ಅಣ್ಣಿಗೇರಿ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಎನ್.ಹೆಚ್. ಕೋನರಡ್ಡಿ ಹಾಗೂ ಧಾರವಾಡ ಪ್ರಭಾರ ಡಿ.ಸಿ. ಭುವನೇಶ ಪಾಟೀಲ ಭೇಟಿ; ತುರ್ತು ಪರಿಹಾರಕ್ಕೆ ಶಾಸಕ ಸೂಚನೆ
ಅಣ್ಣಿಗೇರಿ : ಬುಧವಾರ ರಾತ್ರಿ ಅಣ್ಣಿಗೇರಿ ಪಟ್ಟಣ ಹಾಗೂ ಸುತ್ತಮುತ್ತ ಸುರಿದ ಭಾರೀ ಮತ್ತು ನಿರಂತರ ಮಳೆಯಿಂದಾಗಿ ಪಟ್ಟಣದ ವಿವಿಧ ಬಡಾವಣೆಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಶಾಸಕ ಎನ್. ಹೆಚ್. ಕೋನರಡ್ಡಿ ಅವರು ತಕ್ಷಣವೇ ಪಟ್ಟಣಕ್ಕೆ ಆಗಮಿಸಿ, ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು ಮತ್ತು ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಲಾವೃತ ಬಡಾವಣೆಗಳಿಗೆ ಭೇಟಿ, ಪರಿಹಾರಕ್ಕೆ ಆದೇಶ ಶಾಸಕ ಕೋನರಡ್ಡಿ ಅವರು…

