ನವಲಗುಂದ ಗ್ರಾಮ ಸಹಾಯಕರ ಸಂಘದ ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆ

Spread the love

ನವಲಗುಂದ: ತಾಲೂಕಿನ ಗ್ರಾಮ ಸಹಾಯಕರುಗಳ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಗುರುವಾರದಂದು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಧಾರವಾಡ ಜಿಲ್ಲಾಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇತೃತ್ವದಲ್ಲಿ ಗ್ರಾಮ ಸಹಾಯಕರ ಸಂಘದ ಪದಾಧಿಕಾರಿಗಳ ಪುನರ್ರಚನೆ ಪ್ರಕ್ರಿಯೆ ನಡೆಯಿತು.

ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧ್ಯಕ್ಷ ಶರಣಪ್ಪ ವಾಲಿಕರ ಅವರು, ನವಲಗುಂದ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಕೆ.ಎಂ. ಸೈಯದಅಲ್ಲಿ, ಅಧ್ಯಕ್ಷರಾಗಿ ಕೆ.ಎಚ್. ಮರಿನಾಯ್ಕರ, ಕಾರ್ಯದರ್ಶಿಯಾಗಿ ಎಂ.ಡಿ. ಲದ್ದಿಗಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಅದೇ ರೀತಿ ಉಪಾಧ್ಯಕ್ಷರಾಗಿ ಎಂ.ವಿ. ಬೆಳ್ಳಿಕಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಜೆ.ಎಂ. ಗಾಮನಗಟ್ಟಿ ಮತ್ತು ಸಂಚಾಲಕರಾಗಿ ಎಂ.ಎಸ್. ಶಿವಬಸಣ್ಣನವರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಲ್ಲಾ ಪದಾಧಿಕಾರಿಗಳ ಆಯ್ಕೆಯು ಸರ್ವಾನುಮತದಿಂದ ನಡೆದಿದೆ ಎಂದು ಶರಣಪ್ಪ ವಾಲಿಕರ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *