ರಾಜ್ಯದಲ್ಲಿ ಹೊಸ ಅಬಕಾರಿ ನೀತಿ: 579 ಮದ್ಯದ ಅಂಗಡಿ ಲೈಸೆನ್ಸ್ ಇ-ಹರಾಜು, ಲೈವ್ ಬಿಡ್ಡಿಂಗ್ ಆರಂಭ
ಬೆಂಗಳೂರು: ರಾಜ್ಯ ಸರ್ಕಾರವು ತನ್ನ ಅಬಕಾರಿ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲು ಹೊಸದೊಂದು ಮಹತ್ವದ ಯೋಜನೆಗೆ ಕೈಹಾಕಿದೆ. ಇದರ ಭಾಗವಾಗಿ ರಾಜ್ಯಾದ್ಯಂತ ಒಟ್ಟು 579 ಮದ್ಯದ ಅಂಗಡಿಗಳ ಅಬಕಾರಿ ಪರವಾನಗಿಗಳನ್ನು (ಲೈಸೆನ್ಸ್) ಆನ್‌ಲೈನ್ ಮೂಲಕ ಮುಕ್ತವಾಗಿ ಹರಾಜು ಮಾಡಲು ಕರ್ನಾಟಕ ಆರ್ಥಿಕ ಇಲಾಖೆಯು ತೀರ್ಮಾನಿಸಿದೆ. ಈ ಇ-ಹರಾಜು ಪ್ರಕ್ರಿಯೆಯಲ್ಲಿ ಅತ್ಯಂತ ಪಾರದರ್ಶಕವಾಗಿ ಲೈವ್ ಬಿಡ್ಡಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದ್ದು, ಅತಿ ಹೆಚ್ಚು ಬಿಡ್ ಮಾಡುವ ಅರ್ಹ ಆಕಾಂಕ್ಷಿಗಳಿಗೆ ಮುಂದಿನ 5 ವರ್ಷಗಳ ಅವಧಿಗೆ ಲೈಸೆನ್ಸ್ ಹಂಚಿಕೆ ಮಾಡಲಾಗುತ್ತದೆ. ಈ ಮಹತ್ವದ…

