ಇನಾಮವೀರಾಪುರ ಮರ್ಯಾದೆ ಹತ್ಯೆ: ನವಲಗುಂದದಲ್ಲಿ ದಲಿತ ಒಕ್ಕೂಟಗಳಿಂದ ಬೃಹತ್ ಪ್ರತಿಭಟನೆ

ನವಲಗುಂದ: ಹುಬ್ಬಳ್ಳಿ ತಾಲೂಕಿನ ಇನಾಮವೀರಾಪುರ ಗ್ರಾಮದಲ್ಲಿ ನಡೆದ ಗರ್ಭಿಣಿ ಮಹಿಳೆಯ ಬರ್ಬರ ಮರ್ಯಾದೆ ಹತ್ಯೆ ಪ್ರಕರಣವನ್ನು ಖಂಡಿಸಿ ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ, ನವಲಗುಂದ ತಾಲೂಕು ದಲಿತ ಒಕ್ಕೂಟಗಳ ಸಮಿತಿ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ​ನಗರದ ಗಣಪತಿ ದೇವಸ್ಥಾನದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಜಾತಿ ವ್ಯವಸ್ಥೆ ಮತ್ತು ಮರ್ಯಾದೆ ಹತ್ಯೆಯಂತಹ ಅನಿಷ್ಟ ಪದ್ಧತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಸೀಲ್ದಾರ್ ಸುಧೀರ್ ಸಾವುಕಾರ ಅವರ ಮೂಲಕ…

Read More

ಪಶುಪತಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಸುಧಾ ಡೊಳ್ಳಿನ ಅವಿರೋಧ ಆಯ್ಕೆ

ಕುಂದಗೋಳ: ತಾಲ್ಲೂಕಿನ ಪಶುಪತಿಹಾಳ ಗ್ರಾಮ ಪಂಚಾಯತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರದಂದು ನಡೆದ ಚುನಾವಣೆಯಲ್ಲಿ ಸುಧಾ ವಿ. ಡೊಳ್ಳಿನ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 9 ಸದಸ್ಯ ಬಲ ಹೊಂದಿರುವ ಈ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಸುಧಾ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಬೇರೆ ಯಾರೂ ಸ್ಪರ್ಧಿಸದ ಕಾರಣ, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಐ.ಎ.ಎಸ್ ಪ್ರೊಬೇಷನರಿ ಅಧಿಕಾರಿ ಹಾಗೂ ತಾ ಪಂ ಇಒ ಆದ ಕುಮಾರಿ ರೀತಿಕಾ ವರ್ಮಾ ಅಧಿಕೃತವಾಗಿ…

Read More

ಮರೇವಾಡ ಹಾಗೂ ದೇವಲಿಂಗಿಕೊಪ್ಪ ‘ಗ್ರಾಮ-ಒನ್’ ಕೇಂದ್ರಗಳಿಗೆ ಫ್ರಾಂಚೈಸಿಗಳ ನೇಮಕ: ಅರ್ಜಿ ಆಹ್ವಾನ

​ಧಾರವಾಡ: ಜಿಲ್ಲೆಯ ಮರೇವಾಡ ಹಾಗೂ ದೇವಲಿಂಗಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖಾಲಿ ಇರುವ ‘ಗ್ರಾಮ-ಒನ್’ ಕೇಂದ್ರಗಳಿಗೆ ಹೊಸದಾಗಿ ಫ್ರಾಂಚೈಸಿಗಳನ್ನು ನೇಮಕ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ​ಧಾರವಾಡ ತಾಲ್ಲೂಕಿನ ಮರೇವಾಡ ಹಾಗೂ ಕಲಘಟಗಿ ತಾಲ್ಲೂಕಿನ ದೇವಲಿಂಗಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ-ಒನ್ ಕೇಂದ್ರಗಳ ಫ್ರಾಂಚೈಸಿಗಳು ರಾಜೀನಾಮೆ ನೀಡಿದ ಹಾಗೂ ತಾಂತ್ರಿಕ ಕಾರಣಗಳಿಂದ ಕೇಂದ್ರಗಳನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇ-ಆಡಳಿತ ಇಲಾಖೆಯ ಇ.ಡಿ.ಸಿ.ಎಸ್. ನಿರ್ದೇಶನಾಲಯದ ಮಾರ್ಗಸೂಚಿಯಂತೆ ಆನ್‌ಲೈನ್ ಮೂಲಕ ಅರ್ಜಿಗಳನ್ನು…

Read More

ಅಬಕಾರಿ ಸನ್ನದುಗಳ ಇ-ಹರಾಜು: ಬಿಡ್ಡುದಾರರಿಗೆ ಜನೆವರಿ 5 ರಂದು ತರಬೇತಿ ಕಾರ್ಯಾಗಾರ

​ಧಾರವಾಡ: ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ ಹಾಗೂ ಮಂಜೂರಾಗದೇ ಬಾಕಿ ಉಳಿದಿರುವ ಸನ್ನದುಗಳನ್ನು ಇ-ಹರಾಜು ಮಾಡುವ ಪ್ರಕ್ರಿಯೆ ಆರಂಭವಾಗಿದ್ದು, ಈ ಕುರಿತು ಬಿಡ್ಡುದಾರರಿಗೆ ಜನೆವರಿ 5 ರಂದು ವಿಶೇಷ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ​ಭಾರತ ಸರ್ಕಾರದ ಸ್ವಾಮ್ಯದ ಎಮ್‍ಎಸ್‍ಟಿಸಿ ಲಿಮಿಟೆಡ್‍ನ ಇ-ಪೋರ್ಟಲ್ (https://www.mstcecommerce.com) ಮೂಲಕ ಈ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜು ಮತ್ತು ಅಂಗೀಕಾರ ಪತ್ರ (ಎಲ್‌ಓಎ) ನೀಡುವ ವರ್ಷವನ್ನೂ ಒಳಗೊಂಡಂತೆ ಒಟ್ಟು ಐದು ಅಬಕಾರಿ ವರ್ಷಗಳ ಅವಧಿಗೆ ಈ ಸನ್ನದುಗಳು ಅನ್ವಯಿಸಲಿವೆ. ರಾಜ್ಯದಾದ್ಯಂತ ಒಟ್ಟು 569…

Read More

ನವಲಗುಂದದಲ್ಲಿ ಇಂದಿನಿಂದ ಎರಡು ದಿನ ಹುರಕಡ್ಲಿ ಅಜ್ಜನವರ ರಥೋತ್ಸವ

ನವಲಗುಂದ: ಪಟ್ಟಣದಲ್ಲಿ ಪರಮಪೂಜ್ಯ ಶ್ರೀ ಹುರಕಡ್ಲಿ ಅಜ್ಜನವರ ರಥೋತ್ಸವ ಪೂಜೆ ಹಾಗೂ 36ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ಇಂದು ಮತ್ತು ನಾಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ. ಇಂದು ಮಧ್ಯಾಹ್ನ ವೇಳೆಗೆ ಶ್ರೀ ಹುರಕಡ್ಲಿ ಅಜ್ಜನವರ ರಥೋತ್ಸವ ಪೂಜೆ ನೆರವೇರಲಿದ್ದು, ಗದಗ ತಾಲೂಕಿನ ಹರ್ಲಾಪುರ ಗ್ರಾಮದ ಡಾ. ಕೊಟ್ಟೂರೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ರಥೋತ್ಸವಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಸಂಜೆ 6 ಗಂಟೆಗೆ ಶ್ರೀ ಬೂದೇಶ್ವರ ಕೋಲಾಟ…

Read More

ನ್ಯಾಯವೇ ಸಮಾಜದ ಆಧಾರ; ಕರ್ತವ್ಯದ ಅರಿವು ಮೂಡಲಿ: ಈಶಪ್ಪ ಭೂತೆ

ಧಾರವಾಡ: “ಕಾನೂನು ಎನ್ನುವುದು ಕೇವಲ ನ್ಯಾಯ ಪಡೆಯುವ ಮಾರ್ಗವಲ್ಲ, ನ್ಯಾಯಾಲಯಗಳ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದೇ ನಿಜವಾದ ನ್ಯಾಯ,” ಎಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಅವರು ಅಭಿಪ್ರಾಯಪಟ್ಟರು. ನಗರದ ಪ್ರತಿಷ್ಠಿತ ಕರ್ನಾಟಕ ವಿದ್ಯಾವರ್ಧಕ ಸಂಘದ ‘ಕಾನೂನು ಮತ್ತು ನ್ಯಾಯ ಮಂಟಪ’ ಆಯೋಜಿಸಿದ್ದ ಪ್ರಸಕ್ತ ತ್ರೈವಾರ್ಷಿಕ ಅವಧಿಯ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ನ್ಯಾಯವೇ ಸಮಾಜದ ಭದ್ರಬುನಾದಿಯಾಗಿದ್ದು, ಕಾನೂನಿನ ವಿಸ್ತೃತ ಫಲಿತಾಂಶಗಳು ನಮಗೆ ಸದಾ ದಾರಿದೀಪವಾಗಿರುತ್ತವೆ ಎಂದರು. ಕಾರ್ಯಕ್ರಮದಲ್ಲಿ…

Read More

ರಾಷ್ಟ್ರಮಟ್ಟದ ಬಾಲಕರ ಶೂಟಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಗೆಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳು ಆಯ್ಕೆ

ಧಾರವಾಡ, ಜ. 01:ಧಾರವಾಡದ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ 69ನೇ ರಾಷ್ಟ್ರಮಟ್ಟದ 14 ವರ್ಷದೊಳಗಿನ ಬಾಲಕರ ಶೂಟಿಂಗ್ ಚಾಂಪಿಯನ್‌ಶಿಪ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಈ ಪಂದ್ಯಾವಳಿ ಜನೆವರಿ 5, 2026 ರಿಂದ ಜನೆವರಿ 9, 2026 ರವರೆಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆಯಲಿದೆ. ಆಯ್ಕೆಯಾದ ವಿದ್ಯಾರ್ಥಿಗಳಾದ ನವೀನಕುಮಾರ ಚವಾಣ, ಪ್ರಸನ್ನ ಯಾದವ, ಮೊಹಮ್ಮದ್ ಹ್ಯಾರಿಸ್ ಮದರಖಂಡಿ ಹಾಗೂ ವಿವೇಕ ಬೋರಳಕರ ಅವರನ್ನು…

Read More

ಮಾವು ಬೆಳೆಗಾರರು ಕೈಗೊಳ್ಳಬೇಕಾಗಿರುವ ಸಸ್ಯ ಸಂರಕ್ಷಣಾ ಮತ್ತು ಪೂರಕ ಕ್ರಮಗಳು

ಧಾರವಾಡ, ಜ. 01: ಮಾವಿನಲ್ಲಿ ಹೂ ಬಿಡುವ ಪ್ರಕ್ರಿಯೆ ಡಿಸೆಂಬರ್‌ನಿಂದ ಪ್ರಾರಂಭವಾಗಿ ಫೆಬ್ರುವರಿ ಅಂತ್ಯದವರೆಗೂ ವಿವಿಧ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ನವೆಂಬರ್ ಮಧ್ಯಭಾಗದಿಂದಲೂ ಹೂ ಬಿಡುವುದು ಕಂಡುಬರುತ್ತದೆ. ಹೂ ಬಿಟ್ಟ ನಂತರ ಉಪದ್ರವಿ ಕೀಟಗಳಾದ ಜಿಗಿಹುಳು, ಹೂತೆನೆ, ಕುಡಿ ಕೊರಕ, ಥ್ರಿಪ್ಸ್, ನುಸಿ, ಹಿಟ್ಟು ತಿಗಣೆ, ಒಟೆ ಕೊರಕ ಹಾಗೂ ಹೂತೆನೆ ಕಪ್ಪಾಗುವ ರೋಗ, ಬೂದಿ ರೋಗ, ಕಾಡಿಗೆ ರೋಗ, ಎಲೆಚಿಬ್ಬು ರೋಗಗಳು ಹೆಚ್ಚಿನ ಹಾನಿಯನ್ನುಂಟು ಮಾಡುತ್ತವೆ. ಅಗತ್ಯ ಪೂರಕ ಕ್ರಮಗಳು:ಸಿಂಪರಣಾ ದ್ರಾವಣಗಳನ್ನು ಮಾವಿನ ಮರದ ಕಾಂಡ…

Read More

ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರಅಂತಿಮ ಮತದಾರರ ಪಟ್ಟಿ ಪ್ರಕಟಣೆ

ಧಾರವಾಡ, ಜ. 01: ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ನವೆಂಬರ್ 01, 2025 ಕ್ಕೆ ಅನ್ವಯವಾಗುವಂತೆ ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಮತಕ್ಷೇತ್ರದ ಮತದಾರರ ಪಟ್ಟಿಯನ್ನು ಪ್ರಕಟಿಸಲು ನಿರ್ದೇಶನ ನೀಡಲಾಗಿತ್ತು. ಅದರಂತೆ ನವೆಂಬರ್ 25, 2025 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ನವೆಂಬರ್ 25, 2025 ರಿಂದ ಡಿಸೆಂಬರ್ 10, 2025 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ಸ್ವೀಕರಿಸಲಾದ ಅರ್ಜಿಗಳ ಪರಿಶೀಲನೆಯ ನಂತರ ಪಶ್ಚಿಮ ಪದವೀಧರರ ಮತಕ್ಷೇತ್ರದ…

Read More

ವಿದ್ಯಾರ್ಥಿಗಳ ನೈತಿಕ ಬದುಕಿಗೆ ಮೌಲ್ಯಗಳೇ ಚೌಕಟ್ಟು – ಡಾ. ಎಂ.ವೈ. ಸಾವಂತ

ಧಾರವಾಡ: ವಿದ್ಯಾರ್ಥಿಗಳ ನೈತಿಕ ಜೀವನಕ್ಕೆ ಮೌಲ್ಯಗಳೇ ದೃಢವಾದ ಚೌಕಟ್ಟು. ಮೌಲ್ಯಗಳು ವಿದ್ಯಾರ್ಥಿಗಳ ಅಂತರಂಗದ ಜೀವನದಲ್ಲಿ ಹುದುಗಿರುವ ಅಮೂಲ್ಯ ಸಂಪತ್ತಾಗಿವೆ ಎಂದು ಶಿಕ್ಷಣ ತಜ್ಞ ಡಾ. ಎಂ.ವೈ. ಸಾವಂತ ಅವರು ಅಭಿಪ್ರಾಯಪಟ್ಟರು. ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶತಾಯುಷಿ ಲಿ.ಜಿ.ಜಿ. ದೊಡವಾಡ ಅವರ ತಂದೆ ಪೂಜ್ಯ ಶರಣ ಲಿಂ. ಗುರುಪಾದ ದುಂಡಪ್ಪ ದೊಡವಾಡ ದತ್ತಿ ಕಾರ್ಯಕ್ರಮದಲ್ಲಿ ಅವರು ‘ಮೌಲ್ಯಯುತ ಶಿಕ್ಷಣ – ಇಂದಿನ ಅಗತ್ಯತೆ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಮೌಲ್ಯ ಶಿಕ್ಷಣವು ಕುಟುಂಬದಲ್ಲೇ, ಮಕ್ಕಳ ಬಾಲ್ಯಾವಸ್ಥೆಯಲ್ಲಿಯೇ…

Read More