ಮಹಿಳೆ ಮೇಲಿನ ಲೈಂಗಿಕ ದೌರ್ಜನ್ಯ: ಕುಂದಗೋಳ ತಾಲ್ಲೂಕಿನ ರಟ್ಟಿಗೇರಿಯಲ್ಲಿ ಘಟನೆ, ಪ್ರಕರಣ ದಾಖಲು

Spread the love

ಕುಂದಗೋಳ: ತಾಲ್ಲೂಕಿನ ರಟ್ಟಿಗೇರಿ ಗ್ರಾಮದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಸಾರ್ವಜನಿಕವಾಗಿ ಮಾನಭಂಗಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದ್ದು, ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಟ್ಟಿಗೇರಿ ಗ್ರಾಮದ ನಿವಾಸಿಯಾದ 40 ವರ್ಷದ ನೀಲಮ್ಮ ಮಂಜುನಾಥ ಗೌಡಗೇರಿ ಎಂಬುವವರೇ ದೌರ್ಜನ್ಯಕ್ಕೊಳಗಾದ ಮಹಿಳೆಯಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿರುವ ಇವರು ಮೇ 22ರಂದು ಮಧ್ಯಾಹ್ನ 1-30ರ ಸುಮಾರಿಗೆ ಎಂದಿನಂತೆ ಆಡುಗಳನ್ನು ಮೇಯಿಸಲು ಗ್ರಾಮದ ಹತ್ತಿರದ ಗುಡ್ಡದ ಕಡೆಗೆ ಹೋಗಿದ್ದರು. ಈ ಸಂದರ್ಭದಲ್ಲಿ ಆರೋಪಿಯು ಇವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ.

ಮಹಿಳೆಯು ಗುಡ್ಡದ ಬಳಿಯಿರುವ ಮುದಕಪ್ಪ ನಿಂಗಪ್ಪ ಗೊರವಿ ಎಂಬುವವರ ಹೊಲದ ಬದುವಿನಲ್ಲಿದ್ದ ನುಗ್ಗೆ ಗಿಡದಿಂದ ನುಗ್ಗೆಕಾಯಿ ಕೀಳಲು ಕೈ ಮೇಲೆ ಮಾಡಿದಾಗ, ಹಿಂದಿನಿಂದ ಹೊಂಚು ಹಾಕಿ ಬಂದ ಆರೋಪಿಯು ಬಯಕೆ ಈಡೇರಿಸಿಕೊಳ್ಳುವ ದುರುದ್ದೇಶದಿಂದ ಮಹಿಳೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾನೆ. ಅಷ್ಟೇ ಅಲ್ಲದೆ ಆಕೆಯನ್ನು ಸಾರ್ವಜನಿಕವಾಗಿ ಮಾನಭಂಗ ಮಾಡುವ ಉದ್ದೇಶದಿಂದ ಕಿರುಚಾಡದಂತೆ ಬಲವಂತವಾಗಿ ಬಾಯನ್ನು ಒತ್ತಿ ಹಿಡಿದು ಲೈಂಗಿಕವಾಗಿ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.

ಈ ಅಮಾನವೀಯ ಘಟನೆಯಿಂದ ತೀವ್ರ ಕಂಗೆಟ್ಟ ಸಂತ್ರಸ್ತೆ ನೀಲಮ್ಮ ಅವರು ಮೇ 23ರಂದು ಗುಡಗೇರಿ ಪೊಲೀಸ್ ಠಾಣೆಗೆ ಖುದ್ದಾಗಿ ಹಾಜರಾಗಿ ತನಗಾದ ಅನ್ಯಾಯದ ಕುರಿತು ಲಿಖಿತ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಸಾರಾಂಶವನ್ನು ಸ್ವೀಕರಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ಕ್ರಮ ಕೈಮದ ಬಗ್ಗೆ ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *