ಧಾರವಾಡ: ಮಿತಿಮೀರಿದ ಮರಳು ತುಂಬಿದ ಟಿಪ್ಪರ್ ಅಟ್ಟಹಾಸ; ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ, ಜನರ ಆಕ್ರೋಶ
ಧಾರವಾಡ: ನಗರದ ಮರಾಠಾ ಕಾಲನಿಯ ಯುನಿಟಿ ಆಸ್ಪತ್ರೆ ಸಮೀಪ ಶನಿವಾರ ಬೆಳಿಗ್ಗೆ ಮರಳು ತುಂಬಿದ ಟಿಪ್ಪರ್‌ನಿಂದ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಮಿತಿಮೀರಿ ಮರಳು ಸಾಗಿಸುವ ಟಿಪ್ಪರ್‌ಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಯಮ ಬಾಹಿರವಾಗಿ ಟಿಪ್ಪರ್‌ನಲ್ಲಿ ಹೆಚ್ಚು ಮರಳು ತುಂಬಿಕೊಂಡು ನಗರದ ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದೇ ಇಂತಹ ಅನಾಹುತಗಳಿಗೆ ಮೂಲ ಕಾರಣ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಶನಿವಾರ ಬೆಳಿಗ್ಗೆ ಮರಳು ತುಂಬಿದ ಟಿಪ್ಪರ್ ಮರಾಠಾ ಕಾಲನಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಹಠಾತ್ ಬ್ರೇಕ್ ವೈಫಲ್ಯ ಸಂಭವಿಸಿದೆ. ಮಿತಿಮೀರಿದ…

