ಪ್ರೊ. ಬಿ. ವಿ. ಗುಂಜೆಟ್ಟಿ ಕನ್ನಡ ಸೇವೆ ಸ್ಮರಣೀಯ: ಡಾ. ಜಿ. ಎಂ. ಹೆಗಡೆ

ಪ್ರೊ. ಬಿ. ವಿ. ಗುಂಜೆಟ್ಟಿ ಕನ್ನಡ ಸೇವೆ ಸ್ಮರಣೀಯ: ಡಾ. ಜಿ. ಎಂ. ಹೆಗಡೆ ಧಾರವಾಡ: ಪ್ರೊ. ಬಿ. ವಿ. ಗುಂಜೆಟ್ಟಿ ಅವರು ಕನ್ನಡದ ಸೇವೆಯನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಮಾಡಿದ ಅಪರೂಪದ ವ್ಯಕ್ತಿಗಳು ಎಂದು ಡಾ. ಜಿ. ಎಂ. ಹೆಗಡೆ ಅವರು ಬಣ್ಣಿಸಿದರು. ಸಮಾಜ ಜೀವನದ ಒಂದು ಭಾಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶ್ರೇಯೋಭಿಲಾಷೆಗಾಗಿ ಗುಂಜೆಟ್ಟಿ ಅವರು ಸುದೀರ್ಘ ಸೇವೆಗೈದಿದ್ದಾರೆ ಎಂದು ಅವರು ಹೇಳಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪ್ರೊ. ಬಿ. ವಿ….

Read More

ಮಾನಸಿಕ ಕಾಯಿಲೆಗಳಿಗೆ ನಿಖರ ಚಿಕಿತ್ಸೆ ಇದೆ; ಸ್ತ್ರೀಯರಲ್ಲಿ ಅರಿವು ಮೂಡಿಸುವುದು ಅತಿ ಅವಶ್ಯ: ಡಾ. ರೂಪಾ ಕಿಣಗಿ

ನವಲಗುಂದ: ಮಾನಸಿಕ ಕಾಯಿಲೆಗಳ ಕುರಿತು ಸ್ತ್ರೀಯರಲ್ಲಿ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ಎಷ್ಟೋ ಜನರು ಮಾನಸಿಕ ಸಮಸ್ಯೆಗಳನ್ನು ‘ದೆವ್ವ ಹಿಡಿದಿದೆ’ ಅಥವಾ ‘ದೇವರು ಬಂದಿದೆ’ ಎಂದು ತಿಳಿದು ವೈದ್ಯರಲ್ಲಿ ಪರೀಕ್ಷಿಸದೆ, ಕಾಯಿಲೆ ಉಲ್ಬಣವಾದ ನಂತರ ಆಸ್ಪತ್ರೆಗೆ ಬರುತ್ತಾರೆ. ಆದರೆ, ಪ್ರತಿಯೊಂದು ಮಾನಸಿಕ ಕಾಯಿಲೆಗೂ ನಿಖರವಾದ ಚಿಕಿತ್ಸೆ ಲಭ್ಯವಿದೆ ಎಂದು ಡಾ. ರೂಪಾ ಕಿಣಗಿ ಅವರು ತಿಳಿಸಿದರು. ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ…

Read More

ನವಲಗುಂದ, ಯಮನೂರದಲ್ಲಿ ಸ್ನೇಹ ಸಮ್ಮಿಲನ; ಗುರುವಿಗೆ ದೇವರು-ತಾಯಿಯ ಸ್ಥಾನ: ಶಾಸಕ ಕೋನರಡ್ಡಿ

ನವಲಗುಂದ: ಪ್ರಪಂಚದಲ್ಲಿ ದೇವರು ಮತ್ತು ತಾಯಿಯ ನಂತರದ ಅತ್ಯಂತ ಅಮೂಲ್ಯ ಸ್ಥಾನ ಗುರುವಿಗೆ ಮಾತ್ರ ಇರಲು ಸಾಧ್ಯ ಎಂದು ಶಾಸಕ ಎನ್. ಎಚ್. ಕೋನರಡ್ಡಿ ಅವರು ಅಭಿಪ್ರಾಯಪಟ್ಟರು. ಅವರು ಶನಿವಾರ ನವಲಗುಂದ ತಾಲ್ಲೂಕಿನ ಯಮನೂರ ಗ್ರಾಮದಲ್ಲಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 2006-07ನೇ ಸಾಲಿನ 7ನೇ ತರಗತಿಯ ಹಳೇ ವಿದ್ಯಾರ್ಥಿಗಳು ಏರ್ಪಡಿಸಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಹಳೇ ವಿದ್ಯಾರ್ಥಿಗಳು ತಮ್ಮ ವಿದ್ಯಾದಾನ ಮಾಡಿದ ಗುರುಗಳಿಗೆ ಪುಷ್ಪನಮನ ಸಲ್ಲಿಸಿ, ಪುಷ್ಪದಿಂದಲೇ ವೇದಿಕೆಯವರೆಗೆ…

Read More

ಖ್ಯಾತ ಉದ್ಯಮಿ ಸಿದ್ಧರಾಮ ಹಾಲಳ್ಳಿ ನಿಧನ

ಧಾರವಾಡ: ನಗರದ ಮದಿಹಾಳದಲ್ಲಿರುವ ಸಿದ್ಧರಾಮೇಶ್ವರ ಕಾಲನಿಯ ನಿವಾಸಿಯಾಗಿರುವ ಹಾಗೂ ಖ್ಯಾತ ಇಲೆಕ್ಟ್ರಿಕ್ ಉದ್ಯಮಿಯಾಗಿರುವ ಶ್ರೀ ಸಿದ್ಧರಾಮ ಎಸ್. ಹಾಲಳ್ಳಿ (63) ಅವರು ರವಿವಾದಂದು ನಿಧನರಾಗಿದ್ದಾರೆ. ತಮ್ಮ ವೃತ್ತಿ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದ ಸಿದ್ಧರಾಮ ಹಾಲಳ್ಳಿ ಅವರ ಅಕಾಲಿಕ ನಿಧನದಿಂದ ಕುಟುಂಬ, ಬಂಧುಗಳು ಮತ್ತು ಉದ್ಯಮ ವಲಯದಲ್ಲಿ ದುಃಖದ ವಾತಾವರಣ ಉಂಟಾಗಿದೆ. ಮೃತರು ಪತ್ನಿ ಮತ್ತು ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು (ರವಿವಾರ) ಸಂಜೆ 05 ಗಂಟೆಗೆ ಧಾರವಾಡದ ಮುರುಘಾಮಠದ…

Read More

‘ವೋಟ್ ಚೋರ್, ಗದ್ದಿ ಛೋಡ್’ ಅಭಿಯಾನಕ್ಕೆ ನವಲಗುಂದದಲ್ಲಿ ಶಾಸಕ ಎನ್ ಎಚ್ ಕೋನರಡ್ಡಿ ಚಾಲನೆ: “ಪ್ರಜಾಪ್ರಭುತ್ವ ಉಳಿಸಿ” ಎಂದು ಕರೆ

‘ವೋಟ್ ಚೋರ್, ಗದ್ದಿ ಛೋಡ್’ ಅಭಿಯಾನಕ್ಕೆ ನವಲಗುಂದದಲ್ಲಿ ಕೋನರಡ್ಡಿ ಚಾಲನೆ: “ಪ್ರಜಾಪ್ರಭುತ್ವ ಉಳಿಸಿ” ಎಂದು ಕರೆ ನವಲಗುಂದ: ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ನಡೆದ ಮತ ಕಳ್ಳತನದ ಆರೋಪವನ್ನು ದೇಶಾದ್ಯಂತ ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ‘ವೋಟ್ ಚೋರ್, ಗದ್ದಿ ಛೋಡ್’ (ವೋಟ್ ಕದ್ದವರೇ, ಅಧಿಕಾರ ಬಿಡಿ) ಎಂಬ ವಿನೂತನ ಸಹಿ ಸಂಗ್ರಹ ಅಭಿಯಾನಕ್ಕೆ ಶಾಸಕ ಎನ್. ಹೆಚ್. ಕೋನರಡ್ಡಿ…

Read More

ಗ್ರಾಮಸಭೆ, ವಾರ್ಡ್ ಸಭೆ ನಡೆಸದ ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ: ತಾ.ಪಂ. ಎದುರು ಏಕಾಂಗಿ ಧರಣಿ600-700 ಶೌಚಾಲಯ ಹಗರಣ ಮುಚ್ಚಿಹಾಕಿದ ಆರೋಪ; ತೀವ್ರ ಭ್ರಷ್ಟಾಚಾರದ ವಿರುದ್ಧ ಹೋರಾಟ

ಕುಂದಗೋಳ: ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಗ್ರಾಮಸಭೆ ಅಥವಾ ವಾರ್ಡ್ ಸಭೆ ನಡೆಸದೆ, ಭೂ ತರ್ಲಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದ ನೀಡಿರುವ ಪಿಡಿಒ ಹಾಗೂ ಪಂಚಾಯಿತಿ ಆಡಳಿತ ಮಂಡಳಿಯ ವಿರುದ್ಧ ತಕ್ಷಣ ದಂಡನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಗ್ರಾಮದ ನಿವಾಸಿ ಮಂಜುನಾಥ ಮೊರಬದ ಅವರು ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಏಕಾಂಗಿ ಧರಣಿ ಸತ್ಯಾಗ್ರಹ ನಡೆಸಿ ಆಡಳಿತ ವ್ಯವಸ್ಥೆಯ ನಿದ್ದೆಗೆ ಭಂಗ ತಂದಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಈ ಕುರಿತು ನಿರಂತರವಾಗಿ…

Read More

ಕುರಾನ್ ಪಠಣ ಖಂಡಿಸಿ ಬಿಜೆಪಿ ಪ್ರತಿಭಟನೆ

ಧಾರವಾಡ, ಅ.10: ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳ ಭೂಮಿ ಪೂಜೆ ಕಾರ್ಯಕ್ರಮದ ವೇದಿಕೆಯಲ್ಲಿ ಕುರಾನ್ ಪಠಣ ಮಾಡಿಸಿರುವುದನ್ನು ಖಂಡಿಸಿ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ವತಿಯಿಂದ ಧಾರವಾಡದಲ್ಲಿ ವಿನೂತನ ಪ್ರತಿಭಟನೆ ನಡೆಯಿತು. ಮುಸ್ಲಿಂ ಸಮುದಾಯದ ಓಲೈಕೆಗಾಗಿ ಸರ್ಕಾರಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು, ಸರ್ಕಾರಿ ಯಂತ್ರವನ್ನು ರಾಜಕೀಯವಾಗಿ ಉಪಯೋಗಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಲು ಬಿಜೆಪಿ ಕಾರ್ಯಕರ್ತರು ಬಿಳಿ ಪಂಜಿ ಹಾಗೂ ಬಿಳಿ ಅಂಗಿ ಧರಿಸಿ ಹೋಮ ಪೂಜೆ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ…

Read More

ರೈತರ ಪರ ಹೋರಾಟ ಮಾಡಬೇಡಿ; ಮಾಡಿದರೆ ಪ್ರಾಣ ಕಳೆದುಕೊಳ್ಳುತ್ತೀರಿ – ರಘುನಾಥ ನಡುವಿನಮನಿಗೆ ಜೀವ ಬೆದರಿಕೆ ಪತ್ರ!

ರೈತರ ಪರ ಹೋರಾಟ ಮಾಡಬೇಡಿ; ಮಾಡಿದರೆ ಪ್ರಾಣ ಕಳೆದುಕೊಳ್ಳುತ್ತೀರಿ – ರಘುನಾಥ ನಡುವಿನಮನಿಗೆ ಜೀವ ಬೆದರಿಕೆ ಪತ್ರ! ನವಲಗುಂದ: ರೈತರ ಪರವಾಗಿ ಹೋರಾಟ ಮಾಡಬಾರದು, ಮಾಡಿದರೆ ಪ್ರಾಣ ಕಳೆದುಕೊಳ್ಳುತ್ತೀರಿ, ಕೈಕಾಲು ಮುರಿದರೆ ನಾವು ಜವಾಬ್ದಾರರಲ್ಲ” ಎಂದು ಹೇಳಿರುವ ಜೀವ ಬೆದರಿಕೆಯ ಪತ್ರವೊಂದು ಬಂದಿದೆ ಎಂದು ಹೋರಾಟಗಾರ ರಘುನಾಥ ನಡುವಿನಮನಿ ಹೇಳಿದ್ದಾರೆ. ಪಟ್ಟಣದ ಅಣ್ಣಿಗೇರಿ ರಸ್ತೆಯ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನನಗೆ ಹಾಗೂ ಇನ್ನೊಬ್ಬ ಹೋರಾಟಗಾರ ಶಂಕ್ರಪ್ಪ ರುದ್ರಪ್ಪ ಅಂಬಲಿಗೆ ಅಕ್ಟೋಬರ್‌…

Read More

ಬಸಾಪುರ ಶಾಲೆ ಪ್ರೌಢಶಾಲೆಯಾಗಿ ಉನ್ನತಿ: ವಿದ್ಯಾರ್ಥಿಗಳಲ್ಲಿ ಹರ್ಷದ ಸಂಭ್ರಮ

ಬಸಾಪುರ ಶಾಲೆ ಪ್ರೌಢಶಾಲೆಯಾಗಿ ಉನ್ನತಿ: ವಿದ್ಯಾರ್ಥಿಗಳಲ್ಲಿ ಹರ್ಷದ ಸಂಭ್ರಮ ನವಲಗುಂದ: ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 147 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳನ್ನಾಗಿ ಉನ್ನತೀಕರಿಸಿದ ಬೆನ್ನಲ್ಲೇ, ಮತ್ತೆ 35 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಯನ್ನಾಗಿ ಘೋಷಿಸಿ ಆದೇಶ ಹೊರಡಿಸಿದೆ. ಈ ಪೈಕಿ ನವಲಗುಂದ ವಿಧಾನಸಭಾ ಕ್ಷೇತ್ರದ ಬಸಾಪುರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕೂಡ ಪ್ರೌಢಶಾಲೆಯಾಗಿ ಮೇಲ್ದರ್ಜೆಗೇರಿದೆ. ಬಹು ವರ್ಷಗಳ ಬೇಡಿಕೆ ಈಡೇರಿದ ಹಿನ್ನೆಲೆಯಲ್ಲಿ ಬಸಾಪುರ ಗ್ರಾಮದ ವಿದ್ಯಾರ್ಥಿಗಳು ಹಾಗೂ…

Read More

ಎಫ್‌ಐಡಿ ನೆಪ ಬಿಡಿ: ರೈತರ ಬೆಳೆ ಹಾನಿ ಪರಿಹಾರಕ್ಕೆ ಬಿಜೆಪಿ ಆಗ್ರಹ 03 ದಿನಗಳಲ್ಲಿ ಹಣ ಬಿಡುಗಡೆ ಮಾಡದಿದ್ದರೆ ಉಗ್ರ ಪ್ರತಿಭಟನೆ ಎಚ್ಚರಿಕೆ

ನವಲಗುಂದ: ತಾಲ್ಲೂಕಿನಲ್ಲಿ ಸುರಿದಿರುವ ಭಾರಿ ಮಳೆಯಿಂದಾಗಿ ರೈತರಿಗೆ ಉಂಟಾಗಿರುವ ಬೆಳೆ ಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ‘ಎಫ್‌ಐಡಿ’ ನೆಪ ಹೇಳುವುದನ್ನು ನಿಲ್ಲಿಸಿ, ಶೀಘ್ರದಲ್ಲಿಯೇ ಎಲ್ಲ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಗಂಗಪ್ಪ ಮನಮಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶುಕ್ರವಾರ ತಹಶೀಲ್ದಾರ ಸುಧೀರ್ ಸಾಹುಕಾರ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕಿನಲ್ಲಿ ಸುರಿದ ಮಳೆಯಿಂದಾಗಿ ರೈತರು ತೀವ್ರ ಬೆಳೆ ನಷ್ಟ ಅನುಭವಿಸಿ, ಭಾರಿ ಹಾನಿಗೊಳಗಾಗಿದ್ದಾರೆ. ಈ…

Read More