ಹುಬ್ಬಳ್ಳಿಯಲ್ಲಿ ಇಂದು ‘ಮಿಸ್ಟರ್ ಕರ್ನಾಟಕ ಭಜರಂಗಿ-2025’ ರಾಜ್ಯ ಮಟ್ಟದ ದೇಹದಾರ್ಡ್ಯ ಸ್ಪರ್ಧೆ

Spread the love

ಧಾರವಾಡ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ & ಸ್ಪೋರ್ಟ್ಸ್‌ ವತಿಯಿಂದ ಬೃಹತ್ ಆಯೋಜನೆ

ಹುಬ್ಬಳ್ಳಿ: ನವೆಂಬರ್ 23, 2025:

​ದೇಹದಾರ್ಡ್ಯ ಪಟುಗಳಿಗೆ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ, ಧಾರವಾಡ ಜಿಲ್ಲಾ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ & ಸ್ಪೋರ್ಟ್ಸ್ (DDBBA&S) ಹಾಗೂ ಪಂಚಮುಖಿ ಹನುಮಾನ ಕಮಿಟಿ ನವನಗರ ನವನಿರ್ಮಾಣ ಸಂಘ, ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಇಂದು (ನವೆಂಬರ್ 23, 2025) ರಾಜ್ಯ ಮಟ್ಟದ ‘ಮಿಸ್ಟರ್ ಕರ್ನಾಟಕ ಭಜರಂಗಿ-2025’ ದೇಹದಾರ್ಡ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಬೃಹತ್ ಕಾರ್ಯಕ್ರಮವು ಹುಬ್ಬಳ್ಳಿಯ ನವನಗರದ ಭಜರಂಗಿ ಮೈದಾನದಲ್ಲಿ ಸಾಯಂಕಾಲ 5 ಗಂಟೆಗೆ ಪ್ರಾರಂಭವಾಗಲಿದೆ.

​ಈ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ದೇಹದಾರ್ಡ್ಯ ಪಟುಗಳು ಭಾಗವಹಿಸಲು ಮುಕ್ತ ಅವಕಾಶವಿದ್ದು, ತೂಕ ನೀಡುವ (Weight-in) ಸಮಯವು ಮುಂಜಾನೆ 11 ರಿಂದ ಮಧ್ಯಾಹ್ನ 2ರ ವರೆಗೆ ನಿಗದಿಪಡಿಸಲಾಗಿದೆ. ಸ್ಪರ್ಧೆಗಾಗಿ ಒಟ್ಟು ಎಂಟು ವಿಭಾಗಗಳನ್ನು (55 ಕೆ.ಜಿ.ಯಿಂದ 85 ಕೆ.ಜಿ.ವರೆಗೆ) ರೂಪಿಸಲಾಗಿದ್ದು, ಪ್ರತಿ ವಿಭಾಗದ ವಿಜೇತರಿಗೆ ಪ್ರಥಮ ಸ್ಥಾನಕ್ಕೆ ₹5000, ದ್ವಿತೀಯ ಸ್ಥಾನಕ್ಕೆ ₹4000, ತೃತೀಯ ಸ್ಥಾನಕ್ಕೆ ₹3000, ನಾಲ್ಕನೇ ಸ್ಥಾನಕ್ಕೆ ₹2000 ಹಾಗೂ ಐದನೇ ಸ್ಥಾನಕ್ಕೆ ₹1000 ನಗದು ಬಹುಮಾನವನ್ನು ನಿಗದಿಪಡಿಸಲಾಗಿದೆ.

​ಮುಖ್ಯವಾಗಿ, ಒಟ್ಟಾರೆ ವಿಜೇತರಿಗೆ (ಓವರ್‌ಆಲ್ ಚಾಂಪಿಯನ್) ಪ್ರತಿಷ್ಠಿತ ‘ಮಿಸ್ಟರ್ ಕರ್ನಾಟಕ ಭಜರಂಗಿ’ ಬಿರುದಿನೊಂದಿಗೆ ₹25,000 ನಗದು ಬಹುಮಾನ ಘೋಷಿಸಲಾಗಿದೆ. ಇದರ ಜೊತೆಗೆ, ಬೆಸ್ಟ್ ಪೋಸರ್ (Best Poser) ಮತ್ತು ರನ್ನರ್‌ಅಪ್ ವಿಜೇತರಿಗೆ ತಲಾ ₹5000 ಬಹುಮಾನ ಮತ್ತು ಗ್ರೂಪ್ ವಿನ್ನರ್ ವಿಜೇತರಿಗೆ ₹5000 ನಗದು ಬಹುಮಾನಗಳನ್ನು ನೀಡಲಾಗುತ್ತದೆ.

​ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು DDBBA&S ನ ಅಧ್ಯಕ್ಷರು ಮತ್ತು ರಾಷ್ಟ್ರೀಯ ನಿರ್ಣಾಯಕರಾದ ಶರೀಫ್ ಮುಲ್ಲಾ, ಬಾಲರಾಜ ದೊಡ್ಡಮನಿ, ಲೂಕ ಗುಂಡಿಬ, ಮಲ್ಲಯ್ಯಜ್ಜ ಹಿರೇಮಠ, ಸುನೀಲ ರೇವಣಕರ, ಅನೀಲ ಅಂಬೋ, ರಾಜು ಲೋಹಾರ ಮತ್ತು ಮೊಹಮ್ಮದ ಇದ್ರೀಸ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಆಸಕ್ತಿ ಇದ್ದರವರು ಭಾಗವಹಿಸಲು ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *