ಧಾರವಾಡ:ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಮರು ಅರ್ಜಿ ಆಹ್ವಾನ

Spread the love

ಧಾರವಾಡ: ಜಿಲ್ಲೆಯಲ್ಲಿ ಒಟ್ಟು 42 ಅಂಗನವಾಡಿ ಕಂ ಕ್ರಷ್ ಕೇಂದ್ರಗಳನ್ನು ಮಂಜೂರು ಮಾಡಿ, ಆರು ಶಿಶು ಅಭಿವೃದ್ಧಿ ಯೋಜನೆಗಳ ವ್ಯಾಪ್ತಿಯಲ್ಲಿ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಈ ಪೈಕಿ ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆಯರ ಎರಡು ಹಾಗೂ ಸಹಾಯಕಿಯರ 15 ಹುದ್ದೆಗಳಿಗೆ ಈ ಹಿಂದೆ ಅರ್ಹ ಅಭ್ಯರ್ಥಿಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಮರು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆಯರ ಹುದ್ದೆಗಳು ಹುಬ್ಬಳ್ಳಿ-ಧಾರವಾಡ ಶಹರ ಯೋಜನೆಯ ಬ್ಯಾಹಟ್ಟಿ ಪ್ಲಾಟ್-1 ಕೇಂದ್ರ ಹಾಗೂ ಕುಂದಗೋಳ ಯೋಜನೆಯ ಕುಂದಗೋಳ-19 ಕೇಂದ್ರದಲ್ಲಿ ಖಾಲಿ ಇವೆ. ಸಹಾಯಕಿಯರ ಹುದ್ದೆಗಳು ಧಾರವಾಡ ಗ್ರಾಮೀಣ ಯೋಜನೆಯ ನರೇಂದ್ರ-11 (ಕಾಯಕನಗರ), ಹುಬ್ಬಳ್ಳಿ ಗ್ರಾಮೀಣ ಯೋಜನೆಯ ಇಂಗಳಹಳ್ಳಿ-1, ಮಂಟೂರ-3, ಕರಡಿಕೊಪ್ಪ-1, ಹುಬ್ಬಳ್ಳಿ-ಧಾರವಾಡ ಶಹರ ಯೋಜನೆಯ ಸುತಗಟ್ಟಿ-2, ತಾರಿಹಾಳ-3, ಬ್ಯಾಹಟ್ಟಿ ಪ್ಲಾಟ್-1, ಈಶ್ವರನಗರ-1, ಕಲಘಟಗಿ ಯೋಜನೆಯ ಉಗ್ಗಿನಕೇರಿ-3, ಕುಂದಗೋಳ ಯೋಜನೆಯ ಕಳಸ-8, ಹಿರೇನರ್ತಿ-2, ಕಮಡೊಳ್ಳಿ-9, ಸಂಶಿ-5 ಹಾಗೂ ನವಲಗುಂದ ಯೋಜನೆಯ ಅಣ್ಣಿಗೇರಿ-27 ಮತ್ತು ಅಣ್ಣಿಗೇರಿ-31 ಕೇಂದ್ರಗಳಲ್ಲಿ ಲಭ್ಯವಿವೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 30, 2026ರೊಳಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *