ಗುಡೇನಕಟ್ಟಿ: ಶಾಂತ ಮನಸ್ಸಿನಿಂದ ಸುಖ ಜೀವನ – ಡಾ. ಎ.ಸಿ. ವಾಲಿ ಗುರೂಜಿ

Spread the love

ಕುಂದಗೋಳ: ದೇಹ ಮತ್ತು ಚಿಂತೆ ಮನುಷ್ಯನನ್ನು ಹಾಳು ಮಾಡುತ್ತದೆ. ದೇಹವನ್ನು ದಣಿಸಿದಾಗ ಜೀವನ ಸುಖವಾಗಿ ಇರುತ್ತದೆ ಎಂದು ಬಂಡಿವಾಡ ಗಿರೀಶ ಆಶ್ರಮದ ಎ.ಸಿ. ವಾಲಿ ಗುರೂಜಿ ಹೇಳಿದರು.

ತಾಲೂಕಿನ ಗುಡೇನಕಟ್ಟಿ ಗ್ರಾಮದ ಏಕದಂತ ಯುವಕ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಗಣೇಶ ಪೂಜೆ ಮತ್ತು ನಿರಂತರ ವೀಣೆ ಸಾಧನ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ನೀವೆಲ್ಲರೂ ಸೇರಿ ಇದೇ ರೀತಿ ಕಾರ್ಯಕ್ರಮವನ್ನು ಪ್ರತಿ ವರ್ಷ ಮಾಡುತ್ತಾ ಬಂದರೆ ನಿಮ್ಮ ಊರಿನ ವಿಘ್ನಗಳು ದೂರವಾಗುತ್ತವೆ. ವಿನಾಯಕನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಅವರು ಹಾರೈಸಿದರು.

ಪರಮಪೂಜ್ಯ ಕುಂದಗೋಳ ಕಲ್ಯಾಣಪುರ ಬಸವಣ್ಣನವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಮೂಲಕ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಳಕಳಿಯಿಂದ ನಿರ್ಮಾಣ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು. ಗಣೇಶನ ಒಲುಮೆಗೆ ತಾವು ಪಾತ್ರರಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಚನ್ನವೀರ ಸ್ವಾಮಿ ಹಿರೇಮಠ, ಎನ್.ಕೆ. ಚವಾಣ್, ಹನುಮಂತ ಬೆಳ್ಳಟ್ಟಿ, ಫಕೀರಪ್ಪ ಮೂಲಿಮನಿ, ಬಸವರಾಜ ಯೋಗಪ್ಪನವರ, ಶಿವಲಿಂಗಪ್ಪ ಕಳಸಣ್ಣವರ, ಸಿದ್ದಪ್ಪ ಕಲಿವಾಳ, ನಿಂಗಪ್ಪ ಕಳಸಣ್ಣವರ, ಮಾರುದ್ರಪ್ಪ ಮೂಲಿಮನಿ, ಕಲ್ಲಪ್ಪ ಬೆಡತೂರು, ಕಾರ್ತಿಕ್ ಕಲಿವಾಳ, ಹನುಮಂತ ಸಿದ್ಧುನವರ್ ಉಪಸ್ಥಿತರಿದ್ದರು. ಹನುಮಂತ ಸಿದ್ಧುನವರ್ ಕಾರ್ಯಕ್ರಮ ನಿರೂಪಿಸಿದರು.

ಈ ಸಮಯದಲ್ಲಿ ಅನ್ನಸಂತರ್ಪಣೆ ನಡೆಯಿತು. ಏಕದಂತ ಯುವಕ ಸಂಘದ ಸದಸ್ಯರು, ಗ್ರಾಮದ ಹಿರಿಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *