ನವಲಗುಂದ: ಪಟ್ಟಣದ ಅಂದ ಹೆಚ್ಚಿಸಲು ಸ್ವಚ್ಛತೆ ಅವಶ್ಯ; ಶಾಸಕ ಎನ್. ಎಚ್. ಕೋನರಡ್ಡಿ ಕರೆ
ನವಲಗುಂದ: ಪಟ್ಟಣದ ಸ್ವಚ್ಛತೆ ಎಂಬುದು ಕೇವಲ ಪುರಸಭೆಯ ಕೆಲಸವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಪಟ್ಟಣದ ಅಂದವನ್ನು ಹೆಚ್ಚಿಸುವಲ್ಲಿ ಸ್ವಚ್ಛತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಎನ್. ಎಚ್. ಕೋನರಡ್ಡಿ ಅವರು ಹೇಳಿದರು. ಸೋಮವಾರ ಪಟ್ಟಣದ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ‘ನಮ್ಮ ನಡೆ-ಸ್ವಚ್ಛತೆ ಕಡೆ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನರು ತಮ್ಮ ಮನೆಯನ್ನು ಹೇಗೆ ಶುಚಿಯಾಗಿಟ್ಟುಕೊಳ್ಳುತ್ತಾರೋ ಹಾಗೆಯೇ ತಮ್ಮ ಓಣಿಗಳನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಬೇಕು. ಈ ನಿಟ್ಟಿನಲ್ಲಿ ಪುರಸಭೆಯು ವಾರಕ್ಕೊಮ್ಮೆ ಒಂದೊಂದು ಓಣಿಯನ್ನು ಪೂರ್ಣವಾಗಿ…

