ಶನಿವಾರ, 28 Nov 2026 | ಕರ್ನಾಟಕ & ರಾಷ್ಟ್ರೀಯ ಸುದ್ದಿ ಪೋರ್ಟಲ್
ಆ್ಯಪ್ ಡೌನ್‌ಲೋಡ್ | ಸುದ್ದಿ ಕಳುಹಿಸಿ | ಸಂಪರ್ಕಿಸಿ |
|
ಶನಿವಾರ, 28 Nov 2026 ವಿಶ್ವಾಸಾರ್ಹ ಕನ್ನಡ & ರಾಷ್ಟ್ರೀಯ ಸುದ್ದಿ ಜಾಲ
Mangalore

ತಲಪಾಡಿಯಲ್ಲಿ ಭೀಕರ ಅಪಘಾತ ಆಟೋ-ಬಸ್ ಡಿಕ್ಕಿ: ನಾಲ್ವರು ಮಹಿಳೆಯರು, ಮಗು ಸೇರಿ ಆರು ಜನ ಸ್ಥಳದಲ್ಲೇ ದುರ್ಮರಣಆಟೋ ಚಾಲಕನ ಸ್ಥಿತಿ ಚಿಂತಾಜನಕ

30-ಸೆಕೆಂಡ್ ಮುಖ್ಯಾಂಶಗಳು (30-Sec AI Summary)
  • ಪ್ರಮುಖ ಬೆಳವಣಿಗೆ: ತಲಪಾಡಿಯಲ್ಲಿ ಭೀಕರ ಅಪಘಾತ ಆಟೋ-ಬಸ್ ಡಿಕ್ಕಿ: ನಾಲ್ವರು ಮಹಿಳೆಯರು, ಮಗು ಸೇರಿ ಆರು ಜನ ಸ್ಥಳದಲ್ಲೇ ದುರ್ಮರಣಆಟೋ ಚಾಲಕನ ಸ್ಥಿತಿ ಚಿಂತಾಜನಕ
  • ಮಂಗಳೂರು, ಆ.28 – ಮಂಗಳೂರಿನ ಉಳ್ಳಾಲ ಸಮೀಪದ ತಲಪಾಡಿ ಟೋಲ್ ಗೇಟ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿ ಆರುಬಜನ ಮೃತಪಟ್ಟಿರುವ ದುಃಖದ ಸುದ್ದಿ ವರದಿಯಾಗಿದೆ.…
  • ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮತ್ತು ಸ್ಥಳೀಯ ಮೂಲಗಳಿಂದ ಸಮಗ್ರ ವರದಿ ಪರಿಶೀಲನೆ.
ಸುದ್ದಿ ಆಲಿಸಿ • ಸಿದ್ಧವಾಗಿದೆ (Ready)
AI ಆಡಿಯೋ ನ್ಯೂಸ್‌ರೂಮ್ • ಕನ್ನಡ & English
ವೇಗ:

ಮಂಗಳೂರು, ಆ.28 – ಮಂಗಳೂರಿನ ಉಳ್ಳಾಲ ಸಮೀಪದ ತಲಪಾಡಿ ಟೋಲ್ ಗೇಟ್ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿ ಆರುಬಜನ ಮೃತಪಟ್ಟಿರುವ ದುಃಖದ ಸುದ್ದಿ ವರದಿಯಾಗಿದೆ.

ಮಧ್ಯಾಹ್ನದ ವೇಳೆ ಕೆಸಿ ರೋಡ್ ದಿಕ್ಕಿನಿಂದ ತೆರಳುತ್ತಿದ್ದ ಆಟೋ ರಿಕ್ಷಾ ಮತ್ತು ಬಸ್ ನಡುವೆ ಸಂಭವಿಸಿದ ಡಿಕ್ಕಿಯಿಂದಾಗಿ ರಿಕ್ಷಾ ಸಂಪೂರ್ಣ ಚೂರುಚೂರುಗೊಂಡಿದ್ದು, ಒಳಗಿದ್ದವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿದೆ.

ಮೃತರಲ್ಲಿ ನಾಲ್ವರು ಮಹಿಳೆಯರು ಹಾಗೂ ಒಂದು ಮಗು ಸೇರಿ ಒಟ್ಟು 06, ಜನ, ಇವರು ಎಲ್ಲಾ ಕೆಸಿ ರೋಡ್ ಮೂಲದವರಾಗಿರಬಹುದು ಎಂಬ ಮಾಹಿತಿ ಲಭಿಸಿದೆ. ಗಂಭೀರ ಗಾಯಗೊಂಡಿರುವ ಆಟೋ ಚಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಅವನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯ ತೀವ್ರತೆ ಖಂಡಿಸಿ ಸ್ಥಳೀಯರು ಮೌನ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ADVERTISEMENT