
ಕುಂದಗೋಳ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಳಿದ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಸವರಾಜ ರಾಮಣ್ಣ ಬ್ಯಾಹಟ್ಟಿ ಹಾಗೂ ಉಪಾಧ್ಯಕ್ಷರಾಗಿ ಶಿವಶಂಕರ ಬಸವರಾಜ ಪಟ್ಟಣಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಬಿ.ಕೆ. ಗೋಖಲೆ ಅವರು ನೂತನ ಪದಾಧಿಕಾರಿಗಳ ಅವಿರೋಧ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ರಮೇಶ ಇಂಗಳಹಳ್ಳಿ, ಹೊಳಲಪ್ಪ ಭೋವಿ, ಶಿವರಾಜ ಕಟಗಿ, ಸಿದ್ದಪ್ಪ ಅರಳಿಕಟ್ಟಿ, ಶಂಕ್ರಪ್ಪ ಗೌರಿ, ರವಿ ಬಾಳಿಕಾಯಿ, ದಾದಾಪೀರ್ ಕಳ್ಳಿಮನಿ, ಶಾಂತವ್ವ ಸೋಗಿ, ಬಸವರಾಜ ಹರವಿ ಹಾಗೂ ಮೈಲಾರಪ್ಪ ತಳವಾರ ಉಪಸ್ಥಿತರಿದ್ದರು.
ಮುಖಂಡರಾದ ಅಪ್ಪಾಜಿಗೌಡ ಪಾಟೀಲ, ದಾನಪ್ಪ ಗಂಗಾಯಿ, ಬಸವರಾಜ ಕೊಪ್ಪದ, ನಾಗರಾಜ ದೇಶಪಾಂಡೆ, ರಾಮಣ್ಣ ನೆಲಗುಡ್ಡ, ರಾಜು ಶಿವಳ್ಳಿ, ಶ್ರೀಕಾಂತ ಕಲಾಲ, ಬಿ.ಟಿ. ಗಂಗಾಯಿ, ರಾಜಣ್ಣ ಕೊಪ್ಪದ, ಬಸವರಾಜ ಬಾಳಿಕಾಯಿ, ಸಿದ್ದು ಧಾರವಾಡ, ಶೆಟ್ರ ರಮೇಶ ಗದಿಗಿನ ಸೇರಿದಂತೆ ಅನೇಕರು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

