ಸಂಶಿ ಅರ್ಬನ್ ಕೋ ಆಪರೇಟಿವ್ ಸೊಸೈಟಿಯಿಂದ ಜಿಲ್ಲಾ ಸಹಕಾರಿ ಯೂನಿಯನ್‌ಗೆ ಶಿಕ್ಷಣ ನಿಧಿ ಚೆಕ್ ಹಸ್ತಾಂತರ

Spread the love

ಸಂಶಿ: ರೈತರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಆರ್ಥಿಕವಾಗಿ ಬೆಂಬಲ ನೀಡುತ್ತಿರುವ ಸಂಶಿ ಅರ್ಬನ್ ಕೋ ಆಪರೇಟಿವ್ ಸೊಸೈಟಿಯು ಸಹಕಾರಿ ಶಿಕ್ಷಣ ಕ್ಷೇತ್ರಕ್ಕೂ ನೆರವು ನೀಡಿದೆ. ಜಿಲ್ಲಾ ಸಹಕಾರಿ ಯೂನಿಯನ್‌ಗೆ ಶಿಕ್ಷಣ ನಿಧಿಯಾಗಿ 1,75,180 ರೂಪಾಯಿ ಮೊತ್ತದ ಚೆಕ್ ಹಸ್ತಾಂತರ ಮಾಡುವ ಮೂಲಕ ಸಂಘವು ತನ್ನ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದೆ.

ಸಂಶಿ ಅರ್ಬನ್ ಕೋ ಆಪರೇಟಿವ್ ಸೊಸೈಟಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎ.ಬಿ. ಉಪ್ಪಿನ್ ಅವರು, ಜಿಲ್ಲಾ ಸಹಕಾರಿ ಯೂನಿಯನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ವೈ.ಬಿ. ದಾನಪ್ಪಗೌಡರ ಅವರಿಗೆ ಈ ಚೆಕ್ ಅನ್ನು ಸಲ್ಲಿಸಿದರು.

ನಂತರ ಅವರು ಮಾತನಾಡಿ ಸಂಸ್ಥೆಯು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೆ, ಶಿಕ್ಷಣದ ಮಹತ್ವವನ್ನು ಅರಿತು ಈ ದೇಣಿಗೆ ನೀಡಿದೆ. ಸಮಾಜದ ಪ್ರಗತಿಗೆ ಶಿಕ್ಷಣ ಅತಿ ಅವಶ್ಯಕವಾಗಿದ್ದು, ಈ ನಿಧಿಯು ಸಹಕಾರಿ ಕ್ಷೇತ್ರದಲ್ಲಿನ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳಿಗೆ ದೊಡ್ಡ ಬಲ ನೀಡಲಿದೆ ಎಂದು ತಿಳಿಸಿದರು.

ಸಂಶಿ ಅರ್ಬನ್ ಕೋ ಆಪರೇಟಿವ್ ಸೊಸೈಟಿಯ ಈ ಕಾರ್ಯವನ್ನು ಸಹಕಾರಿ ಯೂನಿಯನ್ ಶ್ಲಾಘಿಸಿದ್ದು, ಇತರ ಸಹಕಾರಿ ಸಂಸ್ಥೆಗಳಿಗೂ ಇದು ಮಾದರಿಯಾಗಿದೆ. ಈ ದೇಣಿಗೆಯು ಸಹಕಾರಿ ಕ್ಷೇತ್ರದ ಉನ್ನತಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ವಿ.ಡಿ. ಅಕ್ಕಿ, ಐ.ಎಂ. ಕೋರಿ, ಎಂ.ಆರ್. ಯಲ್ಲರಡ್ಡಿ, ಮತ್ತು ಮೋಹನ್ ಪಡತೇರ್, ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಫ್. ಹತ್ತಿ, ಜಿಲ್ಲಾ ಸಹಕಾರಿ ಯೂನಿಯನ್‌ನ ಅಧಿಕಾರಿ ವೆಂಕನಗೌಡರ ಪಾಟೀಲ್ ಹಾಗೂ ಸಹಕಾರಿ ವರದಿಗಾರ್ತಿ ಶ್ರೀಮತಿ ಸುಧಾ ಪಾಟೀಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *