ಕುಂದಗೋಳ: ಪವಾರ ಮೊಟರ್ಸ ಹಾಗೂ ವೆಂಕಟೇಶ ಮೋಟಾರ್ಸ್ ಎಂಬ ದ್ವಿಚಕ್ರ ವಾಹನ ಶೋರೂಂಗಳಿಂದ ‘ಕೋಟಿಗಟ್ಟಲೆ ವಂಚನೆ’; ತಹಸೀಲ್ದಾರ್‌ಗೆ ‘ಜಯ ಕರ್ನಾಟಕ’ ಮನವಿ

ಕುಂದಗೋಳ: ಪಟ್ಟಣದಲ್ಲಿರುವ ದ್ವಿಚಕ್ರ ವಾಹನ ಶೋರೂಂಗಳು ಸಾಲದ (ಫೈನಾನ್ಸ್‌) ಮೂಲಕ ವಾಹನ ಖರೀದಿಸುವ ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ವಂಚನೆ ಎಸಗುತ್ತಿವೆ ಎಂದು ಆರೋಪಿಸಿ, ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರ್ ರಾಜು ಮಾವಕರ ಅವರಿಗೆ ಮನವಿ ಸಲ್ಲಿಸಲಾಯಿತು. ​ಮೊದಲಿಗೆ ಪಟ್ಟಣದ ವೆಂಕಟೇಶ ಮೋಟಾರ್ಸ್ ಹಾಗೂ ಪವಾರ ಮೋಟಾರ್ಸ್ ಶೋರೂಂಗಳ ಎದುರು ಜಮಾಯಿಸಿದ ಸಂಘಟನೆಯ ಕಾರ್ಯಕರ್ತರು,…

Read More

ಸಾಲಬಾಧೆ ತಾಳಲಾರದೆ ಯರೆಬೂದಿಹಾಳ ಗ್ರಾಮದ ರೈತ ಹಜರೆಸಾಬ ಬು ತಹಶಿಲ್ದಾರ ಆತ್ಮಹತ್ಯೆ:

ಕುಂದಗೋಳ: ಬೆಳೆ ಸಾಲದ ಭಾರವನ್ನು ತಾಳಲಾರದೆ ರೈತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ತಾಲ್ಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ ಸೆ: 05 ರಂದು ವರದಿಯಾಗಿದೆ. ಮೃತರನ್ನು ಹಜರೇಸಾಬ,ಬುಡ್ಡೆಸಾಬ ತಹಶೀಲ್ದಾರ (75) ಎಂದು ಗುರುತಿಸಲಾಗಿದೆ. ಸಾಲ ಮರುಪಾವತಿ ಚಿಂತೆಯಿಂದ ಅವರು ತೀವ್ರ ಮಾನಸಿಕ ಒತ್ತಡದಲ್ಲಿದ್ದು, ಈ ಕಾರಣಕ್ಕಾಗಿಯೇ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯರೇಬೂದಿಹಾಳ ಗ್ರಾಮದ ನಿವಾಸಿಯಾಗಿದ್ದ ಹಜರೇಸಾಬ ತಹಶೀಲ್ದಾರ ಅವರು ತಮ್ಮ 3 ಎಕರೆ 2 ಗುಂಟೆ ಜಮೀನಿನಲ್ಲಿ ಗೋವಿನ ಜೋಳ ಪೀಕನ್ನು ಬೆಳೆದಿದ್ದರು….

Read More

ದೇಶದ ಹಿತವೇ ಮುಖ್ಯ: ಶಿಕ್ಷಣದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಬೆಳೆಸಲು ತಜ್ಞರ ಕರೆ

​ಧಾರವಾಡ: ಜಾತಿ ಮತ್ತು ಧರ್ಮಕ್ಕಿಂತಲೂ ದೇಶದ ಹಿತಾಸಕ್ತಿಯೇ ಮುಖ್ಯ. ಧರ್ಮ ಯಾವುದೇ ಇರಲಿ, ನಾವೆಲ್ಲರೂ ಭಾರತೀಯರು ಎಂಬ ಉದಾತ್ತ ಭಾವನೆಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಧಾರವಾಡದ ಸಾಯಿ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದ ಅಧ್ಯಕ್ಷೆ ಡಾ. ವೀಣಾ ಬಿರಾದಾರ ಅಭಿಪ್ರಾಯಪಟ್ಟರು. ​ಕರ್ನಾಟಕ ವಿದ್ಯಾವರ್ಧಕ ಸಂಘದ (ಕ.ವಿ.ವ. ಸಂಘ) “ಶಿಕ್ಷಣ ಮಂಟಪ”ವು, ಸಾಯಿ ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಶಿಕ್ಷಣದಲ್ಲಿ ರಾಷ್ಟ್ರೀಯ ಭಾವೈಕ್ಯತೆ’ ವಿಷಯ ಕುರಿತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಏಳಿಗೆಯೇ ನಮ್ಮೆಲ್ಲರ ಧ್ಯೇಯವಾಗಬೇಕು. ಎಲ್ಲಾ ಮತ-ಪಂಥಗಳ…

Read More

ಎಸ್.ಎಲ್. ಭೈರಪ್ಪ ಕಾದಂಬರಿಗಳಿಗೆ ಎಂದೂ ಸಾವಿಲ್ಲ: ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನಕ್ಕೆ ನುಡಿನಮನ

ಧಾರವಾಡ: ಖ್ಯಾತ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಚಿತ್ರಕಥೆಗಾರ ಡಾ. ಎಸ್.ಎಲ್. ಭೈರಪ್ಪ ಅವರು ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನ. ತಮ್ಮ ಅಮೂಲ್ಯ ಕಾದಂಬರಿಗಳ ಮೂಲಕ ಅವರು ಓದುಗರ ದೊಡ್ಡ ಬಳಗವನ್ನೇ ಸೃಷ್ಟಿಸಿದವರು ಎಂದು ಕ.ವಿ.ವ. ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಹೇಳಿದರು. ​ಕರ್ನಾಟಕ ವಿದ್ಯಾವರ್ಧಕ ಸಂಘವು (ಕ.ವಿ.ವ. ಸಂಘ) ಆಯೋಜಿಸಿದ್ದ ಡಾ. ಎಸ್.ಎಲ್. ಭೈರಪ್ಪನವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ​ವಿಶ್ವ ಸಾಹಿತ್ಯ ಭೂಪಟದಲ್ಲಿ ಕನ್ನಡದ ಹೆಗ್ಗುರುತು: ​ಆಕಾಶವಾಣಿ ಧಾರವಾಡದ ನಿವೃತ್ತ ನಿರ್ದೇಶಕ ಬಸು…

Read More

ಯರಗುಪ್ಪಿಯಲ್ಲಿ ವಾಣಿಜ್ಯ ಸಿಲಿಂಡರ್ ಸ್ಪೋಟ: ಅಂದಾಜು 6 ಲಕ್ಷ ರೂ. ಮೌಲ್ಯದ ಹೋಟೆಲ್ ಸಾಮಗ್ರಿ ಸುಟ್ಟು ಭಸ್ಮ

ಕುಂದಗೋಳ: ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಮಧ್ಯರಾತ್ರಿ ವಾಣಿಜ್ಯ ಬಳಕೆ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಭಾರಿ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ​ಯರಗುಪ್ಪಿ ಗ್ರಾಮದ ಸಂಜೀವರೆಡ್ಡಿ ತಹಶೀಲ್ದಾರ್ ಎಂಬುವವರಿಗೆ ಸೇರಿದ ಹೋಟೆಲ್‌ನಲ್ಲಿ ಈ ದುರ್ಘಟನೆ ನಡೆದಿದೆ. ಮಧ್ಯರಾತ್ರಿಯ ವೇಳೆಗೆ ಹೋಟೆಲ್‌ನ ಒಳಗಿದ್ದ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಹೋಟೆಲ್‌ನ ಶೆಟರ್ ಮುರಿದು ಹೋಗಿದ್ದು, ಒಳಭಾಗದಲ್ಲಿದ್ದ ಎಲ್ಲ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ….

Read More

ಧಾರವಾಡ ಕೃಷಿ ವಿವಿ ಆಡಳಿತ ಮಂಡಳಿಗೆ ಹಿರೇಗುಂಜಳದ ಮಾಲತೇಶ ಶ್ಯಾಗೋಟಿ ನಾಮನಿರ್ದೇಶನ!

ಧಾರವಾಡ: ಕೃಷಿ ವಿಶ್ವವಿದ್ಯಾಲಯದ (UAS) ಆಡಳಿತ ಮಂಡಳಿಗೆ (Board of Management) ಹೊಸ ಸದಸ್ಯರನ್ನು ರಾಜ್ಯಪಾಲರ ಸಚಿವಾಲಯದಿಂದ ನಾಮನಿರ್ದೇಶನ ಮಾಡಲಾಗಿದೆ. ಕುಂದಗೋಳ ತಾಲ್ಲೂಕಿನ ಹಿರೇಗುಂಜಳ ಗ್ರಾಮದ ಮಾಲತೇಶ ಚಿಕ್ಕಪ್ಪ ಶ್ಯಾಗೋಟಿ ಅವರನ್ನು ಕೃಷಿ ಕ್ಷೇತ್ರದ ತಜ್ಞರ ವಿಭಾಗದಲ್ಲಿ ಆಡಳಿತ ಮಂಡಳಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ರಾಜ್ಯಪಾಲರ ಸಚಿವಾಲಯದಿಂದ ಅಧಿಸೂಚನೆ ಹೊರಡಿಸಲಾಗಿದೆ. ​ಕರ್ನಾಟಕ ರಾಜ್ಯಪಾಲರು ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ ಕುಲಾಧಿಪತಿಯೂ ಆಗಿರುವ ಥಾವರ್‌ಚಂದ್ ಗೆಹಲೋತ್ ಅವರು ದಿನಾಂಕ ಸೆಪ್ಟೆಂಬರ್ 26, 2025 ರಂದು ಈ ಕುರಿತು ಆದೇಶ…

Read More

ದೇಶದ ಸ್ವಾತಂತ್ರ್ಯ, ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಮಹಾನ್ ಸಂಶೋಧಕ ದಿ. ತಲ್ಲೂರ ರಾಯನಗೌಡ: ಯ.ರು. ಪಾಟೀಲ ಅಭಿಮತ

ಧಾರವಾಡ: ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ನಾಡಿನ ಏಕೀಕರಣಕ್ಕಾಗಿ ಹೋರಾಡಿದ ಮಹಾನ್ ಹೋರಾಟಗಾರ ದಿ. ತಲ್ಲೂರ ರಾಯನಗೌಡ ಪಾಟೀಲ ಅವರ ಶ್ರಮವು ಇತಿಹಾಸ ಮತ್ತು ಸಂಶೋಧನಾ ಪರಂಪರೆಯಲ್ಲಿ ಸದಾ ಸ್ಮರಣೀಯ ಎಂದು ಕಿತ್ತೂರಿನ ಚಾರಿತ್ರಿಕ ಕಾದಂಬರಿಕಾರ ಯ.ರು. ಪಾಟೀಲ ಅಭಿಪ್ರಾಯಪಟ್ಟರು. ​ಕರ್ನಾಟಕ ವಿದ್ಯಾವರ್ಧಕ ಸಂಘವು (ಕ.ವಿ.ವ. ಸಂಘ), ತಲ್ಲೂರ ರಾಯನಗೌಡ ಪಾಟೀಲ ಸ್ಮಾರಕ ಸಂಸ್ಥೆಯ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಹಾಗೂ ಯ.ರು. ಪಾಟೀಲ ಅವರ ‘ಬೆಳಕು ಬಿತ್ತಿದವರು’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ‘ತಲ್ಲೂರ ರಾಯನಗೌಡರು-ಇತಿಹಾಸ ಪ್ರಜ್ಞೆ’ ಕುರಿತು…

Read More

ಅನ್ಯರ ದಬ್ಬಾಳಿಕೆ ವಿರುದ್ಧ ಗುಡುಗಲು ಕನ್ನಡ ಜಾಗೃತಿ ಸಮಿತಿ: ಧಾರವಾಡಕ್ಕೆ ಹೋರಾಟಗಾರ ಸುಧೀರ್ ಮುಧೋಳ್ ನೇಮಕ

ಧಾರವಾಡ: ಕನ್ನಡ ನೆಲ, ನುಡಿ, ಸಂಸ್ಕೃತಿ ಮತ್ತು ಕನ್ನಡಿಗರ ದುರ್ಬಲಗೊಳ್ಳುತ್ತಿರುವ ಹಕ್ಕುಗಳನ್ನು ರಕ್ಷಿಸುವ ಪರಮ ಜವಾಬ್ದಾರಿ ಪ್ರತಿ ಸರ್ಕಾರದ ಮೇಲೆ ಇರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅನ್ಯ ಭಾಷಿಕರ ದಬ್ಬಾಳಿಕೆ ಮತ್ತು ಪುಂಡಾಟಿಕೆ ಮಿತಿಮೀರುತ್ತಿದೆ ಎಂಬ ಆತಂಕದ ಕೂಗು ವ್ಯಾಪಕವಾಗಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಕನ್ನಡದ ಪರಮ ರಕ್ಷಣೆಗಾಗಿ ಗಂಭೀರ ಹೆಜ್ಜೆ ಇಟ್ಟಿದ್ದು, ಕನ್ನಡಪರ ಹೋರಾಟ ನಡೆಸುವ ಸಂಘ ಸಂಸ್ಥೆಗಳಿಂದ ನಿಷ್ಠಾವಂತ ಮತ್ತು ದಿಟ್ಟ ವ್ಯಕ್ತಿಗಳನ್ನು ಆಯ್ದು ಪ್ರತಿ ಜಿಲ್ಲೆಯಲ್ಲಿ ಕನ್ನಡ ಜಾಗೃತಿ ಸಮಿತಿಯನ್ನು…

Read More

ಧಾರವಾಡದಲ್ಲಿ ಹಿಂಗಾರು ಬಿತ್ತನೆಗೆ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಆರಂಭ: ಸಚಿವ ಸಂತೋಷ ಲಾಡ

​ಧಾರವಾಡ (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ, ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಅವರು ರೈತರಿಗೆ ಬೀಜಗಳನ್ನು ವಿತರಿಸಿ, ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ​27 ಕೇಂದ್ರಗಳಲ್ಲಿ ಬೀಜ ವಿತರಣೆ: ​ಸಚಿವರಾದ…

Read More

ಸ್ವಸಹಾಯ ಸಂಘಗಳ ಸಬಲೀಕರಣಕ್ಕೆ ‘ಅಕ್ಕ-ಕೆಫೆ’ ದೊಡ್ಡ ಕೊಡುಗೆ: ಸಚಿವ ಸಂತೋಷ್ ಲಾಡ್

ಧಾರವಾಡ: ರಾಜ್ಯದಲ್ಲಿ ಮಹಿಳಾ ಸ್ವಸಹಾಯ ಸಂಘಗಳನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಮಹತ್ವಕಾಂಕ್ಷೆಯ ಯೋಜನೆಯಾದ ಅಕ್ಕ-ಕೆಫೆ (ಸಂಜೀವಿನಿ) ಇಂದು ಧಾರವಾಡದಲ್ಲಿ ಉದ್ಘಾಟನೆಗೊಂಡಿತು. ಕಬ್ಬೆನೂರು ಗ್ರಾಮದ ಕಾಮದೇನು ಮಹಿಳಾ ಸ್ವಸಹಾಯ ಸಂಘ ನಿರ್ವಹಿಸುವ ಈ ಕೆಫೆಯನ್ನು ಕಾರ್ಮಿಕ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್. ಲಾಡ್ ಅವರು ಉದ್ಘಾಟಿಸಿ ಶುಭ ಕೋರಿದರು. ​ಜಿಲ್ಲಾ ಪಂಚಾಯತ್ ಕಚೇರಿ ಸಮೀಪದ ಕಟ್ಟಡದಲ್ಲಿ ಆರಂಭಿಸಲಾದ ಈ ‘ಅಕ್ಕ-ಕೆಫೆ’ಯನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸಂತೋಷ್ ಲಾಡ್, “ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ…

Read More