ಕುಂದಗೋಳ ಒಳಚರಂಡಿ ಯೋಜನೆಗೆ ₹96.60 ಕೋಟಿ ಅನುದಾನ ಮಂಜೂರಿಗೆ ನಗರಾಭಿವೃದ್ದಿ ಸಚಿವ ಯತ್ರಿಂದ್ರ ಸಿದ್ದರಾಮಯ್ಯನವರಿಗೆ ಮನವಿ

Spread the love

ಕುಂದಗೋಳ: ಕುಂದಗೋಳ ಪಟ್ಟಣದ ಬಹುನಿರೀಕ್ಷಿತ ಒಳಚರಂಡಿ ಯೋಜನೆಗೆ ₹96.60 ಕೋಟಿ (₹9,660 ಲಕ್ಷ) ಅನುದಾನ ಮಂಜೂರು ಮಾಡುವಂತೆ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖಪ್ಪ ಎಸ್. ಶಿವಳ್ಳಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಕುಂದಗೋಳ ಪಟ್ಟಣದ ಒಳಚರಂಡಿ ಯೋಜನೆಯ ಕಡತವನ್ನು ಮಾಜಿ ಸಚಿವ ದಿ. ಸಿ. ಎಸ್. ಶಿವಳ್ಳಿ ಅವರ ವಿಶೇಷ ಪರಿಶ್ರಮದಿಂದ ಸರ್ಕಾರದ ಸಚಿವಾಲಯದಲ್ಲಿ ಅಂತಿಮ ಹಂತದವರೆಗೆ ತಲುಪಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಿಯೋಗ, ಕಾಮಗಾರಿಗೆ ₹96.60 ಕೋಟಿ ಅನುದಾನ ಮಂಜೂರು ಮಾಡಿ ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಿತು.

ಮನವಿ ಸ್ವೀಕರಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಜೀಜ್ ಕ್ಯಾಲಕೋಂಡ, ಮಲ್ಲಿಕಾರ್ಜುನ ಕಿರೇಸೂರ, ಮಾಜಿ ಸದಸ್ಯ ಮಲೀಕ ಶಿರೂರ, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಸಲೀಮ ಕ್ಯಾಲಕೋಂಡ, ಹಿರಿಯರಾದ ಎ.ಟಿ. ಹುಬ್ಬಳ್ಳಿ, ಖಯುಂ ನಾಲಬಂದ, ನಾಶೀರ ಬಾಣಿ, ಸಲೀಮ ಕಡ್ಲಿ, ಜಾಫರ ಕ್ಯಾಲಕೋಂಡ, ಯುಸುಪ್ ಚಡ್ಡಿ, ಶೇಖಣ್ಣ ವಟವಟಿ, ಲೋಕೇಶ ಬೇವಿನಮರದ, ಅಯ್ಯುಬ ಕಲೇಗಾರ, ಮೌಲಾಸಾಬ ಕಳ್ಳಿಮನಿ, ಹಟೇಲಸಾಬ ಮಿಶ್ರಿಕೋಟಿ, ಅಕ್ಬರ ಗೂಡವಾಲಾ, ಇರ್ಪಾನ ಮುಲ್ಲಾ, ಮೈನುದ್ದಿನ ಮಿಶ್ರಿಕೋಟಿ, ಪಾರುಖ ಮುಲ್ಲಾ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು, ಮುಖಂಡರು, ಪಟ್ಟಣದ ಗುರು-ಹಿರಿಯರು, ಅಧಿಕಾರಿಗಳು, ಯುವಕರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *