ಶಲವಡಿ ಗ್ರಾಮದ ಶ್ರೀ ವೀರಭದ್ರೇಶ್ವರ ರಥೋತ್ಸವ ವಿಜೃಂಭಣೆ: ಭಕ್ತಸಾಗರದಲ್ಲಿ ಜರುಗಿದ ಸಡಗರ
ನವಲಗುಂದ: ತಾಲೂಕಿನ ಸಮೀಪದ ಶಲವಡಿ ಗ್ರಾಮದ ಪ್ರಸಿದ್ಧ ಹಾಗೂ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇವಾಲಯದ ವಾರ್ಷಿಕ ರಥೋತ್ಸವವು ಮಂಗಳವಾರ ಭಕ್ತಾದಿಗಳ ಅಪಾರ ಜನಸ್ತೋಮದ ನಡುವೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಅಂಗವಾಗಿ ಬೆಳ್ಳಂಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಪೂಜೆ, ಪುನಸ್ಕಾರಗಳು, ರುದ್ರಾಭಿಷೇಕ ಹಾಗೂ ಪುಷ್ಪಾಲಂಕಾರ ಸೇವೆಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಸಂಜೆ ಸಕಲ ವಾದ್ಯಗೋಷ್ಠಿಗಳೊಂದಿಗೆ ಆರಂಭವಾದ ರಥೋತ್ಸವಕ್ಕೆ ವಿರಕ್ತಮಠದ ಶ್ರೀ ಗುರುಶಾಂತೇಶ್ವರ ಸ್ವಾಮಿಗಳು ಚಾಲನೆ ನೀಡಿ ಆಶೀರ್ವಚನ ನೀಡಿದರು. ಹೂವುಗಳಿಂದ ಹಾಗೂ ರಂಗುರಂಗಿನ ಬಟ್ಟೆಗಳಿಂದ ಸಿಂಗಾರಗೊಂಡ ಭವ್ಯ ರಥದಲ್ಲಿ…

