ಧಾರವಾಡ: ಸಾಹಿತ್ಯ ಮನುಷ್ಯತ್ವದ ಘನತೆ ಎತ್ತಿ ಹಿಡಿಯಲಿ – ಪ್ರೊ. ರಾಘವೇಂದ್ರ ಪಾಟೀಲ
ಧಾರವಾಡ: ಸಾಹಿತ್ಯ ಎಂಬುದು ಕೇವಲ ಅಕ್ಷರಗಳ ಜೋಡಣೆಯಲ್ಲ, ಅದು ಮನುಷ್ಯತ್ವದ ಘನತೆಯನ್ನು ಎತ್ತಿ ಹಿಡಿಯುವ ಶಕ್ತಿಯಾಗಬೇಕು. ಕರುಣೆ ಮತ್ತು ಕ್ರೌರ್ಯಗಳ ನಡುವಿನ ಸಂಘರ್ಷದಲ್ಲಿ ಯಾವಾಗಲೂ ಕಾರುಣ್ಯವೇ ಜಯಗಳಿಸಬೇಕು ಎಂದು ಖ್ಯಾತ ಸಾಹಿತಿ ಪ್ರೊ. ರಾಘವೇಂದ್ರ ಪಾಟೀಲರು ಆಶಯ ವ್ಯಕ್ತಪಡಿಸಿದರು. ನಗರದ ಅನುಷ್ಕಾ ಪ್ರಕಾಶನ ಹಾಗೂ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ನಾಲ್ಕು ಪ್ರಮುಖ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸಾಹಿತ್ಯವು ಒಂದು ಉನ್ನತ ಕಲೆಯಾಗಿದ್ದು, ಅದು…

