ಧಾರವಾಡದಲ್ಲಿ ‘ಮಾಯಾಂಗಿ’ಯ ಹನಿಟ್ರ್ಯಾಪ್: ಪ್ರೀತಿಯ ನಾಟಕವಾಡಿ ಲಕ್ಷಾಂತರ ರೂಪಾಯಿ ಪಂಗನಾಮ!
ಧಾರವಾಡ: ಪ್ರೀತಿ, ಮದುವೆಯೆಂಬ ಆಮಿಷವೊಡ್ಡಿ ಯುವಕರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ ಕಿಲಾಡಿ ಲೇಡಿಯೊಬ್ಬಳ ಅಸಲಿ ಮುಖವಾಡ ಕಳಚಿದೆ. ಅರೋಹಿ, ರೇಣುಕಾ ಹಾಗೂ ಐಶ್ವರ್ಯ ಎಂಬ ಮೂರು ಹೆಸರುಗಳನ್ನು ಬಳಸಿಕೊಂಡು ಯುವಕರಿಗೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಈ ‘ಮಾಯಾಂಗಿ’ಯ ಜಾಲಕ್ಕೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ನಡೆದಿದ್ದೇನು? ಬಂಧಿತ ಯುವತಿಯನ್ನು ಐಶ್ವರ್ಯ ಎಂದು ಗುರುತಿಸಲಾಗಿದ್ದು, ಈಕೆ ತನ್ನ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡು ಯುವಕರನ್ನು ಟಾರ್ಗೆಟ್ ಮಾಡುತ್ತಿದ್ದಳು. ಧಾರವಾಡದ ಗುರು ವಕ್ಕುಂದ್ ಎಂಬ ಯುವಕನಿಗೆ ಮದುವೆಯಾಗುವುದಾಗಿ…

