ಧಾರವಾಡ ಜಿಲ್ಲೆಯ 137 ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳ ನೇಮಕ: ಪ್ರಭಾರ ಜಿಲ್ಲಾಧಿಕಾರಿ ಭುವನೇಶ್ವರ ಪಾಟೀಲ ಆದೇಶ

Spread the love

ಧಾರವಾಡ (ಫೆಬ್ರವರಿ 02): ಜಿಲ್ಲೆಯ ಗ್ರಾಮ ಪಂಚಾಯತಿಗಳ ಚುನಾಯಿತ ಸದಸ್ಯರ ಅವಧಿ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಸುಗಮ ನಿರ್ವಹಣೆಗಾಗಿ ಜಿಲ್ಲೆಯ ಒಟ್ಟು 137 ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಅಧಿಸೂಚನೆ ಹೊರಡಿಸಿದ್ದಾರೆ.

​ಜಿಲ್ಲೆಯ 135 ಗ್ರಾಮ ಪಂಚಾಯತಿಗಳ ಅವಧಿ ಈಗಾಗಲೇ ಮುಕ್ತಾಯ ಹಂತದಲ್ಲಿದ್ದರೆ, ನವಲಗುಂದ ತಾಲೂಕಿನ ಬೆಳವಟಿಗೆ ಗ್ರಾಮ ಪಂಚಾಯತಿ (ಏಪ್ರಿಲ್ 20, 2026) ಹಾಗೂ ಹುಬ್ಬಳ್ಳಿ ತಾಲೂಕಿನ ಮಲ್ಲಿಗವಾಡ ಗ್ರಾಮ ಪಂಚಾಯತಿ (ಆಗಸ್ಟ್ 23, 2026) ಸದಸ್ಯರ ಅವಧಿಯು ಮುಂದೆ ಮುಕ್ತಾಯಗೊಳ್ಳಲಿದೆ. ಈ ಎಲ್ಲ ಪಂಚಾಯತಿಗಳಿಗೆ ಜನವರಿ 29, 2026 ರಂದೇ ಪ್ರಭಾರ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಗಳನ್ನು ನಿಯೋಜಿಸಿ ಆದೇಶಿಸಿದ್ದಾರೆ.

ತಾಲೂಕುವಾರು ನೇಮಕಾತಿ ವಿವರ:

ಅಧಿಸೂಚನೆಯ ಪ್ರಕಾರ, ಧಾರವಾಡ ತಾಲೂಕಿನ 35, ಅಳ್ನಾವರ ತಾಲೂಕಿನ 4, ನವಲಗುಂದ ತಾಲೂಕಿನ 14, ಅಣ್ಣಿಗೇರಿ ತಾಲೂಕಿನ 8, ಹುಬ್ಬಳ್ಳಿ ತಾಲೂಕಿನ 26, ಕುಂದಗೋಳ ತಾಲೂಕಿನ 23 ಮತ್ತು ಕಲಘಟಗಿ ತಾಲೂಕಿನ 27 ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಸದಸ್ಯರ ಅವಧಿ ಮುಕ್ತಾಯವಾದ ತಕ್ಷಣವೇ ಈ ಅಧಿಕಾರಿಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಅಧಿಕಾರ ಮತ್ತು ಕರ್ತವ್ಯ:

ಕರ್ನಾಟಕ ಪಂಚಾಯತ ರಾಜ್ 1993 ರ ಅಧಿನಿಯಮದಂತೆ, ನೇಮಕಗೊಂಡ ಆಡಳಿತಾಧಿಕಾರಿಗಳು ಗ್ರಾಮ ಪಂಚಾಯತಿಯ ಎಲ್ಲಾ ಅಧಿಕಾರಗಳನ್ನು ಚಲಾಯಿಸಬೇಕು ಮತ್ತು ಕರ್ತವ್ಯಗಳನ್ನು ನೆರವೇರಿಸಬೇಕು. 2026-31 ರ ಅವಧಿಗಾಗಿ ಚುನಾವಣೆ ನಡೆದು ಹೊಸ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗುವವರೆಗೆ ಈ ಅಧಿಕಾರಿಗಳು ಪ್ರಭಾರದಲ್ಲಿರುತ್ತಾರೆ. ಈ ಆದೇಶವು ಹುದ್ದೆವಾರು ಇರುವುದರಿಂದ ಅಧಿಕಾರಿಗಳು ವರ್ಗವಾದರೂ, ಆ ಹುದ್ದೆಗೆ ಬರುವ ಹೊಸ ಅಧಿಕಾರಿಗಳೇ ಆಡಳಿತಾಧಿಕಾರಿಯಾಗಿ ಮುಂದುವರಿಯಲಿದ್ದಾರೆ.

ತಾಲೂಕುವಾರು ಆಡಳಿತಾಧಿಕಾರಿಗಳ ವಿವರ:

ನವಲಗುಂದ ತಾಲೂಕು:

  • ಅಳಗವಾಡಿ ಗ್ರಾಮ ಪಂಚಾಯತಿ: ತಾಂತ್ರಿಕ ಸಹಾಯಕರು, ನೀರಾವರಿ ಇಲಾಖೆ (ಉಪ ವಿಭಾಗ 4).
  • ಜಾವೂರ ಗ್ರಾಮ ಪಂಚಾಯತಿ: ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ.
  • ಗುಮ್ಮಗೋಳ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಗ್ರಾ.ಕು.ನೀ ಮತ್ತು ನೈರ್ಮಲ್ಯ).
  • ಶಿರೂರ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಪಂಚಾಯತ ರಾಜ್ ಉಪ-ವಿಭಾಗ).
  • ಮೊರಬ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ.
  • ಶಿರಕೋಳ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ ಶಲವಡಿ.
  • ತಿರ್ಲಾಪೂರ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ (ನಂ:17).
  • ಬೆಳಹಾರ ಗ್ರಾಮ ಪಂಚಾಯತಿ: ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ.
  • ನಾಯಕನೂರ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ ಅಳಗವಾಡಿ.
  • ತಡಹಾಳ ಗ್ರಾಮ ಪಂಚಾಯತಿ: ಸಹಾಯಕ ಅಭಿಯಂತರರು, ನೀರಾವರಿ ಇಲಾಖೆ ಮೊರಬ.
  • ಗುಡಿಸಾಗರ ಗ್ರಾಮ ಪಂಚಾಯತಿ: ಸಹಾಯಕ ಅಭಿಯಂತರರು, ನೀರಾವರಿ ಇಲಾಖೆ (ನಂ:16).
  • ಹಾಳಕುಸುಗಲ್ಲ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ.
  • ಹೆಬ್ಬಾಳ ಗ್ರಾಮ ಪಂಚಾಯತಿ: ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು (ಬಿ.ಸಿ.ಎಮ್).
  • ಬೆಳವಟಗಿ ಗ್ರಾಮ ಪಂಚಾಯತಿ (ಏ.20 ರಿಂದ): ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ.

ಅಣ್ಣಿಗೇರಿ ತಾಲೂಕು:

  • ಶಿಶ್ವಿನಹಳ್ಳಿ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು, ನೀರಾವರಿ ಇಲಾಖೆ (ನಂ-4 ಕಿರೇಸೂರ).
  • ನಲವಡಿ ಗ್ರಾಮ ಪಂಚಾಯತಿ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (ಮಹಿಳಾ ಮತ್ತು ಮಕ್ಕಳ ಕಲ್ಯಾಣ).
  • ಭದ್ರಾಪೂರ ಗ್ರಾಮ ಪಂಚಾಯತಿ: ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕ ಪಂಚಾಯತ ಅಣ್ಣಿಗೇರಿ.
  • ಹಳ್ಳಿಕೇರಿ ಗ್ರಾಮ ಪಂಚಾಯತಿ: ವಲಯ ಅರಣ್ಯಾಧಿಕಾರಿಗಳು, ಸಾಮಾಜಿಕ ಅರಣ್ಯ ಇಲಾಖೆ.
  • ತುಪ್ಪದಕುರಹಟ್ಟಿ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ.
  • ನಾವಳ್ಳಿ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ ಅಣ್ಣಿಗೇರಿ.
  • ಶಲವಡಿ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು, ಲೋಕೋಪಯೋಗಿ ಇಲಾಖೆ.
  • ಇಬ್ರಾಹಿಂಪೂರ ಗ್ರಾಮ ಪಂಚಾಯತಿ: ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ.

ಕಲಘಟಗಿ ತಾಲೂಕು:

  • ಧುಮ್ಮವಾಡ ಗ್ರಾಮ ಪಂಚಾಯತಿ & ಬಮ್ಮಿಗಟ್ಟಿ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಕುಡಿಯುವ ನೀರು ಮತ್ತು ನೈರ್ಮಲ್ಯ).
  • ಗಂಬ್ಯಾಪೂರ ಗ್ರಾಮ ಪಂಚಾಯತಿ & ಬೀರವಳ್ಳಿ ಗ್ರಾಮ ಪಂಚಾಯತಿ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (ಮಹಿಳಾ ಮತ್ತು ಮಕ್ಕಳ ಕಲ್ಯಾಣ).
  • ಗಳಗಿ ಗ್ರಾಮ ಪಂಚಾಯತಿ, ಜಿನ್ನೂರ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ.
  • ಮುತ್ತಗಿ ಗ್ರಾಮ ಪಂಚಾಯತಿ, ದೇವಿಕೊಪ್ಪ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಪಂಚಾಯತ ರಾಜ್ ಇಂಜನೀಯರಿಂಗ್).
  • ಕುರುವಿನಕೊಪ್ಪ ಗ್ರಾಮ ಪಂಚಾಯತಿ: ತಾಲೂಕ ಆರೋಗ್ಯಾಧಿಕಾರಿಗಳು.
  • ದೇವಲಿಂಗಿಕೊಪ್ಪ ಗ್ರಾಮ ಪಂಚಾಯತಿ, ತಬಕದಹೊನ್ನಿಹಳ್ಳಿ ಗ್ರಾಮ ಪಂಚಾಯತಿ: ಕ್ಷೇತ್ರ ಶಿಕ್ಷಣಾಧಿಕಾರಿಗಳು.
  • ಜಿ.ಬಸನಕೊಪ್ಪ ಗ್ರಾಮ ಪಂಚಾಯತಿ, ತಾವರಗೇರಿ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಲೋಕೋಪಯೋಗಿ).
  • ಹಿರೇಹೊನ್ನಿಹಳ್ಳಿ ಗ್ರಾಮ ಪಂಚಾಯತಿ, ಸಂಗಮೇಶ್ವರ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ.
  • ಮಿಶ್ರಿಕೋಟಿ ಗ್ರಾಮ ಪಂಚಾಯತಿ, ತಂಬೂರ ಗ್ರಾಮ ಪಂಚಾಯತಿ: ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು.
  • ಉಗ್ನಿಕೇರಿ ಗ್ರಾಮ ಪಂಚಾಯತಿ, ಭೋಗೇನಾಗರಕೊಪ್ಪ ಗ್ರಾಮ ಪಂಚಾಯತಿ, ಗುಡ್ಡದಹುಲಿಕಟ್ಟಿ ಗ್ರಾಮ ಪಂಚಾಯತಿ: ಪಶು ವೈದ್ಯಾಧಿಕಾರಿಗಳು.
  • ಗಂಜೀಗಟ್ಟಿ ಗ್ರಾಮ ಪಂಚಾಯತಿ: ತಾಲೂಕಾ ಯೋಜನಾಧಿಕಾರಿಗಳು.
  • ಸೂರಶೆಟ್ಟಿಕೊಪ್ಪ ಗ್ರಾಮ ಪಂಚಾಯತಿ: ಪ್ರಾಂಶುಪಾಲರು, ಆದರ್ಶ ವಿದ್ಯಾಲಯ ದಾಸ್ತಿಕೊಪ್ಪ.
  • ಮುಕ್ಕಲ್ ಗ್ರಾಮ ಪಂಚಾಯತಿ: ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು.
  • ಬೆಲವಂತರ ಗ್ರಾಮ ಪಂಚಾಯತಿ, ಸೂಳಿಕಟ್ಟಿ ಗ್ರಾಮ ಪಂಚಾಯತಿ: ವಲಯ ಅರಣ್ಯಾಧಿಕಾರಿಗಳು (ಪ್ರಾದೇಶಿಕ).
  • ಮಡಕಿಹೊನ್ನಿಹಳ್ಳಿ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು (ಗ್ರಾಮ ಉದ್ಯೋಗ).
  • ದಾಸ್ತಿಕೊಪ್ಪ ಗ್ರಾಮ ಪಂಚಾಯತಿ: ಕಾರ್ಯದರ್ಶಿ, ಎ.ಪಿ.ಎಮ್.ಸಿ.

ಕುಂದಗೋಳ ತಾಲೂಕು:

  • ಕಳಸ ಗ್ರಾಮ ಪಂಚಾಯತಿ, ಹರ್ಲಾಪೂರ ಗ್ರಾಮ ಪಂಚಾಯತಿ: ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ.
  • ಗೌಡಗೇರಿ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ.
  • ಗುಡಗೇರಿ ಗ್ರಾಮ ಪಂಚಾಯತಿ: ಕ್ಷೇತ್ರ ಶಿಕ್ಷಣಾಧಿಕಾರಿಗಳು.
  • ಸಂಶಿ ಗ್ರಾಮ ಪಂಚಾಯತಿ, ಹಿರೇನರ್ತಿ ಗ್ರಾಮ ಪಂಚಾಯತಿ: ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ.
  • ಗುಡೇನಕಟ್ಟಿ ಗ್ರಾಮ ಪಂಚಾಯತಿ, ಯರೇಬೂದಿಹಾಳ ಗ್ರಾಮ ಪಂಚಾಯತಿ: ಕ್ಷೇತ್ರ ಸಮನ್ವಯ ಅಧಿಕಾರಿಗಳು (ಬಿ.ಆರ್.ಸಿ).
  • ಹಿರೇಗುಂಜಳ ಗ್ರಾಮ ಪಂಚಾಯತಿ, ಯರಗುಪ್ಪಿ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ.
  • ರೊಟ್ಟಿಗವಾಡ ಗ್ರಾಮ ಪಂಚಾಯತಿ: ವಲಯ ಅರಣ್ಯ ಅಧಿಕಾರಿಗಳು.
  • ಕಮಡೊಳ್ಳಿ ಗ್ರಾಮ ಪಂಚಾಯತಿ, ಶಿರೂರ ಗ್ರಾಮ ಪಂಚಾಯತಿ: ಮುಖ್ಯ ಪಶುವೈದ್ಯಾಧಿಕಾರಿಗಳು.
  • ದೇವನೂರ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಹೆಸ್ಕಾಂ.
  • ಬೆಟದೂರ ಗ್ರಾಮ ಪಂಚಾಯತಿ: ಸಹಾಯಕ ಲೆಕ್ಕಾಧಿಕಾರಿಗಳು, ತಾಲೂಕ ಪಂಚಾಯತ.
  • ಯಲಿವಾಳ ಗ್ರಾಮ ಪಂಚಾಯತಿ, ರಾಮನಕೊಪ್ಪ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ.
  • ಹಿರೇಹರಕುಣಿ ಗ್ರಾಮ ಪಂಚಾಯತಿ, ಬು. ತರ್ಲಘಟ್ಟ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಪಂ.ರಾ. ಇಂಜನೀಯರಿಂಗ್).
  • ಕೂಬಿಹಾಳ ಗ್ರಾಮ ಪಂಚಾಯತಿ, ಇಂಗಳಗಿ ಗ್ರಾಮ ಪಂಚಾಯತಿ: ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು.
  • ಮತ್ತಿಗಟ್ಟಿ ಗ್ರಾಮ ಪಂಚಾಯತಿ, ಗುರುವಿನಹಳ್ಳಿ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಲೋಕೋಪಯೋಗಿ).

ಹುಬ್ಬಳ್ಳಿ ತಾಲೂಕು:

  • ಬ್ಯಾಹಟ್ಟಿ ಗ್ರಾಮ ಪಂಚಾಯತಿ, ಛಬ್ಬಿ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯದರ್ಶಿಗಳು, ಎ.ಪಿ.ಎಮ್.ಸಿ.
  • ಸುಳ್ಳ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಗ್ರಾಮೀಣ ಕುಡಿಯವ ನೀರು).
  • ಕುಸುಗಲ್ಲ ಗ್ರಾಮ ಪಂಚಾಯತಿ: ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತ.
  • ಹೆಬಸೂರ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕನೀನಿನಿ (ನಂ.4 ಕಿರೇಸೂರ).
  • ಕಿರೇಸೂರ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಹೆಸ್ಕಾಂ ಗ್ರಾಮೀಣ).
  • ಇಂಗಳಹಳ್ಳಿ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು (ಗ್ರಾಮ ಉದ್ಯೋಗ).
  • ಕೋಳಿವಾಡ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಲೋಕೊಪಯೋಗಿ ಮತ್ತು ಬಂದರು).
  • ಶಿರಗುಪ್ಪಿ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಕನೀನಿನಿ (ನಂ.11 ಬ್ಯಾಹಟ್ಟಿ).
  • ಮಂಟೂರ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು, ಭೂ ಮಾಪನ ಇಲಾಖೆ.
  • ಭಂಡಿವಾಡ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ.
  • ಹಳ್ಯಾಳ ಗ್ರಾಮ ಪಂಚಾಯತಿ: ಸಹಾಯಕ ಕೃಷಿ ನಿರ್ದೇಶಕರು.
  • ಅದರಗುಂಚಿ ಗ್ರಾಮ ಪಂಚಾಯತಿ: ವಲಯ ಅರಣ್ಯಾಧಿಕಾರಿಗಳು (ಪ್ರಾದೇಶಿಕ).
  • ನೂಲ್ವಿ ಗ್ರಾಮ ಪಂಚಾಯತಿ: ರೇಷ್ಮೆ ವಿಸ್ತರಣಾಧಿಕಾರಿಗಳು.
  • ಶರೇವಾಡ ಗ್ರಾಮ ಪಂಚಾಯತಿ: ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು.
  • ಬಿ.ಅರಳಿಕಟ್ಟಿ ಗ್ರಾಮ ಪಂಚಾಯತಿ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ಪಂಚಾಯತ ರಾಜ್ ಇಂಜನೀಯರಿಂಗ್).
  • ವರೂರ ಗ್ರಾಮ ಪಂಚಾಯತಿ: ತಾಲೂಕಾ ವೈದ್ಯಾಧಿಕಾರಿಗಳು.
  • ಅಗಡಿ ಗ್ರಾಮ ಪಂಚಾಯತಿ: ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು.
  • ಕರಡಿಕೊಪ್ಪ ಗ್ರಾಮ ಪಂಚಾಯತಿ: ಸಹಾಯಕ ನಿರ್ದೇಶಕರು (ಪಂಚಾಯತ ರಾಜ್).
  • ಬೆಳಗಲಿ ಗ್ರಾಮ ಪಂಚಾಯತಿ: ತಾಲೂಕಾ ವಿಸ್ತರಣಾಧಿಕಾರಿಗಳು (ಅಲ್ಪಸಂಖ್ಯಾತರ ಕಲ್ಯಾಣ).
  • ಕಟ್ನೂರ ಗ್ರಾಮ ಪಂಚಾಯತಿ: ಸಹಾಯಕ ಲೆಕ್ಕಾಧಿಕಾರಿಗಳು, ತಾಲೂಕ ಪಂಚಾಯತ.
  • ಅಂಚಟಗೇರಿ ಗ್ರಾಮ ಪಂಚಾಯತಿ: ಹಿರಿಯ ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ.
  • ಚನ್ನಾಪೂರ ಗ್ರಾಮ ಪಂಚಾಯತಿ: ಕೈಗಾರಿಕಾ ವಿಸ್ತರಣಾಧಿಕಾರಿಗಳು.
  • ರಾಯನಾಳ ಗ್ರಾಮ ಪಂಚಾಯತಿ: ವಲಯ ಅರಣ್ಯಾಧಿಕಾರಿಗಳು (ಸಾಮಾಜಿಕ).
  • ದೇವರಗುಡಿಹಾಳ ಗ್ರಾಮ ಪಂಚಾಯತಿ: ತಾಲೂಕಾ ಯೋಜನಾಧಿಕಾರಿಗಳು.
  • ಮಲ್ಲಿಗವಾಡ ಗ್ರಾಮ ಪಂಚಾಯತಿ (ಆ.23 ರಿಂದ): ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ.

Leave a Reply

Your email address will not be published. Required fields are marked *