
ಕುಂದಗೋಳ: ತಾಲ್ಲೂಕಿನ ಸಂಶಿ ಗ್ರಾಮದ ಕೆ.ಎಲ್.ಇ. ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಪ್ರಕಟವಾದ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ (ಕೆ.ಯು.) ಬಿ.ಕಾಂ. 6ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಕಾಲೇಜು ಒಟ್ಟಾರೆ ಶೇ.100 ಫಲಿತಾಂಶ ಗಳಿಸಿದೆ.
ಪರೀಕ್ಷೆಗೆ ಹಾಜರಾದ 32 ವಿದ್ಯಾರ್ಥಿಗಳಲ್ಲಿ, 31 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ ಒಬ್ಬ ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳು:
- ಸನಾ ಎಸ್. ಅಲ್ಲಾಡಬಾಯಿ (ಶೇ. 98) – ಪ್ರಥಮ
- ವಿದ್ಯಾ ವಿ. ಮಡ್ಲಿ (ಶೇ. 97.43) – ದ್ವಿತೀಯ
- ರೇಣುಕಾ ಎಂ. ಇಂಗಳಹಳ್ಳಿ (ಶೇ. 96.42) – ತೃತೀಯ
- ಚೈತ್ರಾ ಹೆಬಸೂರ (ಶೇ. 95.85)
- ಲಕ್ಷ್ಮೀ ಹೊಳಗಣ್ಣವರ (ಶೇ. 95.57)
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ಎ.ಬಿ. ಉಪ್ಪಿನ, ಪ್ರಾಚಾರ್ಯ ಪ್ರೊ. ರಮೇಶ ಅತ್ತಿಗೇರಿ, ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

