ಪಾಲಗ್ರಹಾರ ಗಣೇಶೋತ್ಸವದ ಪ್ರಸಾದ ಲಾಡು ₹1.05 ಲಕ್ಷಕ್ಕೆ ಹರಾಜು

Spread the love

 ನಾಗಮಂಗಲ, ಸೆ.28: ತಾಲೂಕಿನ ಪಾಲಗ್ರಹಾರ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ವಿನಾಯಕ ವಿದ್ಯಾ ಗಣಪತಿ ಉತ್ಸವದ ವಿಸರ್ಜನಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಪ್ರಸಾದ ಲಾಡು ಹರಾಜು ಭಕ್ತರ ಗಮನ ಸೆಳೆಯಿತು.

ಗಣೇಶೋತ್ಸವದ ಅಂಗವಾಗಿ ಸಿದ್ಧಪಡಿಸಲಾಗಿದ್ದ ಸುಮಾರು 10 ಕೆ.ಜಿ. ತೂಕದ ಲಾಡು ಪ್ರಸಾದವನ್ನು ಹರಾಜಿಗೆ ಇಡಲಾಗಿತ್ತು. ಈ ಲಾಡು ಪ್ರಸಾದವನ್ನು ₹1,05,400ಕ್ಕೆ ಮಂಜುನಾಥ್ ಗೌಡ ಅವರು ಹರಾಜಿನಲ್ಲಿ ಪಡೆದುಕೊಂಡರು.

ವಿನಾಯಕನಿಗೆ ಸಮರ್ಪಿಸಲಾಗಿದ್ದ ಪ್ರಸಾದವನ್ನು ಪಡೆಯಲು ಭಕ್ತರು ಉತ್ಸಾಹದಿಂದ ಹರಾಜಿನಲ್ಲಿ ಭಾಗವಹಿಸಿದರು. ಹರಾಜಿನಲ್ಲಿ ಲಾಡು ಪ್ರಸಾದ ಪಡೆದ ಮಂಜುನಾಥ್ ಗೌಡ ಅವರನ್ನು ಗಣೇಶೋತ್ಸವ ಸಮಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ನಂತರ ನಡೆದ ಗಣೇಶೋತ್ಸವದ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲಗ್ರಹಾರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಕ್ತಿಭಾವದಿಂದ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಂಡರು.

ಗಣೇಶೋತ್ಸವದ ಅಂಗವಾಗಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತು.

Leave a Reply

Your email address will not be published. Required fields are marked *