ನಾಳೆ ನಾಗನೂರಿನಲ್ಲಿ ಸದ್ಗುರು ಶ್ರೀ ಆತ್ಮಾನಂದ ಸ್ವಾಮೀಜಿಯವರ 43ನೇ ಪುಣ್ಯ ಸ್ಮರಣೋತ್ಸವ
ನವಲಗುಂದ: ತಾಲ್ಲೂಕಿನ ನಾಗನೂರ ಗ್ರಾಮದ ಜಗದ್ಗುರು ಶ್ರೀ ಶಿವಾನಂದ ಮಠದಲ್ಲಿ ಸದ್ಗುರು ಶ್ರೀ ಗುರುದೇವ ಆತ್ಮಾನಂದ ಸ್ವಾಮಿಗಳ 43ನೇ ವರ್ಷದ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ 19ರ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದೆ. ಸದ್ಗುರು ಶ್ರೀ ಗುರುದೇವ ಆತ್ಮಾನಂದ ಸ್ವಾಮಿಗಳು ಲಿಂಗೈಕ್ಯರಾದ ನೆನಪಿಗಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಜಗದ್ಗುರು ಶ್ರೀ ಸಮರ್ಥ ಶಿವಾನಂದ ಮಹಾಸ್ವಾಮಿಗಳು ವಹಿಸಲಿದ್ದು, ಭಕ್ತಾದಿಗಳಿಗೆ ಆಶೀರ್ವಚನ ನೀಡಲಿದ್ದಾರೆ. ಪರಮಪೂಜ್ಯ ಶೋ.ಬ್ರ ಶ್ರೀ ಬಸವರಾಜ ಪಂಡಿತರಿಂದ ಆಧ್ಯಾತ್ಮಿಕ ಪ್ರವಚನ…

