ಪಡೆಸೂರು ಕೃಷಿ ಪತ್ತಿನ ಸಹಕಾರಿ ಸಂಘ: ಅಧ್ಯಕ್ಷರಾಗಿ ದೇವಪ್ಪ ಡಂಬಳ ಆಯ್ಕೆ

Spread the love

ನವಲಗುಂದ: ತಾಲೂಕಿನ ಪಡೆಸೂರು ಗ್ರಾಮದ ಪ್ರಾಥಮಿಕ ಕೃಷಿ ಸಹಕಾರಿ ಪತ್ತಿನ ನಿಯಮಿತ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ದೇವಪ್ಪ ಮಲ್ಲಪ್ಪ ಡಂಬಳ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

​ಸಂಘದ ಕಚೇರಿಯಲ್ಲಿ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ದೊಡ್ಡಲಕ್ಷ್ಮಪ್ಪ ತಳವಾರ ಅವರು ಆಯ್ಕೆಯಾದರು. ಉಳಿದಂತೆ ಸಂಘದ ನಿರ್ದೇಶಕರುಗಳಾಗಿ ರಮೇಶ ನವಲಗುಂದ, ಸಕ್ರಪ್ಪ ತೋಟದ, ಚನ್ನಪ್ಪ ಅಣ್ಣಗೇರಿ, ಪರಮೇಶ್ವರ ಹಳ್ಳಿಕೇರಿ, ಸಂಗಪ್ಪ ಗಾಳಿ, ಮಂಜುನಾಥ ಗಾಳಿ, ಸಿದ್ರಾಮಪ್ಪ ಕಾಳಿ, ಬೀರಪ್ಪ ಕೊಂಗವಾಡ ಹಾಗೂ ಮಹಿಳಾ ಮೀಸಲಾತಿ ಅಡಿಯಲ್ಲಿ ನಿಂಗವ್ವ ಅಕ್ಕಿ ಮತ್ತು ರೇಣವ್ವ ಹೆಬ್ಬಾಳ ಅವರುಗಳು ಆಯ್ಕೆಯಾಗಿದ್ದಾರೆ.

​ಚುನಾವಣಾ ಅಧಿಕಾರಿಯಾಗಿ ಶ್ರೀದೇವಿ ಕುಲಕರ್ಣಿ ಅವರು ಕಾರ್ಯನಿರ್ವಹಿಸಿ, ನೂತನ ಪದಾಧಿಕಾರಿಗಳ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು. ಸಂಘದ ಕಾರ್ಯದರ್ಶಿ ಭೀಮಪ್ಪ ಕೆಂಚಪ್ಪನವರ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಸಹಾಯಕ ಅಧೀಕ್ಷಕರಾಗಿ ಸಹಕರಿಸಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಗ್ರಾಮದ ಮುಖಂಡರು ಹಾಗೂ ಸಂಘದ ಸದಸ್ಯರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *