ಚಿಕ್ಕಹರಕುಣಿ ಬಸ್ಸ ಹಾಗೂ ಬೈಕ್ ನಡುವೆ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವು

ಕುಂದಗೋಳ: ತಾಲ್ಲೂಕಿನ ಕಮಡೊಳ್ಳಿ ಮತ್ತು ಚಿಕ್ಕಹರಕುಣಿ ಗ್ರಾಮಗಳ ಮಧ್ಯೆ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಜಗದೀಶ್ ತಳವಾರ್ (47) ಮೃತಪಟ್ಟಿದ್ದಾರೆ. ಶುಕ್ರವಾರದಂದು ಕಮಡೊಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಜಗದೀಶ್ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಸ್ಥಳೀಯರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ…

Read More

ಮಾರ್ಚ್ 14 ರಂದು ಜಿಲ್ಲೆಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್ ಆಯೋಜನೆ

​ಧಾರವಾಡ: ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಧಾರವಾಡ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಮಾರ್ಚ್ 14, 2026 ರಂದು ‘ರಾಷ್ಟ್ರೀಯ ಲೋಕ ಅದಾಲತ್’ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ಪಿ.ಎಫ್. ದೊಡ್ಡಮನಿ ಅವರು ತಿಳಿಸಿದ್ದಾರೆ. ​ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನಿರ್ದೇಶನದಂತೆ ಈ ಅದಾಲತ್ ನಡೆಯಲಿದೆ. ವಿವಿಧ…

Read More

​ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

​ಧಾರವಾಡ: ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಆರು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ 2026-27ನೇ ಸಾಲಿನ 6ನೇ ತರಗತಿ (ಆಂಗ್ಲ ಮಾಧ್ಯಮ) ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ​ಅರ್ಹತೆ ಮತ್ತು ಮೀಸಲಾತಿ: 5ನೇ ತರಗತಿ ಉತ್ತೀರ್ಣರಾದ ಹಾಗೂ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರುವ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರಾಗಿದ್ದಾರೆ. ಒಟ್ಟು ಸೀಟುಗಳಲ್ಲಿ ಶೇ. 75 ರಷ್ಟನ್ನು ಅಲ್ಪಸಂಖ್ಯಾತ ಸಮುದಾಯದ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ)…

Read More

ಪತ್ರಕರ್ತರು ಸಾಮಾಜಿಕ ಕಾಳಜಿಯೊಂದಿಗೆ ಜವಾಬ್ದಾರಿ ನಿಭಾಯಿಸಲಿ: ಜಿ.‌ಕಾ.ಪ ಸಂ, ಅಧ್ಯಕ್ಷರಾದ ಬಂಡು ಕುಲಕರ್ಣಿ ಕರೆ

ನವಲಗುಂದ: ಪತ್ರಕರ್ತರು ಕೇವಲ ಸುದ್ದಿಗಾರರಾಗದೆ ಸಾಮಾಜಿಕ ಕಾಳಜಿಯೊಂದಿಗೆ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವುದು ಇಂದಿನ ಅಗತ್ಯವಾಗಿದೆ ಎಂದು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಹೇಳಿದರು. ​ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಪತ್ರಕರ್ತ ವೃತ್ತಿಗೆ ತನ್ನದೇ ಆದ ಗೌರವದ ಸ್ಥಾನವಿದೆ. ವರದಿಗಾರರು ಯಾವುದೇ ಆಮಿಷಗಳಿಗೆ ಬಲಿಯಾಗದೆ, ನಿಷ್ಠುರತೆಯಿಂದ ಸತ್ಯದ ಪರವಾಗಿ ವರದಿ…

Read More

ಪತ್ರಕರ್ತರು ಸಾಮಾಜಿಕ ಕಾಳಜಿಯೊಂದಿಗೆ ಜವಾಬ್ದಾರಿ ನಿಭಾಯಿಸಲಿ: ಜಿ.‌ಕಾ.ಪ ಸಂ, ಅಧ್ಯಕ್ಷರಾದ ಬಂಡು ಕುಲಕರ್ಣಿಯವರಿಂದ ಕರೆ

ನವಲಗುಂದ: ಪತ್ರಕರ್ತರು ಕೇವಲ ಸುದ್ದಿಗಾರರಾಗದೆ ಸಾಮಾಜಿಕ ಕಾಳಜಿಯೊಂದಿಗೆ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುವುದು ಇಂದಿನ ಅಗತ್ಯವಾಗಿದೆ ಎಂದು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಂಡು ಕುಲಕರ್ಣಿ ಹೇಳಿದರು. ​ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಪತ್ರಕರ್ತ ವೃತ್ತಿಗೆ ತನ್ನದೇ ಆದ ಗೌರವದ ಸ್ಥಾನವಿದೆ. ವರದಿಗಾರರು ಯಾವುದೇ ಆಮಿಷಗಳಿಗೆ ಬಲಿಯಾಗದೆ, ನಿಷ್ಠುರತೆಯಿಂದ ಸತ್ಯದ ಪರವಾಗಿ ವರದಿ…

Read More

ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ ಬಸ್ ಸಂಪರ್ಕ ಕಲ್ಪಿಸಿ: ಸಾರಿಗೆ ಎಂ.ಡಿ.ಗೆ ಕುಂದಗೋಳ ಭಾಗದ ಭಕ್ತರ ಆಗ್ರಹ

ಹುಬ್ಬಳ್ಳಿ: ಕುಂದಗೋಳ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಸಾವಿರಾರು ಭಕ್ತರ ಬಹುದಿನಗಳ ಬೇಡಿಕೆಯಾದ ಶ್ರೀ ಕ್ಷೇತ್ರ ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ ಪ್ರತಿದಿನ ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ, ಈ ಭಾಗದ ರೈತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಹುಬ್ಬಳ್ಳಿಯ ಕೆ.ಎಸ್.ಆರ್.ಟಿ.ಸಿ. ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕಿ (ಎಂ.ಡಿ.) ಎಂ. ಪ್ರಿಯಾಂಕಾ ಅವರಿಗೆ ಮನವಿ ಸಲ್ಲಿಸಿದರು. ​ಬೇಡಿಕೆಗಳಿಗೆ ಸ್ಪಂದಿಸದ ವ್ಯವಸ್ಥೆ: ಭಕ್ತರ ಆಕ್ರೋಶ ​ಮನವಿ ಸಲ್ಲಿಸಿ ಮಾತನಾಡಿದ ಪ್ರಿಯಾಂಕಾ ಯೋಗಪ್ಪನವರ, “ಈ ಭಾಗದ ಭಕ್ತಾದಿಗಳ ಹಿತದೃಷ್ಟಿಯಿಂದ ಲಕ್ಷ್ಮೇಶ್ವರ ಬಸ್ ಘಟಕದಿಂದ ಪ್ರತಿದಿನ…

Read More

ಭ್ರಷ್ಟ ವ್ಯವಸ್ಥೆಯ ವಿರುದ್ಧ ಕುಬಿಹಾಳ ಗ್ರಾ ಪಂ ಎದುರಿಗೆ ಇಂದು ಮರಣ ಮೃದಂಗದ ಸಂಶಯ: ಇಚ್ಛಾ ಮರಣಕ್ಕೆ ಮುಂದಾದ ಯುವಕ!

ಕುಂದಗೋಳ: ನಾಡಿನಲ್ಲಿ ಭ್ರಷ್ಟಾಚಾರದ ಹಾವಳಿ ಎಷ್ಟರಮಟ್ಟಿಗೆ ಮಿತಿಮೀರಿದೆ ಎಂದರೆ, ಸಾಮಾನ್ಯ ಪ್ರಜೆಯೊಬ್ಬ ಭ್ರಷ್ಟರ ಕೂಪದಲ್ಲಿ ಬದುಕಲಾರದೆ ಸಾವನ್ನೇ ಅಪ್ಪಿಕೊಳ್ಳಲು ನಿರ್ಧರಿಸುವಂತಹ ಭೀಕರ ಪರಿಸ್ಥಿತಿ ಇಂದು ಎದುರಾಗಿದೆ. ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಯುವಕ ನಾಗರಾಜ್ ಗುರುಸಿದ್ದಪ್ಪ ಹುಬ್ಬಳ್ಳಿ ಎಂಬುವವರು ವ್ಯವಸ್ಥೆಯ ಭ್ರಷ್ಟಾಚಾರಕ್ಕೆ ಬೇಸತ್ತು ಇಂದು (ಜ. 9) ಕುಬಿಹಾಳ ಗ್ರಾಮ ಪಂಚಾಯಿತಿ ಮುಂದೆ ‘ಇಚ್ಛಾ ಮರಣ’ಕ್ಕೆ ಮುಂದಾಗುವ ಮೂಲಕ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದಾರೆ. ​ಸಾಮಾನ್ಯವಾಗಿ ಭ್ರಷ್ಟಾಚಾರ ಕಂಡಾಗ ಜನರು ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಶ್ನಿಸುವುದು, ಲೋಕಾಯುಕ್ತಕ್ಕೆ ದೂರು…

Read More

ನವಲಗುಂದ: ಸಂಸದರ ಕ್ರೀಡಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ; ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ಸಚಿವ ಪ್ರಲ್ಹಾದ ಜೋಶಿ

ನವಲಗುಂದ: ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಹಮ್ಮಿಕೊಂಡಿರುವ ‘ಸಂಸದರ ಕ್ರೀಡಾ ಮಹೋತ್ಸವ’ಕ್ಕೆ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ. ಸಿ. ಪಾಟೀಲ ಅವರು, ಗ್ರಾಮೀಣ ಕ್ರೀಡಾಪಟುಗಳು ಈ ಸದವಕಾಶವನ್ನು ಬಳಸಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಶುಭ ಹಾರೈಸಿದರು. ​ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ…

Read More

ಕುಂದಗೋಳ ರೈತರ ವಿವಿಧ ಬೇಡಿಕೆಗಳಿಗೆ ಆಗ್ರಹ: ತಹಶೀಲ್ದಾರ್‌ಗೆ ರೈತ ಸಂಘದಿಂದ ಮನವಿ

ಕುಂದಗೋಳ: ತಾಲೂಕಿನ ರೈತರು ಎದುರಿಸುತ್ತಿರುವ ಮೆಕ್ಕೆಜೋಳ ಹಾಗೂ ಕಡಲೆ ಖರೀದಿ ಕೇಂದ್ರದ ಸಮಸ್ಯೆ ಸೇರಿದಂತೆ ವಿವಿಧ ಮೂಲಭೂತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ರಾಜು ಮಾವರಕರ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಗುರುಪಾದಪ್ಪ ಬಸಪ್ಪ ಬಂಕದ ಅವರ ನೇತೃತ್ವದಲ್ಲಿ ನಡೆದ ಈ ನಿಯೋಗವು, ರೈತರ ಜ್ವಲಂತ ಸಮಸ್ಯೆಗಳ ಕುರಿತು ತಹಶೀಲ್ದಾರ್ ಅವರ ಗಮನ ಸೆಳೆಯಿತು. ‘ನಮ್ಮ ಹೊಲ ನಮ್ಮ ದಾರಿ’…

Read More

ಗುಡಗೇರಿ ನಾಗರಾಜ ನಾ ಕುಲಕರ್ಣಿ ಆಶರ್ದ ಹಿ ಪ್ರಾ ಶಾಲಾ ಮುಂಬಾದಲ್ಲಿ ಸಂಭ್ರಮದ ‘ಮಕ್ಕಳ ಸಂತೆ’: ಪುಟ್ಟ ಕೈಗಳ ನಡುವೆ ಗರಿಗೆದರಿದ ವ್ಯಾಪಾರ ವಹಿವಾಟು

ಕುಂದಗೋಳ: “ಸರ್ ಈ ವರ್ಷದ ಕ್ಯಾಲೆಂಡರ್ ತೊಗೋಳಿ ಹತ್ತು ರೂಪಾಯಿ”, “ಬನ್ನಿ ಬನ್ನಿ ಬಿಸಿ ಬಿಸಿ ಮಿರ್ಚಿ ರುಚಿ ನೋಡಿ”, “ಎರಡು ಸೋಪು ತೊಗೊಂಡ್ರೆ ಒಂದು ಫ್ರೀ!”- ಹೀಗೆ ಹತ್ತಾರು ಬಗೆಯ ಕೂಗುಗಳು ಕೇಳಿಬರುತ್ತಿದ್ದುದು ಯಾವುದೋ ನಗರದ ದೊಡ್ಡ ಮಾರುಕಟ್ಟೆಯಲ್ಲಲ್ಲ, ಬದಲಾಗಿ ಗುಡಗೇರಿಯ ನಾಗರಾಜ ನಾ. ಕುಲಕರ್ಣಿ ಆದರ್ಶ ಹಿರಿಯ ಪ್ರಾಥಮಿಕ ಶಾಲೆಯ ಮುಂಭಾಗದ ರಸ್ತೆಯಲ್ಲಿ! ​ಇಲ್ಲಿ ಮಕ್ಕಳೇ ವ್ಯಾಪಾರಸ್ಥರು, ಗ್ರಾಮಸ್ಥರೇ ಗ್ರಾಹಕರು. ಶಾಲೆಯ ವತಿಯಿಂದ ಏರ್ಪಡಿಸಲಾಗಿದ್ದ ಈ ‘ಮಕ್ಕಳ ಸಂತೆ’ ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ದಾರಿಯಲ್ಲಿ…

Read More