ಭೀಕರ ಅಪಘಾತಕ್ಕೆ ಇನ್ಸ್‌ಪೆಕ್ಟರ್ ಬಲಿ: ಅಣ್ಣಿಗೇರಿ ಬಳಿ ನಡೆದ ದುರಂತದಲ್ಲಿ ಪಂಚಾಕ್ಷರಿ ಹಿರೇಮಠ ಸ್ಥಳದಲ್ಲೇ ಸಾವು

Spread the love

ಹುಬ್ಬಳ್ಳಿ: (ಡಿ. 5) ಧಾರವಾಡ ಜಿಲ್ಲೆಯ ಅಣ್ಣಿಗೇರಿ ಸಮೀಪ ಕೆಲ ಘಂಟೆಗಳ ಹಿಂದೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ತೀವ್ರ ಆಘಾತ ಮೂಡಿಸಿದೆ. ಮೃತರನ್ನು ಇನ್ಸ್‌ಪೆಕ್ಟರ್ ಪಂಚಾಕ್ಷರಿ ಹಿರೇಮಠ ಎಂದು ಗುರುತಿಸಲಾಗಿದೆ.

ಮದುವೆ ಮುಗಿಸಿಕೊಂಡು ಹಿಂದಿರುಗಿ ಬರುತ್ತಿರುವಾಗ ಈ ಘಟನೆ ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತದ ತೀವ್ರತೆಗೆ ಇನ್ಸ್‌ಪೆಕ್ಟರ್ ಪಂಚಾಕ್ಷರಿ ಹಿರೇಮಠ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಸೇವೆ ಸಲ್ಲಿಸಿದ್ದ ಹಿರಿಯ ಅಧಿಕಾರಿ

ಮೃತರಾದ ಪಂಚಾಕ್ಷರಿ ಹಿರೇಮಠ ಅವರು ಈ ಹಿಂದೆ ಬೈಲಹೊಂಗಲ, ಗದಗ ಮತ್ತು ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕರ್ತವ್ಯನಿರತ ಅಧಿಕಾರಿಯೊಬ್ಬರು ಅಕಾಲಿಕವಾಗಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಪೊಲೀಸ್ ವಲಯದಲ್ಲಿ ದುಃಖದ ವಾತಾವರಣವನ್ನು ಸೃಷ್ಟಿಸಿದೆ.

ಘಟನೆಯ ಕುರಿತು ಮಾಹಿತಿ ತಿಳಿದ ಕೂಡಲೇ ಅಣ್ಣಿಗೇರಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಅಂಶಗಳ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *