಿ… ಆತ್ಮಹತ್ಯೆಯೋ, ಕೋಲೋಯೋ ಎಂಬ ಸಂಶಯ?
ಕುಂದಗೋಳ: ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ತೀವ್ರ ಸಂಚಲನ ಮೂಡಿಸಿರುವ ಒಂದು ನಿಗೂಢ ಘಟನೆಯಲ್ಲಿ, ಸುಮಾರು 40 ಕ್ಕೂ ಹೆಚ್ಚು ಎಕರೆ ಆಸ್ತಿಯ ಒಡೆಯನಾಗಿದ್ದ ಯುವಕನೋರ್ವ ತನ್ನದೇ ಮನೆಯ ಮೇಲ್ಭಾಗದ ‘ಅಟ್ಟ’ದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಕಂಡು ಬಂದಿದ್ದರೂ, ದೇಹದ ಕೆಲವು ಭಾಗಗಳಲ್ಲಿ ರಕ್ತದ ಕಲೆಗಳು ಕಂಡು ಬಂದಿರುವುದು ಈ ಪ್ರಕರಣವನ್ನು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ತೀವ್ರ ಸಂಶಯಕ್ಕೆ ದೂಡಿದೆ. ಸಂಶಾತ್ಮಕ ಸಾವಿನ ವಿವರ:ಮೃತರನ್ನು ಫಕ್ಕಿರೇಶ ಹನಮಂತಪ್ಪ ತಡಸದ ಎಂದು ಗುರುತಿಸಲಾಗಿದೆ….

